Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನವರಿ 11 ದಿನ ಭವಿಷ್ಯ: ಕನ್ಯಾ ರಾಶಿಯವರಿಗೆ ಅದ್ಭುತವಾದ ದಿನ, ಯವ ರಾಶಿಗೆ ಹೇಗಿದೆ ಈ ದಿನ?
ಶುಭ ದಿನ, ಶನಿವಾರದ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನೀವು ವೃತ್ತಿ ಬದುಕಿನ ಕಡೆಗೆ ತುಂಬಾನೇ ಗಮನಹರಿಸಬೇಕು, ಇನ್ನು ಕುಟುಂಬ ಜೀವನದಲ್ಲಿಯೂ ಕೆಲ ಸಮಸ್ಯೆಗಳಿರಬಹುದು, ಆದರೆ ಎಮೋಷನಲ್ ಫೂಲ್ ರೀತಿ ವರ್ತಿಸಬೇಡಿ ಎಂದು ಸಲಹೆ ನೀಡಲಾಗುವುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಆಲೋಚಿಸಿ ತೆಗೆದುಕೊಳ್ಳಿ. ಮನೆಯ ಸಮಸ್ಯೆ ಕೆಲಸದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆವಹಿಸಿ.

ವೃಷಭ ರಾಶಿ
ಈ ದಿನ ಸವಾಲುಗಳಿರಬಹುದು, ಪ್ರತಿಕೂಲ ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸಿ, ಕೆಲಸದ ಜಾಗದಲ್ಲಿ ಹೆಚ್ಚು ಜಾಗ್ರತೆವಹಿಸಿ. ಈ ದಿನ ಹಣದ ಬಗ್ಗೆ ಜಾಗ್ರತೆವಹಿಸಿ, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.
ಮಿಥುನ ರಾಶಿ
ಈ ದಿನ ನೀವಾಡುವ ಮಾತಿನ ಕಡೆಗೆ ಗಮನಹರಿಸಬೇಕು, ನಿಮ್ಮ ಮಾತುಗಳು ಅನಗ್ಯತ ಸಮಸ್ಯೆ ಉಂಟು ಮಾಡದಂತೆ ಜಾಗ್ರತೆವಹಿಸಿ. ನೀವು ಈ ದಿನ ಆತುರದ ಬುದ್ಧಿಗಿಂತ ತಾಳ್ಮೆಯಿಂದ ವರ್ತಿಸಿ. ಮನೆಯ ವಾತಾವರಣ ಶಾಂತವಾಗಿಡಲು ನೀವು ನಿಮ್ಮ ಕೋಪ ನಿಯಂತ್ರಣ ಮಾಡುವುದು ಒಳ್ಳೆಯದು ಎಂಬ ಸಲಹೆ ನೀಡಲಾಗುವುದು.
ಕರ್ಕ ರಾಶಿ
ನೀವು ಈ ದಿನ ಏನು ಮುಖ್ಯವೋ ಅದರತ್ತ ಹೆಚ್ಚು ಗಮನಹರಿಸುತ್ತೀರಿ, ಇದರಿಂದ ನೀವು ಉತ್ತಮ ಪ್ರಯೋಜನ ಪಡೆಯುವುದರಿಂದ ಖುಷಿಯಾಗುತ್ತೀರಿ. ಹಣದ ವಿಷಯದಲ್ಲಿ ಈ ದಿನ ಶುಭ, ಮನೆಯ ವಾತಾವರಣ ಕೂಡ ಚೆನ್ನಾಗಿರಲಿದೆ, ಹೀಗಾಗಿ ಖುಷಿ ಖುಷಿಯಿಂದ ದಿನವನ್ನು ಕಳೆಯಲು ಸಾಧ್ಯವಾಗುವುದು.
ಸಿಂಹ ರಾಶಿ
ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ, ನೀವು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸಿ, ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆರ್ಥಿಕವಾಗಿ ಕೂಡ ಈ ದಿನ ನಿಮಗೆ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಈ ಹಿಂದೆ ಕೆಲ ನಷ್ಟ ಉಂಟಾಗಿದ್ದರೆ ಅದನ್ನುಸರಿಪಡಿಸಲು ಸಾಧ್ಯವಾಗುವುದು. ಸೋಲು ಮರೆಯುವಂಥ ಜಯ ನಿಮಗೆ ಸಿಗಲಿದೆ, ಹಾಗಾಗಿ ಈ ದಿನ ನಿಮಗೆ ತುಂಬಾನೇ ಶುಭವಾಗಿದೆ.
ತುಲಾ ರಾಶಿ
ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಂಡು ಹೋಗಲು ಸಾಧ್ಯವಾಗುವುದು. ನಿಮ್ಮ ಕೆಲಸವನ್ನು ಆತ್ಮವಿಶ್ವಾಸದಿಂದ ಮ ಮಾಡುತ್ತೀರಿ, ಅಲ್ಲದೆ ಉತ್ತಮ ಫಲಿತಾಂಶ ಕೂಡ ಸಿಗಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಈ ದಿನ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುವುದು.
ಧನು ರಾಶಿ
ವೃತ್ತಿ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು, ನೀವು ನಿಮ್ಮ ಗುರಿಯತ್ತ ಗಮನಹರಿಸಬೇಕು, ನಿಮ್ಮ ಮೇಲಿರುವ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ಖಂಡಿತ ಉತ್ತಮ ಪ್ರತಿಫಲ ಸಿಗಲಿದೆ.
ಮಕರ ರಾಶಿ
ಆರ್ಥಿಕವಾಗಿ ತುಂಬಾ ಚೆನ್ನಾಗಿದೆ, ಅಲ್ಲದೆ ನೀವು ಹೂಡಿಕೆ ಮಾಡಲು ಬಯಸಿದ್ದರೆ ಈ ದಿನ ನಿಮಗೆ ಉತ್ತಮವಾಗಿದೆ. ಆದರೆ ಹೂಡಿಕೆಗೆ ಮುನ್ನ ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಮಾಡಿ. ವೃತ್ತಿ ಬದುಕು ಚೆನ್ನಾಗಿರಲಿದೆ. ಕುಟುಂಬ ಜೀವನದಲ್ಲಿ ಸಂತೋಷ, ನೆಮ್ಮದಿ ಇರಲಿದೆ.
ಕುಂಭ ರಾಶಿ
ಈ ದಿನ ಅನುಕೂಲಕರವಾಗಿದೆ, ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ವೃತ್ತಿ ಬದುಕು ಕೂಡ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ.
ಮೀನ ರಾಶಿ
ಈ ದಿನ ನಿಮಗೆ ತುಂಬಾ ಶುಭವಾಗಿರಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ, ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ. ಕೆಲಸಕ್ಕಾಗಿ ಪ್ರಯತ್ನ ಮಾಡಿದ್ದರೆ ಈ ದಿನ ನಿಮಗೆ ಅನುಕೂಲಕರವಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications




