January 05 Horoscope: ಈ ಸೋಮವಾರ ನೀವು ಅಂದುಕೊಂಡ ಕೆಲಸದಲ್ಲಿ ಬಂಪರ್!

ವೈದಿಕ ಶಾಸ್ತ್ರದ ಪ್ರಕಾರ ಜನವರಿ 05 (January 05 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇಂದು ದೊಡ್ಡ ವಿಚಾರ ನಡೆಯಲಿದೆ. ನಿಮಗದು ಲಾಭಕರವಾಗಲಿದೆ. ಪ್ರಯಾಣಗಳ ಮಾಡುವುದು ನಿಮಗೆ ಶುಭಕರ ಲಾಭಕ್ಕೆ ಕಾರಣವಾಗಲಿದೆ. ಗೃಹಿಣಿಯರಿಗೆ ಧನ ಲಾಭವಿದೆ.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಈ ದಿನ ಉತ್ತಮ ದಿನವಾಗುತ್ತಿದೆ. ಗೃಹಿಣಿಯರಲ್ಲಿ ಹಣಕಾಸು ವಿಚಾರವಾಗಿ ಇದ್ದಂತಹ ಒತ್ತಡವೊಂದು ನಿವಾರಣೆಯಾಗಲಿದೆ, ಇಡೀ ದಿನ ಶ್ರಮದಾಯಕವಾಗಬಹುದು. ಪ್ರಯಾಣಗಳನ್ನು ಮಾಡುವಿರಿ. ನವವಿವಾಹಿತರಲ್ಲಿ ಮನಸ್ತಾಪಗಳು ಮೂಡುವ ದಿನವಾಗಲಿದೆ.

January-05-2025-daily-horoscope-prediction

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಈ ದಿನ ಅತ್ಯುತ್ತಮ ಲಾಭದ ದಿನ. ನೀವು ಬಹು ಸಮಯದಿಂದ ಮಾಡದೆ ಇದ್ದ ಕೆಲಸವೊಂದನ್ನು ಮಾಡುವಿರಿ. ಇದು ಮುಂದಿನ ವಾರದಲ್ಲಿ ಲಾಭವಾಗಿ ಪರಿಣಮಿಸಲಿದೆ. ನಿಮ್ಮ ವಾಹನ ಸಂಬಂಧಿತ ವಿಚಾರದಲ್ಲಿ ಸವಾಲುಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಮನೆಯ ವಿಚಾರದಲ್ಲಿ ಶಾಂತಿ ಇರಲಿದೆ.

ಕರ್ಕ ರಾಶಿ

ಕರ್ಕ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತಿದೆ. ಆಪ್ತರೊಬ್ಬರಿಂದ ನಿಮಗೆ ಹಣದ ಹರಿವು ಅಥವಾ ಸಹಾಯವಿದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ಮಾತುಕತೆ ಇದೆ. ಸ್ನೇಹಿತರ ಭೇಟಿಯಾಗಲಿದ್ದೀರಿ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳನ್ನು ಪ್ರಮಾಣಿಕವಾಗಿ ಮಾಡಿ ಮುಗಿಸುವಿರಿ. ರಾತ್ರಿ ಪ್ರಯಾಣಗಳಲ್ಲಿ ಎಚ್ಚರಿಕೆ ಇರಿ. ದೊಡ್ಡ ಸವಾಲುಗಳಿಂದ ಇಂದು ಪಾರಾಗುವಿರಿ. ಬಹುಸಮಯದ ಬಯಕೆಯೊಂದನ್ನು ಈಡೇರಿಸಿಕೊಳ್ಳುವಿರಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನವು ಅನುಕೂಲಕರವಾಗಿದೆ. ಗೃಹಿಣಿಯರು ಈ ದಿನ ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುತ್ತದೆ. ಹಾಗೆ ನಿಮ್ಮ ಹಣಕಾಸು ವಿಚಾರದಲ್ಲಿಯೂ ನಿಮಗೆ ಅನುಕೂಲವಿದೆ. ವ್ಯಾಪಾರಿಗಳು ಮಿಶ್ರಫಲ ನೋಡಬಹುದು. ತಂದೆ ಆರೋಗ್ಯದಲ್ಲಿ ಏರುಪೇರು ಸಂಭವವಿದೆ.

ತುಲಾ ರಾಶಿ

ನೀವಿಂದು ಪ್ರಯಾಣಗಳಲ್ಲಿ ದಿನ ಕಳೆಯಬಹುದು. ಹೀಗಾಗಿ ಆರೋಗ್ಯದಲ್ಲಿನ ಸಣ್ಣ ಪುಟ್ಟ ಏರಿಳಿತದ ಕಡೆ ಗಮನವಿಡಿ. ಕೃಷಿ ಸಂಬಂಧಿತ ವಿಚಾರದಲ್ಲಿ ಶುಭವಾಗುತ್ತಿದೆ. ಮನೆ ನಿರ್ಮಾಣ, ಕಟ್ಟಡ ಕೆಲಸದಂತಹ ವಿಚಾರಗಳಲ್ಲಿ ಭಾಗಿಯಾಗುವವರಿಗೆ ಅನುಕೂಲವಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಮಿಶ್ರಫಲ. ನಿಮ್ಮ ಖರ್ಚುಗಳ ಮೇಲೆ ಇಂದು ಪೂರ್ಣ ಹಿಡಿತ ಇರಲಿ. ಅನಗತ್ಯ ಖರ್ಚುಗಳಿಂದ ಮುಂದೆ ಸಮಸ್ಯೆಗಳು ಬರಬಹುದು. ನಿಮ್ಮ ಹೊಸ ವ್ಯವಹಾರವು ಲಾಭದಾಯಕವಾಗುವತ್ತ ಸಾಗಲು ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಮಕ್ಕಳ ಆರೋಗ್ಯದ ಕಡೆ ಗಮನವಿಡಿ.

ಧನು ರಾಶಿ

ಧನು ರಾಶಿ ಜನರಲ್ಲಿ ಈ ದಿನವು ಅದೃಷ್ಟವನ್ನು ತರಲಿದೆ. ಆಪ್ತರೊಬ್ಬರಿಗೆ ನಿಮ್ಮಿಂದ ಹಣಕಾಸಿನ ಸಹಾಯ ಇರಲಿದೆ. ಪ್ರೇಮಿಗಳಿಗೆ ಇಂದು ಮಧುರವಾದ ನೆನಪಿನಲ್ಲಿ ಉಳಿಯುವಂತಹ ದಿನವಾಗಲಿದೆ. ನಿಮ್ಮ ಪ್ರಯಾಣಗಳು ಅನೇಕ ಅಡ್ಡಿಗಳಿಂದ ತುಂಬಿರಬಹುದು.

ಮಕರ ರಾಶಿ

ಮಕರ ರಾಶಿ ಜನರಿಗೆ ಈ ದಿನವು ಶುಭವಾಗುವ ಜೊತೆಗೆ ನೀವು ಅಂದುಕೊಂಡಿದ್ದ ಕೆಲಸವೊಂದನ್ನು ಮಾಡಬಹುದು. ಸಂಬಂಧಿಕರ ಜೊತೆಗಿನ ಮಾತುಕತೆಯೊಂದು ನಿಮಗೆ ಚಿಂತೆ ತರಬಹುದು. ಮನೆಗಾಗಿ ನೀವು ದುಬಾರಿ ಖರ್ಚು ಮಾಡಬೇಕಾಗಿ ಬರಲಿದೆ. ಸಹೋದರರೊಂದಿಗೆ ತಾಳ್ಮೆಯಿಂದಿರುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯವರು ಇಂದು ಯಾವುದಾದರು ಸಮಾರಂಭದಲ್ಲಿ ಭಾಗಿಯಾಗಬಹುದು. ಗೃಹಿಣಿಯರು ಇಂದು ಉದರ ಸಂಬಂಧಿತ ಯಾವುದಾದರು ಸಮಸ್ಯೆಗಳಿಗೆ ತುತ್ತಾಗುವ ಸಂಭವವಿದೆ. ದಿನದ ಅಂತ್ಯದಲ್ಲಿ ಧನಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಮಕ್ಕಳಿಂದ ಶುಭ ಸುದ್ದಿ ಬರಬಹುದು.

ಮೀನ ರಾಶಿ

ಮೀನ ರಾಶಿ ಜನರಲ್ಲಿ ಈ ದಿನ ಸುಗಮ ಕೆಲಸ ನಿರೀಕ್ಷಿಸಬಹುದು. ನೀವು ಬಹು ಸಮಯದಿಂದ ಕಷ್ಟಪಟ್ಟು ಮಾಡಿದ್ದ ಕೆಲಸವೊಂದರಿಂದ ಉತ್ತಮ ಫಲಿತಾಂಶ ನಿಮ್ಮದಾಗಿಸಿಕೊಳ್ಳಬಹುದು. ರಾತ್ರಿ ಪ್ರಯಾಣಗಳಲ್ಲಿ ಎಚ್ಚರಿಕೆ ಇಡಿ. ವಾಹನ ಚಲಾವಣೆಯ ಸಮಯದಲ್ಲೂ ಎಚ್ಚರಿಕೆಯಿಂದಿರಿ.

English summary

January-05-2025-daily-horoscope-prediction-for-12-zodiac-signs-in-kannada

Here is Horoscope Today, 05 January Horoscope: Daily Horoscope Prediction For 12 Zodiac signs In Kannada
Story first published: Monday, January 5, 2026, 5:00 [IST]
X
Desktop Bottom Promotion