January 11 Horoscope: ಈ ಭಾನುವಾರ ಯಾರಿಗೆಲ್ಲಾ ಧನಲಾಭ?

ವೈದಿಕ ಶಾಸ್ತ್ರದ ಪ್ರಕಾರ ಜನವರಿ 11 (January 11 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲ ತರಬಹುದು. ನಿಮ್ಮ ಕೆಲಸಗಳನ್ನು ಬಹಳ ಪ್ರಾಮಾಣಿಕವಾಗಿ ಮಾಡಿ ಮುಗಿಸುವಿರಿ. ಈ ದಿನ ಪ್ರಯಾಣಗಳ ಮಾಡುವುದು ನಿಮ್ಮ ಖರ್ಚು ಹೆಚ್ಚಾಗಲು ಕಾರಣವಾಗಲಿದೆ. ನಿಮ್ಮ ಹಣಕಾಸಿನ ವಿಚಾರವು ಚಿಂತೆಗೂ ಕಾರಣವಾಗಲಿದೆ.

ವೃಷಭ ರಾಶಿ

ವೃಷಭ ‍ರಾಶಿ ಜನರಲ್ಲಿ ಈ ದಿನ ದೊಡ್ಡ ಲಾಭ ತರಲಿದೆ, ಬಹಳ ಸಮಯದಿಂದ ನೀವು ಯಾವುದಾದರು ಕೆಲಸಕ್ಕೆ ಹಣ ಮೀಸಲಿಟ್ಟಿದ್ದರೆ ಅದರಿಂದ ಲಾಭ ಪಡೆಯಬಹುದು. ವಾಹನ ಸಂಬಂಧಿ ವಿಚಾರದಲ್ಲಿ ಶುಭವಿದೆ. ಆಪ್ತರೊಬ್ಬರಿಂದ ನಿಮಗೆ ಹಣ ಸಹಾಯದ ನಿರೀಕ್ಷೆ ಇಟ್ಟುಕೊಳ್ಳಬಹುದು.

January-11-2025-daily-horoscope-

ಮಿಥುನ ರಾಶಿ

ಮಿಥುನ ರಾಶಿ ಜನರಲ್ಲಿ ಈ ದಿನ ಮಿಶ್ರಫಲವಿದೆ. ನಿಮ್ಮಿಂದಾಗಿ ಕುಟುಂಬಸ್ಥರ ಕೆಲಸವು ಸಲೀಸಾಗಲಿದೆ. ದೇವಾಲಯ ಸಂಬಂಧಿತ ಖರ್ಚುಗಳಿವೆ. ಬಹು ಸಮಯದಿಂದ ಖರೀದಿಸಬೇಕಿದ್ದ ವಸ್ತುವೊಂದನ್ನು ಖರೀದಿಸಲಿದ್ದೀರಿ.

ಕರ್ಕ ರಾಶಿ

ಕರ್ಕ ರಾಶಿ ಜನರಿಗೆ ಇಂದು ಉತ್ತಮ ಸೌಲಭ್ಯಗಳ ಪಡೆಯವ ದಿನವಾಗುತ್ತಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಅನೇಕರಿಗೆ ನೀವು ಕೆಲಸದಲ್ಲಿ ಸಹಾಯ ಮಾಡುವಿರಿ. ಹೊಸ ಆದಾಯ ಪಡೆಯುವ ಕುರಿತಾಗಿ ನೀವು ಆಲೋಚಿಸಬಹುದು.

ಸಿಂಹ ರಾಶಿ

ಸಿಂಹ ರಾಶಿ ಜನರಲ್ಲಿ ಸಮಸ್ಯೆಗಳಿವೆ. ಈ ದಿನ ನಿಮ್ಮ ಮನಸ್ಸಿಗೆ ನೋವುಂಟಾಗುವ ಘಟನೆಗಳು ನಡೆಯಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡದಲ್ಲಿ ದಿನ ಕಳೆಯುವಿರಿ. ನಿಮಗೆ ಬರಬೇಕಿದ್ದ ಹಣ ಮತ್ತಷ್ಟು ಮುಂದಕ್ಕೆ ಹೋಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ ಜನರಿಗೆ ಮಿಶ್ರಫಲ. ಆದಾಯಕ್ಕಿಂತ ಹೆಚ್ಚಿನ ಖರ್ಚುಗಳನ್ನು ತಡೆಯುವುದು ಉತ್ತಮ. ಪ್ರಯಾಣಗಳ ಮಾಡುವಾಗ ನಿಮ್ಮ ವಸ್ತುಗಳ ಕುರಿತು ಎಚ್ಚರ ವಹಿಸಿ. ನಿಮ್ಮ ಹಲವು ವಿಚಾರಗಳನ್ನು ಆಪ್ತರೊಬ್ಬರ ಬಳಿ ಹೇಳಿಕೊಳ್ಳುವಿರಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನವು ಬಹಳ ಅನುಕೂಲ ತರಲಿದೆ. ನೀವು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವಿರಿ. ಯಾರಿಗೂ ಸಾಲ ನೀಡಲು ಇಂದು ಮುಂದಾಗಬೇಡಿ. ದಾಂಪತ್ಯ ವಿಚಾರದಲ್ಲಿ ನಿಮಗೆ ಈ ದಿನ ಮಧುರವಾಗಿರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಈ ದಿನವು ಹಲವು ಅನುಕೂಲ ತರಲಿದೆ. ನಿಮ್ಮ ಖರ್ಚುಗಳು ಕಡಿಮೆಯಾಗಲಿದೆ ಮನೆಯಲ್ಲಿ ಶಾಂತಿಯುತ ವಾತಾವರಣ ನೋಡಬಹುದು. ನಿಮ್ಮ ಪ್ರಯಾಣಗಳು ಸಹ ಸುಖಕರವಾಗಿರಲಿದೆ. ವಾಹನ ವಿಚಾರದಲ್ಲಿ ಲಾಭವಿದೆ.

ಧನು ರಾಶಿ

ಧನು ರಾಶಿ ಜನರಲ್ಲಿ ಇಂದು ವ್ಯವಹಾರಿಕವಾಗಿ ಲಾಭವಾಗುವ ದಿನ. ಸಂಬಂಧಿಕರೊಬ್ಬರ ಭೇಟಿಗೆ ನೀವು ತೆರಳಬಹುದು. ಮಕ್ಕಳ ಆರೋಗ್ಯದ ವಿಚಾರದಲ್ಲಿ ನಿರ್ಳಕ್ಷ್ಯ ಮಾಡಬೇಡಿ. ಹಣಕಾಸು ಕುರಿತಂತೆ ನಿಮ್ಮ ನಿರ್ಧಾರವು ಬೇರೆಯವರಿಗೆ ಬೇಸರ ತರಿಸಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನವು ಅನುಕೂಲಕರ ನಿಮ್ಮ ಹಲವು ಕೆಲಸವನ್ನು ಇಂದು ಮಾಡಿ ಮುಗಿಸುವ ಸೂಕ್ತ ಸಮಯ. ಮನೆಯಲ್ಲಿ ಶ್ರಮದಾಯಕ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಆಪ್ತರೊಬ್ಬರ ಭೇಟಿ ಸಂಭವವಿದೆ. ಕುಟುಂಬಸ್ಥರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳಬಹುದು.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಬಳಿ ಇರುವ ವಸ್ತುವೊಂದು ಕೆಟ್ಟು ಹೋಗಬಹುದು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವಿಸುವ ಸೂಚನೆ ಇದೆ. ಯಾರಿಗೂ ಅಮೂಲ್ಯ ವಸ್ತುಗಳನ್ನು ನೀಡಬೇಡಿ. ಪ್ರಯಾಣಗಳ ಮಾಡುವಿರಿ.

ಮೀನ ರಾಶಿ

ಮೀನ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಈ ದಿನ ಬಹಳ ಅನುಕೂಲಕರ. ನಿಮ್ಮ ಎಲ್ಲಾ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ಉದರ ಸಂಬಂಧಿತ ಸಮಸ್ಯೆ ಕಾಡಬಹುದು. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಲಿದೆ.

English summary

January-11-2025-daily-horoscope-prediction-for-12-zodiac-signs-in-kannada

Here is Horoscope Today, 11 January Horoscope: Daily Horoscope Prediction For 12 Zodiac signs In Kannada
Story first published: Sunday, January 11, 2026, 5:00 [IST]
X
Desktop Bottom Promotion