Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
January 13 Horoscope: ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಸಿಲಗಲಿದೆ ಫಲಿತಾಂಶ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 13 (January 13 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಸಮಸ್ಯೆಗಳಿಂದ ತುಂಬಿರಲಿದೆ. ಏಕೆಂದರೆ ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿರುವುದು ಈ ಸಮಸ್ಯೆಗೆ ಕಾರಣವಾಗಬಹುದು. ಹಾಗೆ ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮಿಶ್ರಫಲವಿದೆ. ನೀವು ಯಾರಿಂದಾದರು ಹಣ ಪಡೆಯುವ ಸಲುವಾಗಿ ಪ್ರಯಾಣ ಮಾಡುವುದಾದರೆ ನಿಮಗೆ ಹಲವು ಸಮಸ್ಯೆಗಳು ಬರಬಹುದು. ಪ್ರೇಮಿಗಳಿಗೆ ಇಂದು ನೋವಿನ ದಿನವಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಈ ದಿನವು ಉತ್ತಮವಾಗಿರಲಿದೆ. ಟ್ಯಾಕ್ಟಿ ಚಾಲಕರು, ಬಾಡಿಗೆದಾರರು ಎಚ್ಚರಿಕೆಯಿಂದ ಇರಬೇಕಿದೆ. ದೊಡ್ಡ ವ್ಯವಹಾರದಲ್ಲಿ ಆಸಕ್ತಿ ಇರಲಿದೆ. ಆಪ್ತರಿಗೆ ಸಾಲ ನೀಡಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಹಲವು ವಿಚಾರವನ್ನು ಆಪ್ತರೊಬ್ಬರ ಬಳಿ ಹೇಳಿಕೊಳ್ಳುವಿರಿ. ವಾಹನ ವಿಚಾರದಲ್ಲಿದ್ದ ಗೊಂದಲ ದೂರಾಗಲಿದೆ. ಗೃಹಿಣಿಯರಲ್ಲಿ ಈ ದಿನವು ಖರ್ಚುಗಳಿಂದ ತುಂಬಿರಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಇರಬಹುದು.
ಸಿಂಹ ರಾಶಿ
ವ್ಯಾಪಾರಿಗಳಿಗೆ ಲಾಭದಾಯಕ ದಿನ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ಕೈ ಸೇರಬೇಕಿದ್ದ ಮೊತ್ತವೊಂದು ಇಂದು ಸೇರಬಹುದು. ಸಂಬಂಧಿಕರ ವಿಚಾರದಿಂದ ನೀವು ಇಕ್ಕಟ್ಟಿನ ಸ್ಥಿತಿ ಅನುಭವಿಸಬಹುದು. ಯಾರಿಂದಾದರು ನೋವಿನ ಮಾತುಗಳ ಕೇಳಬಹುದು.
ಕನ್ಯಾ ರಾಶಿ
ಇಂದು ನಿಮಗೆ ಪ್ರಯಾಣ ಮಾಡಬೇಕಾದ ದಿನ. ನಿಮ್ಮ ಆರ್ಥಿಕ ವಿಚಾರದಲ್ಲಿ ಸುಧಾರಣೆ ಇದೆ. ಆಪ್ತರೊಬ್ಬರಿಗೆ ನೀವು ಸಹಾಯ ಮಾಡುವಿರಿ. ಪ್ರಯಾಣ ಮಾಡಬೇಕಾಗುತ್ತದೆ. ಉದ್ಯೋಗ ಸಂಬಂಧಿತ ವಿವಾರದಲ್ಲಿ ಒತ್ತಡದ ದಿನವಾಗುತ್ತಿದೆ. ಮನೆಯ ವಿಚಾರದಲ್ಲಿ ನಿಮಗೆ ಅಶಾಂತಿ ಇರಬಹುದು.
ತುಲಾ ರಾಶಿ
ಇಂದು ನಿಮಗೆ ವ್ಯವಹಾರ ವಿಷಯಗಳಲ್ಲಿ ತೊಡಕುಗಳಿಂದ ತುಂಬಿದ ದಿನವಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ನೀವು ನಿಮ್ಮ ಚಿಕ್ಕ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ಯಬಹುದು, ಆದರೆ ನೀವು ಅವರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
ವೃಶ್ಚಿಕ ರಾಶಿ
ಆದಾಯದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಅಪಾಯಕಾರಿ ಕೆಲಸಗಳಲ್ಲಿ ಭಾಗಿಯಾಗುವ ಮಂದಿ ಇಂದು ಎಚ್ಚರಿಕೆಯಿಂದ ಇರಬೇಕಿದೆ.
ಧನು ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುವ ದಿನ. ಕುಟುಂಬ ವಿಚಾರದಲ್ಲಿ ಇದ್ದಂತಹ ಆರ್ಥಿಕ ಮನಸ್ತಾಪಗಳು ದೂರಾಗಲಿದೆ. ನಿಮ್ಮ ಕೆಲಸದಲ್ಲಿ ಹೆಚ್ಚು ಶ್ರಮ ಹಾಕುವಿರಿ. ದಿನದ ಅಂತ್ಯದಲ್ಲಿ ನೆಮ್ಮದಿ ಇದೆ. ನಿಮ್ಮ ಆಸೆಗಳಲ್ಲಿ ಒಂದನ್ನು ಈಡೇರಿಸಲು ನೀವು ತುಂಬಾ ಸಂತೋಷಪಡುತ್ತೀರಿ.
ಮಕರ ರಾಶಿ
ಇಂದು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವ ದಿನವಾಗಿರುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳಿಂದ ಪ್ರಭಾವಿತರಾಗುವುದನ್ನು ತಪ್ಪಿಸಿ. ನಿಮಗೆ ಬಾಕಿ ಇರುವ ಕೆಲಸವಿದ್ದರೆ, ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ದಾಂಪತ್ಯದಲ್ಲಿ ಮನಸ್ತಾಪ ಬರಬಹುದು.
ಕುಂಭ ರಾಶಿ
ಇಂದು ನೀವು ಜವಾಬ್ದಾರಿಯುತವಾಗಿ ಕೆಲಸ ಮಾಡುವ ದಿನವಾಗಿರುತ್ತದೆ. ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ತಾಯಿಯ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.
ಮೀನ ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ಮಕ್ಕಳ ವಿಚಾರದಲ್ಲಿದ್ದ ಚಿಂತೆಯೊಂದು ದೂರಾಗಲಿದೆ. ನಿಮ್ಮ ಅನಾರೋಗ್ಯ ಸಮಸ್ಯೆಗಳು ಕೂಡ ಸುಧಾರಣೆ ಕಾಣಲಿವೆ. ಮನೆ ವಿಚಾರದಲ್ಲಿ ಮಾಡುವ ಖರ್ಚು ನಿಮಗೆ ನೆಮ್ಮದಿ ತರಲಿದೆ. ಯಾರಿಂದಾದರು ಪಡೆದ ವಸ್ತುವನ್ನು ಮರಳಿಸುವಿರಿ.



Click it and Unblock the Notifications











