Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
January 10 Horoscope: ಈ ಶನಿವಾರವು ನಿಮಗಿದೆ ಧನಲಾಭ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 10 (January 10 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ಶನಿವಾರದಂದು ಅಪರೂಪದ ಕೆಲಸಗಳಲ್ಲಿ ತೊಡಗುವಿರಿ. ನಿಮ್ಮ ಹಲವು ಹಣಕಾಸಿನ ಬೇಡಿಕೆಗನ್ನು ಈಡೇರಿಸಿಕೊಳ್ಳುವಿರಿ. ಅನೇಕರಿಗೆ ಈ ದಿನದಂದು ಅಮೂಲ್ಯ ವಸ್ತು ಕೈ ಸೇರಬಹುದು. ನಿಮ್ಮ ಪ್ರಯಾಣಗಳು ಸುಖಕರವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಗೃಹಿಣಿಯರಲ್ಲಿ ಇಂದು ಹಣಕಾಸು ಕುರಿತಾದ ಚಿಂತೆ ಇರಲಿದೆ. ನಿಮಗೆ ಬೇಕಾದ ಅಗತ್ಯ ವಸ್ತುವನ್ನು ಖರೀದಿಸಲು ನೀವು ಪ್ರಯಾಣಗಳ ಮಾಡುವಿರಿ. ಆಪ್ತರಿಗೆ ಹಣ ನೀಡುವ ಮುನ್ನ ಆಲೋಚಿಸಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನ ಸಮಸ್ಯೆಗಳ ತರಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಅಡ್ಡಿಗಳು ಎದುರಾಗುತ್ತದೆ. ನಿಮ್ಮ ಖರ್ಚುಗಳನ್ನು ನಿಭಾಯಿಸುವುದು ಬಹಳ ಉತ್ತಮ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡಕ್ಕೆ ನೀವು ಸಿಲುಕಬಹುದು. ಯಾರೊಂದಿಗೂ ಅನಗತ್ಯ ಚರ್ಚೆಗಳಲ್ಲಿ ಭಾಗಿಯಾಗಬೇಡಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನ ಸವಾಲುಗಳಿಂದ ತುಂಬಿರಲಿದೆ. ಈ ದಿನ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಖರ್ಚುಗಳನ್ನು ಕಡಿಮೆ ಮಾಡುವತ್ತ ಗಮನವಿಡಿ. ಬಹಳ ಸಮಯದಿಂದ ಮುಗಿಯಬೇಕಿದ್ದ ಬಾಕಿ ಕೆಲಸವನ್ನು ಇಂದು ಮಾಡಿ ಮುಗಿಸುವಿರಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಮಿಶ್ರಫಲದ ದಿನವಾಗುತ್ತಿದೆ. ನಿಮ್ಮ ಹಣಕಾಸು ವಿಚಾರವಾಗಿ ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣಕ್ಕೆ ನೀವು ಪ್ರಯತ್ನ ಮಾಡುವಿರಿ. ಸಂಜೆಯ ಬಳಿಕ ಪ್ರಯಾಣ ಮಾಡಬೇಕಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಈ ದಿನವು ಅಪಾಯಕಾರಿ ಕೆಲಸದಿಂದ ತುಂಬಿರಲಿದೆ, ನೀವು ಬಹಳ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಇಂದು ಸುಧಾರಣೆ ನೋಡುವಿರಿ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ಮರುಪಾವತಿ ಮಾಡುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಪ್ರಯಾಣಗಳಿಂದ ತುಂಬಿದೆ. ಗೃಹಿಣಿಯರು ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಮನೆಯಲ್ಲಿ ನಿಮ್ಮ ಉದ್ಯೋಗ ಸಂಬಂಧಿತ ವಿಚಾರವಾಗಿ ಚರ್ಚೆಗಳು ನಡೆಯಲಿದೆ. ಸಂಬಂಧಿಕರೊಬ್ಬರಿಂದ ನಿಮಗೆ ನೋವಿನ ವಿಚಾರ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನ ಮಿಶ್ರಫಲದಿಂದ ಕೂಡಿರಲಿದೆ. ದಾಂಪತ್ಯ ವಿಚಾರದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಮೂಡುವ ಸಾಧ್ಯತೆ ಇದೆ. ನಿಮ್ಮ ಹಣಕಾಸು ವಿಚಾರವಾಗಿ ನೀವು ಪ್ರಮುಖ ನಿರ್ಧಾರವೊಂದನ್ನು ಮಾಡಬೇಕಾಗುತ್ತದೆ. ದೇವಾಲಯ ಭೇಟಿಯ ಕುರಿತ ಆಲೋಚನೆಯನ್ನು ಜಾರಿ ಮಾಡಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಅನುಕೂಲಕರ ವಾತಾವರಣಗಳ ತರಲಿದೆ. ವ್ಯಾಪಾರದಲ್ಲಿ ಲಾಭದಾಯಕ. ಅನೇಕರು ಈ ದಿನ ಪ್ರಯಾಣ ಮಾಡುವಿರಿ. ಗೃಹಿಣಿಯರಿಗೆ ಧನಲಾಭವಿದೆ. ನಿರುದ್ಯೋಗಿಗಳಲ್ಲಿ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುವ ಘಟನೆಗಳು ನಡೆಯಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನ ಮಿಶ್ರಫಲ ತರಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಮತ್ತೆ ಮುಂದೂಡುತ್ತೀರಿ. ಆಪ್ತರೊಬ್ಬರಿಗೆ ನೀವು ಹಣಕಾಸಿನ ಸಹಾಯ ಮಾಡುವಿರಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಲು ಮುಂದಾಗಬೇಡಿ.
ಕುಂಭ ರಾಶಿ
ಇಂದು ನಿಮಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿರಲಿದೆ. ಅನೇಕರಿಗೆ ಈ ದಿನ ಪ್ರಯಾಣ ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ಮನೆಯ ಸದಸ್ಯರೊಬ್ಬರ ವಿಚಾರದಲ್ಲಿ ಚಿಂತೆ ಇದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನ ದೊಡ್ಡ ಲಾಭದಾಯಕ ದಿನ. ಗೃಹಿಣಿಯರು ಹಣ ಗಳಿಸುವ ಸಾಧ್ಯತೆ ಇದೆ. ಬಹುಸಮಯದ ಒಪ್ಪಂದ ಒಂದರಿಂದ ಹಣ ಬರಲಿದೆ. ದಿನದ ಅಂತ್ಯದಲ್ಲಿ ನೀವು ಪ್ರಯಾಣ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಒತ್ತಡವಿದೆ.



Click it and Unblock the Notifications