Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 09 Horoscope: ಈ ಶುಕ್ರವಾರವು ನಿಮಗಿದೆ ಧನಲಾಭ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 09 (January 09 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಅಚ್ಚರಿ ಫಲಿತಾಂಶಗಳ ತರಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಇಂದು ಧನಾತ್ಮಕ ವಿಚಾರಗಳು ನಡೆಯಲಿದೆ. ಶುಕ್ರವಾರದಂದು ನಿಮ್ಮ ಹಣಕಾಸು ವ್ಯಯಿಸುವ ಮುನ್ನ ಆಲೋಚಿಸುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನವು ಪ್ರಯಾಣ ಮಾಡುವಿರಿ. ಗೃಹಿಣಿಯರು ಇಂದು ಹಲವು ರೀತಿಯ ಅಚ್ಚರಿಗಳ ಎದುರಿಸಬಹುದು. ನಿಮ್ಮ ಇಷ್ಟದ ವಸ್ತುವೊಂದನ್ನು ಇಂದು ಖರೀದಿಸಿಬಹುದು. ವ್ಯಾಪಾರಿಗಳಿಗೆ ಉತ್ತಮ ದಿನವಾಗುತ್ತಿದೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲವಿದೆ. ಗೃಹಿಣಿಯರಲ್ಲಿ ಈ ದಿನ ಅಂದುಕೊಂಡ ಕೆಲಸಗಳ ಮಾಡಿ ಮುಗಿಸುವ ದಿನವಾಗುತ್ತಿದೆ. ನವ ದಂಪತಿ ಇಂದು ದೇವಾಲಯ ಭೇಟಿ ಮಾಡಲಿದ್ದಾರೆ. ಆಪ್ತರೊಬ್ಬರಿಂದ ನಿಮಗೆ ಶುಭ ಸುದ್ದಿ ಬರಬಹುದು. ಹಣಕಾಸು ಸ್ಥಿತಿ ಸುಧಾರಿಸಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನ ಹೊಸ ಅನುಭವಗಳ ತರಲಿದೆ. ನಿಮ್ಮ ವ್ಯವಹಾರಗಳು ವೇಗ ಪಡೆಯಲಿವೆ. ನಿಮ್ಮಲ್ಲಿ ಪ್ರವಾಸ ಕೈಗೊಳ್ಳುವ ಅವಕಾಶಗಳು ಬರಬಹುದು. ಮಕ್ಕಳ ಆರೋಗ್ಯದ ವಿಚಾರದಲ್ಲಿದ್ದ ಚಿಂತೆ ದೂರಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಗೃಹಿಣಿಯರು ಇಂದು ಖರ್ಚುಗಳಿಂದ ದೂರ ಇದ್ದಷ್ಟೂ ಉತ್ತಮ. ನಿಮ್ಮ ಹಲವು ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಬಹುದು. ಪ್ರಯಾಣ ಮಾಡುವಾಗ ಸಮಸ್ಯೆಗಳಿದ್ದರೂ ಅದನ್ನು ಎದುರಿಸುತ್ತೀರಿ. ಸಾಲ ನೀಡಲು ಮುಂದಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಈ ದಿನ ಉತ್ತಮ ಲಾಭದಾಯಕವಾಗಲಿದೆ. ನೀವು ಬಹು ಸಮಯದಿಂದ ಬಯಸಿದ್ದ ಕೆಲಸವು ಈ ದಿನ ಪೂರ್ಣ ಮಾಡುವಿರಿ. ಮನೆಯ ವಾತಾವರಣವು ಅಶಾಂತಿಯಿಂದ ಕೂಡಿರಬಹುದು. ಪ್ರೇಮಿಗಳಿಗೆ ಇಂದು ಮಿಶ್ರಫಲವಿದೆ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಈ ದಿನ ಸಮಸ್ಯೆಗಳಿಂದ ತುಂಬಿರಬಹುದು. ಈ ದಿನ ವಾಹನ ವಿಚಾರದಲ್ಲಿ ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಬೇಡಿ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯಲ್ಲಿ ಅಡ್ಡಿ ಇರಲಿದೆ. ಬರಬೇಕಿದ್ದ ಹಣವೂ ಕೈ ಸೇರದೆ ಇರಬಹುದು. ಉದ್ಯೋಗದ ಸ್ಥಳದಲ್ಲಿ ಹೊಸ ರೀತಿ ಸಮಸ್ಯೆಗಳು ಎದುರಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನ ಉತ್ತಮ ದಿನ. ಪೂರ್ವ ನಿಯೋಜಿತ ಕೆಲಸ ಕಾರ್ಯಗಳಲ್ಲಿ ನಿಮಗೆ ಶುಭವಿದೆ. ಯಾರಿಂದಾದರು ನಿಮಗೆ ದೊಡ್ಡ ಹಣ ಬರುವುದು ಬಾಕಿ ಉಳಿದಿದ್ದರೆ ಈ ದಿನ ಪ್ರಯತ್ನ ಮಾಡುವುದು ಉತ್ತಮ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ಧನು ರಾಶಿ
ಧನು ರಾಶಿಯವರಿಗೆ ಇಂದು ಮಿಶ್ರಫಲ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಲು ಮುಂದಾಗಬೇಡಿ. ಅನೇಕರಿಗೆ ಇದು ಸವಾಲುಗಳಿಂದ ತುಂಬಿದ ಸಮಯ ಆಗಬಹುದು. ಪ್ರೇಮಿಗಳಿಗೆ ಈ ದಿನವು ಅತ್ಯುತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಪ್ರಯಾಣಗಳ ಮಾಡಬೇಕಾದ ದಿನ. ಗೃಹಿಣಿಯರು ಈ ದಿನ ಅಪಾಯಕಾರಿ ಕೆಲಸಗಳಿಂದ ದೂರ ಉಳಿಯುವುದು ಉತ್ತಮ. ಮಕ್ಕಳು ವಿದ್ಯಾಭ್ಯಾಸದ ಕಡೆ ಇಂದು ಗಮನವಿಡುವುದು ಉತ್ತಮ. ಮನೆಯ ಹಿರಿಯ ಸದಸ್ಯರ ಆರೋಗ್ಯಕರ ಕಡೆ ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನ ಓಡಾಟಗಳಿವೆ. ನಿಮ್ಮ ಹಣಕಾಸು ವಿಚಾರವಾಗಿ ಆಪ್ತರೊಬ್ಬರಿಂದ ಸಲಹೆ ಪಡೆಯುವಿರಿ, ವ್ಯಾಪಾರದಲ್ಲಿ ಮಿಶ್ರಫಲವಿದೆ. ನೀವು ಗಳಿಸಿದ ಹಣವನ್ನು ಮತ್ತೊಂದು ಕೆಲಸದಲ್ಲಿ ಕಳೆಯಬಹುದು. ಉದರ ಸಂಬಂಧಿತ ವಿಚಾರವಾಗಿ ಸಮಸ್ಯೆ ಎದುರಿಸಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನ ಉತ್ತಮವಾಗಿದೆ. ದಿನದ ಆರಂಭದಲ್ಲಿ ನೀವು ಉತ್ತಮ ಕೆಲಸಗಳ ಮಾಡುವಿರಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿದ್ದರೆ ಸುಧಾರಣೆ ನೋಡುವಿರಿ. ಮನೆಯಲ್ಲಿ ಶುಭ ಕಾರ್ಯದ ವಿಚಾರವಾಗಿ ಚರ್ಚೆಗಳಿವೆ.



Click it and Unblock the Notifications










