Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
January 07 Horoscope: ಬುಧವಾರದಂದು ಈ ರಾಶಿಯವರಿಗೆ ಅನುಕೂಲ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 07 (January 07 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸುವಿರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆ ಎದುರಿಸಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ ನಿಮ್ಮ ಹಲವು ವಿಚಾರಗಳಲ್ಲಿ ಆದಾಯಕ್ಕಿಂತ ಹೆಚ್ಚಿನ ಖರ್ಚುಗಳಿವೆ. ಹಣ ಪಡೆಯುವ ನಿಮ್ಮ ಮೂಲವು ಮತ್ತಷ್ಟು ವಿಸ್ತಾರವಾಗಲಿದೆ. ಪ್ರೇಮಿಗಳು ಮಧುರ ಕ್ಷಣಗಳ ನಿರೀಕ್ಷಿಸಬಹುದು. ಆಸ್ಪತ್ರೆ ವಿಚಾರವಾಗಿ ಪ್ರಯಾಣವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುವಿರಿ. ಅನೇಕರಲ್ಲಿ ಈ ದಿನ ಪ್ರಯಾಣ ಮಾಡಬೇಕಾಗುತ್ತದೆ. ದಾಂಪತ್ಯ ಸಂಬಂಧಿತ ವಿಚಾರವಾಗಿ ನಿಮ್ಮಲ್ಲಿ ಅನಾನುಕೂಲವಿದೆ. ನಿಮ್ಮಿಂದ ಹಣ ಖರ್ಚು ಹೆಚ್ಚಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಅನೇಕ ಕೆಲಸದಲ್ಲಿ ಯಶಸ್ಸು ಪಡೆಯಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಬಹುದು. ಮನೆಯಲ್ಲಿ ಅಶಾಂತಿ ಇರಬಹುದು. ದಿನದ ಅಂತ್ಯದಲ್ಲಿ ಹೊಸ ವಿಚಾರವೊಂದು ಚಿಂತೆ ತರಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ಪ್ರತಿಫಲ ಅನುಭವಿಸುವ ದಿನವಾಗಲಿದೆ. ನಿಮಗಾಗಿ ಖರ್ಚುಗಳ ಮಾಡುವಿರಿ. ವಾಹನ ಸಂಬಂಧಿತ ಖರ್ಚು ಹೆಚ್ಚಾಗಲಿದೆ. ಭೂಮಿ, ಆಸ್ತಿ ವಿಚಾರದಲ್ಲಿ ನೀವು ಹೂಡಿಕೆ ಮಾಡಿದರೆ ಅನುಕೂಲವಿದೆ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಈ ದಿನವು ಸಮಸ್ಯೆಗಳ ತರಬಹುದು. ಹಣಕಾಸು ವಿಚಾರದಲ್ಲಿ ಒತ್ತಡ ಎದುರಿಸುವಿರಿ. ಕೌಟುಂಬಿಕ ಮಟ್ಟದಲ್ಲಿ ಸಮಸ್ಯೆಯನ್ನು ಎದುರಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮ ದಿನವಲ್ಲ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ತುಲಾ ರಾಶಿ
ತುಲಾ ರಾಶಿಯವರಿಗೆ ದಾಂಪತ್ಯ, ಕೌಟುಂಬಿಕ ವಿಚಾರದಲ್ಲಿ ನೀವು ಅಂದುಕೊಂಡ ಕೆಲಸ ಅಥವಾ ವಿಚಾರ ನಡೆಯದೆ ಇರಬಹುದು. ಮನೆಯ ನವೀಕರಣ ಸಂಬಂಧ, ಅಲಂಕಾರಿಕ ವಸ್ತು ಖರೀದಿ ವಿಚಾರದಲ್ಲಿ ಖರ್ಚು ಇರಬಹುದು. ಸ್ನೇಹಿತರೊಬ್ಬರ ಭೇಟಿಯಾಗುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಗೃಹಿಣಿಯರಲ್ಲಿ ಈ ದಿನ ಸಂತಸದ ದಿನ ಆಗಿರಲಿದೆ. ಮಕ್ಕಳ ಭವಿಷ್ಯದ ಕುರಿತ ಚಿಂತೆ ದೂರಾಗಬಹುದು. ವ್ಯವಹಾರಗಳಲ್ಲಿ ಮುಂದುವರೆಯುವಾಗ ಎಚ್ಚರಿಕೆ ಇಡಿ. ಬಹಳ ಖರ್ಚು ಮಾಡಬೇಕಾದ ದಿನವಾಗಬಹುದು. ಮಕ್ಕಳ ಕುರಿತಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಹಣಕಾಸು ಪರಿಸ್ಥಿತಿಯು ಸುಧಾರಿಸಲಿದೆ. ಬಹಳ ದೀರ್ಘಕಾಲದಿಂದ ನಿಮಗೆ ಬರಬೇಕಿದ್ದ ಹಣಕಾಸು ವಿಚಾರದಲ್ಲಿ ಶುಭ ಫಲಿತಾಂಶ ನೋಡಬಹುದು. ಆಸ್ತಿ ವಿಚಾರಗಳಲ್ಲಿ ಲಾಭವಿದೆ. ದಿನದ ಅಂತ್ಯದಲ್ಲಿ ಖರ್ಚುಗಳಿವೆ.
ಮಕರ ರಾಶಿ
ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರಮ ಹಾಕುವಿರಿ. ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ಸರ್ಕಾರಿ ಕೆಲಸಗಳಲ್ಲಿ ಒತ್ತಡ ಇರಲಿದೆ. ಅವಿವಾಹಿತ ಮಹಿಳೆಯರಲ್ಲಿ ಖರ್ಚು ಹೆಚ್ಚಾಗಲಿದೆ. ಸಭೆ ಸಮಾರಂಭದಲ್ಲಿ ನೀವು ಭಾಗಿಯಾಗಬಹುದು.
ಕುಂಭ ರಾಶಿ
ನಿಮ್ಮ ಆರ್ಥಿಕ ವಿಚಾರದಲ್ಲಿ ಇಂದು ಬಹಳ ಕಷ್ಟದ ದಿನ. ನಿಮ್ಮ ಹಣಕಾಸು ಕುರಿತ ವಿಚಾರವಾಗಿ ದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದು. ನಿಮ್ಮ ಹಳೆಯ ಕೌಟುಂಬಿಕ ಸಮಸ್ಯೆಯೊಂದು ಮತ್ತೆ ತಲೆನೋವಿಗೆ ಕಾರಣವಾಗಬಹುದು. ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವ.
ಮೀನ ರಾಶಿ
ಬಹುತೇಕರು ಇಂದು ಪ್ರಯಾಣ ಮಾಡಬಹುದು. ಕೆಲವು ಪ್ರಯಾಣಗಳು ನಿಮ್ಮಲ್ಲಿ ಲಾಭಕ್ಕೆ ಕಾರಣವಾಗಬಹುದು. ತರಾತುರಿಯಲ್ಲಿ ಯಾವುದೇ ಕೆಲಸ ಮಾಡಲು ಮುಂದಾಗಬೇಡಿ. ಹಣಕಾಸಿನ ವಿಚಾರವಾಗಿ ಸುಲಭವಾಗಿ ಯಾರನ್ನು ನಂಬಬೇಡಿ.



Click it and Unblock the Notifications




