Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್‌ನಲ್ಲಿ 3 ಬಾರಿ ಸೂರ್ಯನ ಸ್ಥಾನಪಲ್ಲಟ: ಈ ರಾಶಿಯವರು ಮುಟ್ಟಿದ್ದೆಲ್ಲವು ಚಿನ್ನ..!
ನಮ್ಮ ಸೌರಮಂಡಲದ ಪ್ರಮುಖ ಗ್ರಹವಾಗಿರುವ ಹಾಗೆ ಗ್ರಹಗಳ ಕೇಂದ್ರಬಿಂದು ಸೂರ್ಯನಿಗೆ ಬಹಳ ಪ್ರಮುಖ ಸ್ಥಾನ ನೀಡಲಾಗುತ್ತೆ. ಸೂರ್ಯನ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಅದ್ರಲ್ಲೂ ಸೂರ್ಯ ಸಿಂಹ ರಾಶಿಯ ಅಧಿಪತಿಯಾಗಿದ್ದು, ಈ ಗ್ರಹದ ಸ್ಥಾನಪಲ್ಲಟ್ಟವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.
ಸೂರ್ಯನು ಪ್ರತಿ ತಿಂಗಳು ತನ್ನ ಸ್ಥಾನ ಬದಲಾಯಿಸುವ ಗ್ರಹ. ಹಾಗೆ ಮಧ್ಯಂತರದಲ್ಲಿ ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಸೂರ್ಯನ ಸ್ಥಾನ ಬದಲಾಗಲೆಲ್ಲಾ ಅದರ ಪರಿಣಾವು ಎಲ್ಲಾ 12 ರಾಶಿಗಳ ಮೇಲೆಯೂ ಉಂಟಾಗುವುದು ನೋಡಬಹುದು. ಸದ್ಯ ಈಗ ಸೂರ್ಯ ಕರ್ಕ ರಾಶಿಯಲ್ಲಿದ್ದಾನೆ. ಆಗಸ್ಟ್ 17ರ ವರೆಗೂ ಆತ ಕರ್ಕ ರಾಶಿಯಲ್ಲಿಯೇ ಇರುತ್ತಾನೆ.

ಆಗಸ್ಟ್ 17ರ ಬಳಿಕ ಸೂರ್ಯನು ತನ್ನ ಸ್ವಂತ ರಾಶಿ ಸಿಂಹ ರಾಶಿಗೆ ಚಲಿಸಲಿದ್ದಾನೆ. ಇದರ ಹೊರತಾಗಿ ಆಗಸ್ಟ್ ತಿಂಗಳಲ್ಲಿ ಸೂರ್ಯ 2 ಬಾರಿ ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಆಗಸ್ಟ್ 3 ರಂದು ಸೂರ್ಯ ಅಶ್ಲೇಷಾ ನಕ್ಷತ್ರಕ್ಕೆ ಹಾಗೆ ಆಗಸ್ಟ್ 30ರಂದೂ ಪೂರ್ವ ನಕ್ಷತ್ರಕ್ಕೆ ಸೂರ್ಯ ಚಲಿಸಲಿದ್ದಾನೆ. ಇದರಿಂದ ಸೂರ್ಯನಿಂದ ಅಪರೂಪದ ಯೋಗ ಪಡೆಯಬಹುದು.
ತುಲಾ ರಾಶಿ
ಆಗಸ್ಟ್ ತಿಂಗಳಲ್ಲಿ ಸೂರ್ಯನ ಮೂರು ಬಾರಿಯ ಸಂಚಾರವು ತುಲಾ ರಾಶಿಯವರಲ್ಲಿ ಅದೃಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುವಂತಹ ಸಮಯ ಇದಾಗಿರಲಿದೆ. ಪ್ರಯಾಣಗಳಲ್ಲಿ ನಿಮಗೆ ಲಾಭದಾಯಕ ಮತ್ತು ಶುಭದಾಯಕ ಸಮಯ ಆಗಿರಲಿದೆ. ಹೊಸ ಉದ್ಯೋಗ, ಆದಾಯ ಪಡೆಯಲು ಇದು ಬಹಳ ಸಹಕಾರಿಯಾಗಲಿದೆ. ದಾಂಪತ್ಯ ವಿಚಾರಗಳು, ಪ್ರೀತಿಯ ವಿಚಾರಗಳಲ್ಲಿ ಈ ಸಮಯ ಬಹಳ ಲಾಭ ತರಲಿದೆ. ದಿಢೀರ್ ಹಣ ಗಳಿಸುವಂತಹ ಅದೃಷ್ಟ ಪಡೆಯಬಹುದು. ನೀವು ಬಯಸಿದಂತಹ ವಸ್ತುಗಳನ್ನು ಪಡೆದುಕೊಳ್ಳಲು ಇದು ಬಹಳ ಸಕಾರಾತ್ಮಕ ಸಮಯ ಆಗಿರಲಿದೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿದ್ದ ಮಂದಿಗೆ ಅನುಕೂಲಕರ ದಿನಗಳಿವೆ.
ವೃಶ್ಚಿಕ ರಾಶಿ
ಆಗಸ್ಟ್‌ನಲ್ಲಿ 3 ಬಾರಿ ಸೂರ್ಯನು ತನ್ನ ಸ್ಥಾನ ಬದಲಾಯಿಸುವುದು ವೃಶ್ಚಿಕ ರಾಶಿಯವರಿಗೆ ಅದೃಷ್ಟ ತರಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ನೀವು ಅದರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಉದ್ಯಮಿಗಳು ತಮ್ಮ ಲಾಭಾಂಶ ಹೆಚ್ಚು ಮಾಡಿಕೊಳ್ಳಬಹುದು. ನಿಮ್ಮ ವ್ಯವಹಾರಗಳ ವಿಸ್ತರಿಸಲು ನಿಮಗೆ ಬಹಳ ಅವಕಾಶಗಳು ಬರಲಿವೆ. ಕೆಲಸಗಾರರಲ್ಲಿ ಬಡ್ತಿಗೆ ಅವಕಾಶ ಬರಲಿದೆ. ತಂದೆಯೊಂದಿಗಿನ ಸಂಬಂಧ ಬಲವಾಗುತ್ತದೆ. ನಿಮ್ಮ ದೀರ್ಘಕಾಲದ ಅನಾರೋಗ್ಯವೊಂದು ನಿವಾರಣೆ ಅಥವಾ ಸುಧಾರಣೆಯಾಗಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧಿ ಶುಭ ಸುದ್ದಿ ಬರಬಹುದು.
ಸಿಂಹ ರಾಶಿ
ಆಗಸ್ಟ್‌ನಲ್ಲಿ ಸೂರ್ಯನ ಸ್ಥಾನ ಪಲ್ಲಟವು ಸಿಂಹ ರಾಶಿಯವರಿಗೆ ಸುವರ್ಣಯುಗ ತರಲಿದೆ, ಸೂರ್ಯ ಕರ್ಕ ರಾಶಿಯಿಂದ ಸಿಂಹ ರಾಶಿಗೆ ಚಲಿಸುವುದರಿಂದ ನಿಮ್ಮಲ್ಲಿ ಸಂತೋಷಕರ ದಿನಗಳು ಬರಲಿವೆ. ನಿಮ್ಮ ಹಣಕಾಸು ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಸಾಲ ಇಳಿಕೆಯಾಗಲಿದೆ. ಉಳಿತಾಯದ ಹಣದಿಂದ ನಿಮ್ಮ ಸಮಸ್ಯೆಗಳ ಪರಿಹಾರವಾಗಲಿದೆ. ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧಿ ವಿಚಾರದಲ್ಲಿ ನೀವು ಬಯಸಿದ್ದಂತಹ ಸಮಯ ಎನ್ನಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಉದ್ಯೋಗದ ವಿಚಾರವಾಗಿ ಯಶಸ್ಸಿನ ಹಾದಿ ತುಳಿಯಲಿದ್ದೀರಿ. ಪ್ರತಿಯೊಂದು ವಿಚಾರವು ನಿಮ್ಮ ಅಣತಿಯಂತೆ ನಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications










