Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 08 Horoscope: ರಾಯರ ದಿನ ಯಾರಿಗೆಲ್ಲಾ ಶುಭವಿದೆ?
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಮಿಶ್ರಫಲವಿದೆ, ನಿಮ್ಮ ದೈನಂದಿನ ಕೆಲಸದಲ್ಲಿ ಈ ದಿನವು ನಿಮಗೆ ನೋವು ತರಬಹುದು. ಈ ದಿನ ಆಪ್ತರೊಬ್ಬರಿಂದ ನಿಮಗೆ ಕಷ್ಟಗಳು ಬರಬಹುದು. ದಾಂಪತ್ಯ ವಿಚಾರದಲ್ಲಿ ಮುನಿಸುಗಳಿವೆ. ಅನೇಕರಲ್ಲಿ ಈ ದಿನವು ವ್ಯವಹಾರ ಸಂಬಂಧವಾಗಿ ಪ್ರಯಾಣಗಳಿರಲಿವೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಉತ್ತಮ ದಿನ. ಗೃಹಿಣಿಯರಿಗೆ ಹಳೆಯ ಹಣ ಬರಲಿದೆ. ನೀವು ಸಮಾರಂಭವೊಂದರಲ್ಲಿ ಭಾಗಿಯಾಗಬಹುದು. ಮನೆಗಾಗಿ ನೀವು ದುಬಾರಿ ವಸ್ತುವೊಂದನ್ನು ಖರೀದಿಸಬಹುದು. ನಿಮಗಾಗಿ ಸಮಯ ಮೀಸಲಿಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣ ಮಾಡುವ ದಿನವಾಗಲಿದೆ. ಆಪ್ತರೊಬ್ಬರ ಕೆಲಸದ ವಿಚಾರದಲ್ಲಿ ನೀವು ಮನೆಯಿಂದ ಹೊರ ಹೋಗುವಿರಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ನಿಮ್ಮ ಆರೋಗ್ಯದಲ್ಲಿನ ಏರುಪೇರು ದೈನಂದಿನ ಕೆಲಸಗಳಿಗೆ ಅಡ್ಡಿಯಾಗಬಹುದು. ದೇವಾಲಯ ಭೇಟಿಯ ಅವಕಾಶವನ್ನು ನಿರ್ಲಕ್ಷಿಸಬೇಡಿ. ದಿನದ ಅಂತ್ಯದಲ್ಲಿ ನಿಮಗೆ ಮನೆಯ ಸಮಸ್ಯೆಯೊಂದು ಎದುರಾಗಲಿದೆ, ಮದುವೆ ವಿಚಾರ ಕುರಿತಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಲಿದೆ. ಆದ್ರೆ ಹಣಕಾಸಿನ ವಿಚಾರದಲ್ಲಿ ನಿಮಗೆ ಅನುಕೂಲಕರ. ವ್ಯಾಪಾರ ಸಂಬಂಧಿತ ವಿಚಾರದಲ್ಲಿ ಮನಸ್ತಾಪಗಳಿವೆ. ದಾಂಪತ್ಯ ವಿಚಾರದಲ್ಲಿ ತಾಳ್ಮೆ ಕಾಯ್ದುಕೊಳ್ಳುವುದು ಉತ್ತಮ. ಪ್ರಯಾಣ ಮಾಡುವಾಗ ಎಚ್ಚರಿಕೆ ಇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ಪ್ರಯಾಣದ ದಿನ. ಸ್ನೇಹಿತರು, ಸಂಬಂಧಿಕರು ಅಥವಾ ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡುವಿರಿ. ಆರೋಗ್ಯದ ಸಮಸ್ಯೆಗೆ ನೀವು ನಿರ್ಲಕ್ಷ್ಯ ಮಾಡದೆ ಪರಿಹಾರ ಪಡೆದುಕೊಳ್ಳಿ. ಹನುಮಂತನ ದೇವಾಲಯ ಭೇಟಿ ಮಾಡಿದರೆ ಉತ್ತಮ ಪ್ರತಿಫಲ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ಯಾರಿಂದಾದರು ನೀವು ಹಣ ಪಡೆಯುವ ಬಯಕೆ ಮುಂದೂಡಬಹುದು. ಕೆಲಸದಲ್ಲಿ ನೀವು ಬಯಸಿದ ಫಲಿತಾಂಶ ಪಡೆಯದೆ ಇರಬಹುದು. ಸವಾಲುಗಳಿಂದ ದೂರ ಉಳಿಯುತ್ತೀರಿ. ವಾಹನ ವಿಚಾರದಲ್ಲಿ ಎಚ್ಚರಿಕೆ ಇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಸಮಸ್ಯೆ ಬರಬಹುದು. ನಿಮ್ಮ ಮನೆಯ ವಾತಾವರಣವು ಶಾಂತತೆಯಿಂದ ಕೂಡಿರಲಿದೆ. ತಂದೆಯ ಆರೋಗ್ಯದಲ್ಲಿ ಏರು ಪೇರು ನೋಡಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಬಹಳ ಸ್ವಾಭಿಮಾನದಿಂದ ಕಳೆಯಬಹುದು. ನಿಮ್ಮ ಹಳೆಯ ಸಾಲವೊಂದನ್ನು ಮರುಪಾವತಿ ಮಾಡುವಿರಿ. ಮನೆಯ ಕೆಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಬಹುದು. ಹೊಸ ವಸ್ತು ಖರೀದಿಯ ಸಾಧ್ಯತೆ ಇದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಮಿಶ್ರಫಲ ನೋಡಬಹುದು. ನಿಮ್ಮ ಪ್ರಯಾಣದಲ್ಲಿ ತೊಡಕುಗಳು ಎದುರಾಗಬಹುದು. ನೀವು ಬಹುಸಮಯದಿಂದ ಕೆಲಸವೊಂದಕ್ಕೆ ಮೀಸಲಿಟ್ಟಿದ್ದ ಹಣವೊಂದನ್ನು ಅನಗತ್ಯ ವಿಚಾರಕ್ಕೆ ವ್ಯಯಿಸಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಇಂದು ಅತ್ಯಂತ ಶುಭವಾಗುತ್ತಿದೆ. ಬಹು ಸಮಯದಿಂದ ನೀವು ಮಾಡಲಾಗದೆ ಬಾಕಿ ಉಳಿಸಿಕೊಂಡಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ನಿಮ್ಮ ಮನೆಯಲ್ಲಿದ್ದ ವಸ್ತುವೊಂದನ್ನು ಬೇರೆಯವರಿಗೆ ನೀಡಿದ್ದರೆ ಇಂದು ಮರಳಿ ಪಡೆಯುವುದು ಸೂಕ್ತ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ಸಮಯ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ಪ್ರಯತ್ನ ಮಾಡುವುದು ಉತ್ತಮ. ಹೋಟೆಲ್ ಉದ್ಯಮದಲ್ಲಿ ಇಂದು ಲಾಭದಾಯಕ. ಕಟ್ಟಡ ನಿರ್ಮಾಣ ವಿಚಾರದಲ್ಲಿ ಭಾಗಿಯಾಗುವ ಮಂದಿಗೆ ಶುಭವಿದೆ.



Click it and Unblock the Notifications