ದಿನ ಭವಿಷ್ಯ: ಜನವರಿ 10 ಯಾವ ರಾಶಿಯವರಿಗೆ ಶುಭ ದಿನವಾಗಿದೆ ನೋಡಿ..!

ವೈದಿಕಶಾಸ್ತ್ರದ ಪ್ರಕಾರ ಜನವರಿ 10ರಂದು ನಿಮ್ಮ ದ್ವಾದಶ ರಾಶಿಗಳಲ್ಲಿ ಯಾವ ರೀತಿಯ ಲಾಭಗಳಿವೆ ನೋಡಿ.

ಮೇಷ ರಾಶಿ

ಹಣಕಾಸು ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲಿತಾಂಶ ಇರಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ನೆಲೆಸಬಹುದು. ಸ್ನೇಹಿತರಿಂದ, ಸಂಬಂಧಿಕರಿಗೆ ನಿಮಗೆ ನೋವಾಗಬಹುದು. ವಾಹನ ಚಾಲಕರು ಎಚ್ಚರ.

January 10 Daily Horoscope Prediction For 12 Zodiac Signs In Kannada

ವೃಷಭ ರಾಶಿ

ಇಂದು ನಿಮ್ಮ ಎಲ್ಲಾ ಕೆಲಸಗಳನ್ನು ಯೋಜನೆಯ ಪ್ರಕಾರ ಪೂರ್ಣಗೊಳಿಸಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ನಿಮ್ಮ ಆದಾಯ ಹೆಚ್ಚಾಗಬಹುದು. ವೈವಾಹಿಕ ಜೀವನದಲ್ಲಿ ಪ್ರೀತಿ ಇರಲಿದೆ, ಹಾಗೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ವ್ಯಪಾರಿಗಳಿಗೆ ಒಳ್ಳೆಯ ದಿನವಾಗದೆ ಇರಬಹುದು.

ಮಿಥುನ ರಾಶಿ

ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ದುಬಾರಿ ದಿನವಾಗಲಿದೆ. ಅನಗತ್ಯ ಖರ್ಚು ನಿಮ್ಮನ್ನೇ ಹುಡುಕಿ ಬರಬಹುದು. ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗ ಬದಲಿಸುವ ನಿಮ್ಮ ಕನಸಿದ್ದರೆ ಅದಕ್ಕೆ ಪೂರಕ ವಾತಾವರಣ ಇರಲಿದೆ. ಯಾರಿಂದಾದರು ಹಣಕಾಸು ನೆರವು ಕೇಳಿದ್ದರೆ ಇಂದು ಈ ವ್ಯವಹಾರ ಸುಗಮವಾಗಲಿದೆ.

ಕರ್ಕ ರಾಶಿ

ಈ ದಿನ ನಿಮ್ಮ ಪ್ರಮುಖ ಕೆಲಸ ಕಾರ್ಯದಲ್ಲಿ ಅಡೆತಡೆ ಉಂಟಾಗಬಹುದು. ಇದು ನಿಮ್ಮಲ್ಲಿ ಅಶಾಂತಿಗೆ ಕಾರಣವಾಗಹುದು. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರಯಾಣದಲ್ಲಿ ಈ ದಿನ ಕಳೆಯಬೇಕಾಗಬಹುದು. ಊಟ, ಉಪಹಾರದ ವಿಚಾರದ ಕಡೆ ಗಮನವಿಡಿ. ಮನೆಯಲ್ಲಿ ಹಿರಿಯರು ಹೇಳಿದ ವಿಚಾರ ನೆನಪಿನಲ್ಲಿಡಿ, ಆರೋಗ್ಯ ಹದಗೆಡಬಹುದು.

ಸಿಂಹ ರಾಶಿ

ಇಂದು ವ್ಯಾಪಾರಿಗಳು ಯಾವುದೇ ದೊಡ್ಡ ಮೊತ್ತವನ್ನು ಎಲ್ಲಿಯೂ ಹೂಡಿಕೆ ಮಾಡಲು ಮುಂದಾಗಬೇಡಿ. ಅತ್ಯಮೂಲ್ಯ ವಸ್ತುವಿಗೆ ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು, ಮುಂದಿನ ಭವಿಷ್ಯದ ದೃಷ್ಟಿಯಿಂದ ನೀವು ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂಭವವಿದೆ. ಮಕ್ಕಳ ಆರೋಗ್ಯದ ಮೇಲೆ ಗಮನವಿಡಿ.

ಕನ್ಯಾ ರಾಶಿ

ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡಿ. ಬೇರೆ ಉದ್ಯೋಗ ಹುಡುಕುತ್ತಿದ್ದವರಿಗೆ ಒಳ್ಳೆಯ ದಿನವಾಗಲಿದೆ. ಮಾನಸಿಕ ನೆಮ್ಮದಿ ಸಿಗಲಿದೆ. ದೂರ ಪ್ರಯಾಣ ಮಾಡಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ಸಣ್ಣ ಮನಸ್ಥಾಪ ದೊಡ್ಡದಾಗಬಹುದು, ಬಗೆಹರಿಸಿಕೊಳ್ಳುವುದು ಉತ್ತಮ.

ತುಲಾ ರಾಶಿ

ಕುಟುಂಬದಲ್ಲಿ ಸಮಸ್ಯೆಯಿದ್ದರೆ ಅದು ಬಗೆಹರಿಯುವುದರಿಂದ ಮನಸ್ಸಿಗೆ ನೆಮ್ಮದಿ ಇರಲಿದೆ. ಅವಿವಾಹಿತರಲ್ಲಿ ಹೊಸದೊಂದು ಆರಂಭ ಸಿಗಬಹುದು. ಈ ದಿನ ಗೃಹಿಣಿಯರಿಗೆ ಉತ್ತಮವಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಬಹುದು. ದಿನದ ಅಂತ್ಯದಲ್ಲಿ ಒತ್ತಡ, ಅಶಾಂತಿಗೆ ಒಳಗಾಗಬಹುದು.

ವೃಶ್ಚಿಕ ರಾಶಿ

ನೀವು ವ್ಯಾಪಾರಸ್ಥರಾಗಿದ್ದರೆ ಈ ದಿನ ಹಣಕಾಸು ವಿಚಾರದಲ್ಲಿ ಜಾಗೃತೆ ವಹಿಸಿ. ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಕಾಡಬಹುದು. ಮನೆಯಲ್ಲಿ ಒತ್ತಡ ಬೀರುವ ವಿಚಾರಗಳ ಕೇಳಬೇಕಾಗುತ್ತದೆ. ಹಳೆಯ ನಿಮ್ಮ ಕೆಲಸಗಳು ಪೂರ್ಣವಾಗಬಹುದು. ನಿಮ್ಮ ಬಯಕೆಯಂತೆ ಕೆಲವು ಕೆಲಸಗಳು ನಡೆಯಲಿದೆ.

ಧನು ರಾಶಿ

ಇಂದು ನಿಮ್ಮ ಕೆಲವು ಪ್ರಮುಖ ಕೆಲಸಗಳು ಮಧ್ಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಕೆಟ್ಟ ಘಟನೆಗಳಿಗೆ ನೀವಿಂದು ಸಾಕ್ಷಿಯಾಗಬಹುದು. ಅನಿರೀಕ್ಷಿತವಾಗಿ ಕೆಲವೊಂದು ಬದಲಾವಣೆಗಳು ಉಂಟಾಗಬಹುದು, ಅದು ಕೆಲಸದ ಸ್ಥಳ, ಮನೆಯಲ್ಲಿಯೂ ಆಗಿರಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಲಿದೆ.

ಮಕರ ರಾಶಿ

ಈ ದಿನ ನೀವು ಚಿಂತೆಯಲ್ಲಿಯೇ ಕಳೆಯಬೇಕಾಗಬಹುದು. ಒಂದಿಷ್ಟು ಕೆಲಸದ ಒತ್ತಡ ಹಾಗೆ ಕುಟುಂಬಸ್ಥರಲ್ಲಿನ ಮಾತುಗಳಿಗೆ ನೋವು ಉಂಟಾಗಬಹುದು. ದೇಹದಲ್ಲಿನ ಬದಲಾವಣೆ ಕುರಿತು ನಿರ್ಲಕ್ಷ್ಯ ಮಾಡಬೇಡಿ. ಅನಗತ್ಯ ಖರ್ಚು ಮಾಡಬೇಡಿ.

ಕುಂಭ ರಾಶಿ

ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆದರೂ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಕಾಗದ ಪತ್ರ, ಆಸ್ತಿ, ಕಾನೂನು, ಸರ್ಕಾರಿ ಕೆಲಸಗಳು ಇಂತಹ ವಿಚಾರದಲ್ಲಿ ಹಿನ್ನಡೆಯಾಗಬಹುದು. ದಿನದ ಅಂತ್ಯದ ವೇಳೆ ಶಾಂತಿ ನೆಲೆಸಲಿದೆ.

ಮೀನ ರಾಶಿ

ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಶ್ರಮಿಸುತ್ತಿದ್ದರೆ ಇಂದು ಅದಕ್ಕೆ ಪೂರಕವಾದ ವಿಚಾರಗಳು ನಿಮ್ಮ ಸುತ್ತ ನಡೆಯಲಿದೆ. ಉದ್ಯೋಗ ಬದಲಿಸುವ ಆಲೋಚನೆಯನ್ನು ಮುಂದಕ್ಕೆ ಹಾಕುವುದು ಉತ್ತಮ. ವೈವಾಹಿಕ ಬದುಕಿನಲ್ಲಿ ಚಿಕ್ಕ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರೋಗ್ಯದ ಕಡೆಗೆ ಗಮನಹರಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

January 10 Daily Horoscope: Prediction For 12 Zodiac Signs In Kannada

January 10 Daily Horoscope: Here is prediction for 12zodiac signs, read on... ಜನವರಿ 10ರ ದ್ವಾದಶ ರಾಶಿಗಳ ರಾಶಿಫಲ
Story first published: Friday, January 10, 2025, 5:30 [IST]
X
Desktop Bottom Promotion