Latest Updates
-
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
January 02 Horoscope: ಸಾಲ ನೀಡುವ ಮುನ್ನ ಆಲೋಚಿಸಿ!
ವೈದಿಕ ಶಾಸ್ತ್ರದ ಪ್ರಕಾರ ಜನವರಿ 02 (January 02 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಸವಾಲುಗಳು ಎದುರಾಗುವುದು ನೋಡಬಹುದು. ನಿಮ್ಮ ಹಲವು ವಿಚಾರಗಳಲ್ಲಿ ಹಣಕಾಸಿನ ಅಡ್ಡಿ ಬರಲಿದೆ. ಹಾಗೆ ದೇವಾಲಯ ಭೇಟಿಯನ್ನು ನೀವು ಮತ್ತೆ ಮುಂದೂಡಬಹುದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ವಸ್ತು ಸಹ ಕೈ ಸಿಗದೆ ಇರಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಮಿಶ್ರಫಲವಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಇಂದು ಕಠಿಣ ಪರಿಶ್ರಮದ ಮೂಲಕ ಈಡೇರಬಹುದು. ಹಲವರಿಗೆ ಈ ದಿನ ಸವಾಲುಗಳಿಂದ ತುಂಬಿರಬಹುದು. ವ್ಯಾಪಾರಿಗಳು ಕೂಡ ಇಂದು ಆದಾಯಗಳಿಕೆಯಲ್ಲಿ ಹಿಂದೆ ಬೀಳಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವಿರಿ. ಗೃಹಿಣಿಯರಿಗೆ ಈ ದಿನವು ಹಣಕಾಸಿನ ವಿಚಾರದಲ್ಲಿ ಅಡ್ಡಿಗಳು ನೋಡಬಹುದು. ವಿದ್ಯಾರ್ಥಿಗಳಿಗೆ ಅಡ್ಡಿಗಳು ಎದುರಾಗುತ್ತೆ. ಸ್ನೇಹ ವಿಚಾರದಲ್ಲಿ ಮನಸ್ತಾಪಗಳು ಬರಬಹುದು.
ಕರ್ಕ ರಾಶಿ
ಕರ್ಕ ರಾಶಿ ಅವರಿಗೆ ಈ ದಿನವು ಮಿಶ್ರಫಲ ತರಲಿದೆ, ನೀವು ಯಾರಿಗೂ ಸಾಲ ನೀಡುವುದು ಅಥವಾ ಯಾವುದಾದರು ವಸ್ತುವನ್ನು ನೀಡುವುದು ದುಬಾರಿಯಾಗಬಹುದು. ಪ್ರಯಾಣಗಳಲ್ಲಿನ ಸಮಸ್ಯೆಗಳು ದೊಡ್ಡದಾಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಹಣಕಾಸಿನ ನೆರವು ಪಡೆಯಲಿದ್ದೀರಿ. ಆಪ್ತರ ಹಣಕಾಸಿನ ವಿಚಾರದಲ್ಲಿ ನೀವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಶಾಂತಿ ನೋಡಬಹುದು. ಪ್ರೇಮಿಗಳಿಗೆ ಶುಭ ದಿನ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ಸವಾಲುಗಳಿವೆ. ನಿಮ್ಮ ಹಲವು ರೀತಿಯ ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶವಿದೆ. ಈ ಫಲಿತಾಂಶ ನೀವು ಬಯಸದೆ ಬರಬಹುದು. ವಾಹನ ಸಂಬಂಧಿತ ಖರ್ಚುಗಳಲ್ಲಿ ಏರಿಕೆ ನಿಮಗೆ ಸಮಸ್ಯೆಯಾಗಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ಮಿಶ್ರಫಲ ನೀಡಲಿದೆ. ನಿಮಗಾಗಿ ವಸ್ತುವೊಂದನ್ನು ಖರೀದಿಸಬಹುದು. ಬಾಡಿಗೆ ಸಂಬಂಧಿತ ವಿಚಾರದಲ್ಲಿ ನಿಮಗೆ ಉತ್ತಮ ದಿನವಲ್ಲ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ.
ವೃಶ್ವಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ಇರಲಿದೆ. ವ್ಯಾಪಾರದಲ್ಲಿ ಆದಾಯದಷ್ಟೇ ಖರ್ಚುಗಳಿವೆ. ಪ್ರೇಮಿಗಳು ಮನೆಯ ಸಮಸ್ಯೆಗಳ ಎದುರಿಸಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿ ಜನರು ಒಂದು ಪ್ರಯಾಣಗಳಿಂದ ದೂರ ಉಳಿಯುವುದು ಉತ್ತಮ. ನಿಮ್ಮ ಕೆಲಸಗಳನ್ನು ಮಾಡುವಾಗ ಎಚ್ಚರಿಕೆಯಿಂದಿರಿ. ಯಾರಿಗೂ ಹಣಕಾಸಿನ ನೆರವು ನೀಡಲು ಮುಂದಾಗದೆ ಇರುವುದು ಉತ್ತಮ. ಗೃಹಿಣಿಯರಲ್ಲಿ ಉಳಿತಾಯ ಹೆಚ್ಚಾಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಸಾಮಾನ್ಯ ವಾಗಿರಲಿದೆ. ಯಾರಿಗಾದರು ಉಸಿರಾಟ, ಶ್ವಾಸಕೋಶ ಸಂಬಂಧಿ ಅನಾರೋಗ್ಯವಿದ್ದರೆ ಈ ದಿನ ನಿಗದಿತ ಚಿಕಿತ್ಸೆ ಅಥವಾ ಪರೀಕ್ಷೆಗೆ ಒಳಗಾಗುವುದು ಉತ್ತಮ. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಒಮ್ಮತ ಮೂಡದೆ ಇರಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಬ್ಯಾಂಕಿಂಗ್ ಕುರಿತಾದ ವಿಚಾರದಲ್ಲಿ ಇಂದು ಓಡಾಟಗಳಿವೆ. ಹಾಗೆ ಹಣಕಾಸು ಪಡೆಯುವ ಉದ್ದೇಶದಿಂದ ಮತ್ತಷ್ಟು ಖರ್ಚು ಮಾಡಬೇಕಾಗುತ್ತದೆ. ಬಾಡಿಗೆ ಮನೆ ಹುಡುಕುತ್ತಿದ್ದ ಮಂದಿಗೆ ಈ ದಿನವು ಬಹಳ ಅನುಕೂಲವಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನವು ಬಹಳಷ್ಟು ಅನುಕೂಲ ತರಲಿದೆ. ಗೃಹಿಣಿಯರು ಕೌಟುಂಬಿಕ ವಿಚಾರದಲ್ಲಿ ಬಹುಸಮಯದಿಂದ ಎದುರಿಸಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯಹುದು. ಪ್ರಯಾಣಗಳು ಸುಖಕರವಾಗಿರಲಿದೆ.



Click it and Unblock the Notifications











