Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
January 12 Horoscope: ಸೋಮವಾರವು ಆಪ್ತರಿಂದ ಹಣಸಿಗುವ ವಾರ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 12 (January 12 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಪ್ರಯಾಣ ಮಾಡುವ ದಿನ. ಕೆಲಸದ ವಿಚಾರವಾಗಿ ನೀವು ದೂರ ಪ್ರಯಾಣಗಳ ಮಾಡುವಿರಿ. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸಿನ ಅಡ್ಡಿ ನೋಡಬಹುದು. ಯಾರಿಂದಾದರು ಬರಬೇಕಿದ್ದ ಹಣ ಕೈ ಸೇರಲಿದ. ನಿಮ್ಮ ಅನುಭವದ ಮೂಲಕ ಕಷ್ಟದ ವಿಚಾರವನ್ನು ಬಗೆಹರಿಸುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸದಲ್ಲಿ ಉತ್ತಮ ಪ್ರತಿಫಲ ನೋಡುವಿರಿ. ಬಹುದಿನದಿಂದ ನೀವು ಮಾಡದೆ ಉಳಿಸಿಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸುವಿರಿ. ಯಾರಿಗೂ ಹಣಕಾಸಿನ ನೆರವು ನೀಡಲು ಮುಂದಾಗದೆ ಇರುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ಆಪ್ತರೊಬ್ಬರ ಕೆಲಸವಾಗಿ ನೀವು ಪ್ರಯಾಣ ಮಾಡುವಿರಿ. ಮನೆಗಾಗಿ ಖರ್ಚು ಮಾಡುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡಬೇಕಾಗುತ್ತದೆ. ದೊಡ್ಡ ಒಪ್ಪಂದಗಳ ಕುರಿತಾಗಿ ಇಂದು ಮಾತುಕತೆ ನಡೆಯಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ. ನಿಮ್ಮ ಪ್ರಯಾಣಗಳು ಸುಖಕರವಾಗಿರಲಿದೆ. ಪ್ರೇಮ, ದಾಂಪತ್ಯ ವಿಚಾರವಾಗಿ ಇಂದು ಶುಭ ಶಕುನದ ದಿನ. ಹಣಕಾಸಿನ ವಿಚಾರ, ವ್ಯವಹಾರದ ದೃಷ್ಟಿಯಿಂದ ಸಹ ಮಿಶ್ರಫಲ ಪಡೆಯುವ ಸಮಯ. ದಿನದ ಅಂತ್ಯದಲ್ಲಿ ಅನಾರೋಗ್ಯ ಕಾಡಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಒತ್ತಡದಿಂದ ಕಳೆಯಬಹುದು. ಪ್ರೇಮಿಗಳು, ದಂಪತಿ ಈ ಸಮಯದಲ್ಲಿ ಪ್ರಯಾಣಗಳ ಮಾಡುತ್ತಾರೆ. ದೊಡ್ಡ ಕೆಲಸಗಳ ಮಾಡಿ ಮುಗಿಸುವಿರಿ. ನಿಮ್ಮಿಂದಾಗಿ ಹಣಕಾಸಿನ ಸಮಸ್ಯೆಯೊಂದು ಬಗೆಹರಿಯಲಿದೆ. ಯಾರಿಗಾದರು ಹಣ ನೀಡುವುದನ್ನು ತಪ್ಪಿಸಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಿರಲಿದೆ. ಯಾರಿಗಾದರು ಕೆಲಸ ಮಾಡಿ ಕೊಡುವುದಾಗಿ ಮಾತು ಕೊಟ್ಟಿದ್ದರೆ ಈ ದಿನ ಮಾಡಬೇಕಾಗುತ್ತದೆ. ಕುಟುಂಬ ವಿಚಾರದಲ್ಲಿ ಒತ್ತಡದ ದಿನವಾಗಬಹುದು. ದಿನದ ಅಂತ್ಯದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಬಹುದಿನದ ಕೆಲಸವು ಬಾಕಿ ಉಳಿದಿದ್ದರೆ ಇಂದು ಸಂಪೂರ್ಣ ಮಾಡುವಿರಿ. ಅನೇಕರಿಗೆ ಈ ದಿನವು ಪ್ರಯಾಣ ಮಾಡಬೇಕಾದ ದಿನವಾಗಿರಲಿದೆ. ನಿಮಗಾಗಿ ವಸ್ತುವೊಂದನ್ನು ಖರೀದಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನೀವು ಬಹಳ ದಿನದಿಂದ ಬಯಸಿದ ಕೆಲಸ ಸಮಯದಲ್ಲಿ ನಡೆಯದೆ ಇರಬಹುದು. ವಾಹನ ಸಂಬಂಧವಾಗಿ ಎಚ್ಚರಿಕೆ ವಹಿಸಿ. ಹಣಕಾಸು ವಿವಾರದಲ್ಲಿ ಆದಾಯದಷ್ಟೇ ಖರ್ಚು ಸಹ ಇದೆ.
ಧನು ರಾಶಿ
ಧನು ರಾಶಿ ಜನರಲ್ಲಿ ಹಣಕಾಸಿನ ವಿಚಾರವಾಗಿ ಇಂದು ದೊಡ್ಡ ಶುಭವಿದೆ. ಬಹಳ ದಿನದಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವಿರಿ, ಇದು ನಿಮಗೆ ಮಾನಸಿಕ ನೆಮ್ಮದಿ ತರಲಿದೆ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಬಹಳ ಅನುಕೂಲಕರ ದಿನ. ನೀವು ಆಸ್ಪತ್ರೆ ಸಂಬಂಧವಾಗಿ ಖರ್ಚುಗಳ ಮಾಡಿದ್ದರೆ ಆ ವಿಚಾರದಲ್ಲಿ ಶುಭ ಸುದ್ದಿ ಕೇಳುವಿರಿ. ಆಪ್ತರೊಬ್ಬರ ಭೇಟಿಗೆ ಮುಂದಾಗಬಹುದು. ನಿಮ್ಮ ಖರ್ಚುಗಳ ಮೇಲೆ ನಿಗಾ ಇಡಿ. ವಾಹನ ಸಂಬಂಧವಾಗಿ ತರಾತುರಿಯ ನಿರ್ಧಾರಕ್ಕೆ ಮುಂದಾಗಬೇಡಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಮಿಶ್ರಫಲವಿದೆ. ಗೃಹಿಣಿಯರು ಖರ್ಚು ಮಾಡಬೇಕಾದ ದಿನ. ನೀವು ಯಾರೊಂದಿಗಾದರು ಕಲಹದಲ್ಲಿ ತೊಡಗಬಹುದು. ಸ್ನೇಹಿತರ ವಿಚಾರದಲ್ಲಿ ನಿಮಗೆ ನೋವು ಇರಬಹುದು. ನಿಮ್ಮ ಹಳೆಯ ಅನಾರೋಗ್ಯವೊಂದು ಮತ್ತೆ ಚಿಂತೆ ತರಿಸಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನವು ಸಮಸ್ಯೆಗಳ ತರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ನೋವಿನ ಸಮಯ. ಸಾಲದ ಪ್ರಮಾಣ ಮತ್ತೆ ಏರಿಕೆಯಾಗಬಹುದು. ಯಾರೊಂದಿಗಾದರು ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಸಹ ಮೂಡಬಹುದು.



Click it and Unblock the Notifications
