Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಾತಕ ನೋಡದೆ ಶನಿ ದೋಷ ಪತ್ತೆ ಮಾಡೋದು ಹೇಗೆ? ಈ ಸಮಸ್ಯೆಗಳೂ ನಿಮಗೂ ಎದುರಾಗಿದ್ಯಾ?
ಜ್ಯೋತಿಷ್ಯದಲ್ಲಿ ಶನಿಯನ್ನು ಕರ್ಮ ಫಲ ನೀಡುವ ದೇವರೆಂದು ಪರಿಗಣಿಸಲಾಗುತ್ತದೆ. ಶನಿಯ ಆಶೀರ್ವಾದ ಪಡೆದರೆ ಎಂತಹ ವ್ಯಕ್ತಿಯಾದರು ಯಶಸ್ಸು ಪಡೆಯುತ್ತಾನೆ. ಆದ್ರೆ ಶನಿಯ ಕೋಪಕ್ಕೆ ಒಳಗಾದ ರಾಶಿಗಳಲ್ಲಿ ಅಡೆತಡೆಗಳು ಸಮಸ್ಯೆಗಳನ್ನು ನೋಡಬಹುದು. ಶನಿ ಚಲುಸುವ ಗ್ರಹಗಳಲ್ಲಿ ಹಲವು ರೀತಿ ಸಂಕಷ್ಟಗಳು ಎದುರಾಗುತ್ತಲೇ ಇರುತ್ತದೆ. ಇದಕ್ಕಾಗಿ ಶನಿ ದೋಷ ನಿವಾರಣೆಯ ಹಲವು ಕೆಲಸಗಳನ್ನು ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ.
ಶಾಸ್ತ್ರಗಳಲ್ಲಿ, ಶನಿದೇವನನ್ನು ನ್ಯಾಯ ಮತ್ತು ಕರ್ಮದ ದೇವರು ಎಂದು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯ ಕ್ರಿಯೆಗಳ ಆಧಾರದ ಮೇಲೆ ಅವನು ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಜಾತಕದಲ್ಲಿ ಶನಿ ದುರ್ಬಲವಾಗಿದ್ದಾಗ ಸಮಸ್ಯೆಗಳು ಎದುರಾಗುವುದು ನೋಡಬಹುದು. ಆದ್ರೆ ಹಲವರ ಜಾತಕದಲ್ಲಿ ಶನಿ ದೋಷ ಇದ್ದರೂ ಕೂಡ ಅವರಿಗೆ ಅದು ತಿಳಿಯೋದಿಲ್ಲ.

ಶನಿಯ ಸಾಡೇ ಸಾತಿ ಮತ್ತು ಧೈಯ (ಏಳುವರೆ ವರ್ಷಗಳು) ಉಲ್ಲೇಖವು ಆತಂಕವನ್ನು ಉಂಟುಮಾಡುತ್ತದೆ. ಆದ್ರೆ ಶನಿಯ ಕೋಪದಿಂದ ಹಾಗೆ ಆತನ ಪ್ರಭಾವದಿಂದ ಪಾರಾಗುವ ಹಲವು ವಿಧಾನಗಳನ್ನು ಸಹ ಹೇಳಲಾಗುತ್ತದೆ. ಹಾಗೆ ಜಾತಕದಲ್ಲಿ ನಿಮಗೆ ಶನಿ ದೋಷ ಇದೆ ಎಂಬುದನ್ನು ತಿಳಿದುಕೊಳ್ಳಲು ಹಲವು ರೀತಿಯ ವಿಧಾನಗಳಿವೆ. ಪಂಡಿತರು, ಜ್ಯೋತಿಷ್ಯಶಾಸ್ತ್ರ ತಜ್ಞರು ನಿಮ್ಮ ಜಾತಕ ನೋಡಿ ಈ ಕುರಿತಾಗಿ ಹೇಳಬಹುದು. ಆದ್ರೆ ಜಾತಕ ನೋಡದೆಯೇ ನಿಮ್ಮಲ್ಲಿ ಶನಿ ದೋಷ ಇರುವಿಕೆಯನ್ನು ಪತ್ತೆ ಮಾಡಬಹುದು.
ಜಾತಕದಲ್ಲಿ ಶನಿ ದುರ್ಬಲವಾಗಿದ್ದರೆ ನಿಮಗೆ ಹಲವು ರೀತಿ ಸಮಸ್ಯೆಗಳು ಎದುರಾಗುತ್ತದೆ. ಹಾಗಾದ್ರೆ ಯಾವೆಲ್ಲಾ ಅಡೆತಡೆಗಳು, ಸಮಸ್ಯೆಗಳು ಶನಿಯಿಂದ ಬರಬಹುದು, ಯಾವುದೆಲ್ಲಾ ಶನಿ ದೋಷದ ಲಕ್ಷಣ ಆಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕೆಲಸದಲ್ಲಿ ಅಡೆತಡೆಗಳು ಮತ್ತು ಆರ್ಥಿಕ ಸಮಸ್ಯೆಗಳು
ಶನಿಯಿಂದ ಸಮಸ್ಯೆಗಳ ಎದುರಿಸುತ್ತಿರುವ ಮಂದಿಗೆ ಕಾಡುವ ಅತೀ ದೊಡ್ಡ ಸಮಸ್ಯೆಗಳಲ್ಲಿ ಈ ಎರಡು ಮುಖ್ಯವಾಗಿವೆ. ಅದ್ರಲ್ಲೂ ಎಲ್ಲಾ ಕೆಲಸಗಳಲ್ಲಿ ನೀವು ಅಡ್ಡಿಗಳನ್ನು ಎದುರಿಸುತ್ತಿದ್ದರೆ ಶನಿ ದೋಷ ಲಕ್ಷಣವಾಗಿರಲಿದೆ, ಅದ್ರಲ್ಲೂ ಪದೇ ಪದೇ ಇಂತಹ ಸಮಸ್ಯೆಗಳನ್ನು ನೀವು ಎದುರಿಸಿರಬಹುದು. ಶುಭ ಕಾರ್ಯಗಳಿಂದ ಹಿಡಿದು ನೀವು ಬಹಳ ಸಮಯದಿಂದ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೂ ಆ ಕಾರ್ಯಗಳು ಕೈಗೂಡದೆ ಇರಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳೂ ಸಹ ವೈಫಲ್ಯ ನೋಡಬಹುದು. ಇದು ನಿಮ್ಮ ಜಾತಕದಲ್ಲಿ ಶನಿ ದೋಷದ ಪ್ರಮುಖ ಲಕ್ಷಣ ಆಗಿರಲಿದೆ. ಹಾಗೆ ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರೆ ಅದು ಕೂಡ ಶನಿ ದುರ್ಬಲ ಆಗಿರುವುದರ ಲಕ್ಷಣವಾಗಿರಲಿದೆ.
ಹೆಚ್ಚಾಗಿ ನಿಮ್ಮ ಹಣಕಾಸು ವಿಚಾರಗಳು ನೀವು ಅಂದುಕೊಂಡಂತೆ ನಡೆಯದೆ ಇರಬಹುದು. ಸಾಲದ ಪ್ರಮಾಣಗಳು ಹೆಚ್ಚಾಗುತ್ತಾ ಸಾಗುವುದು. ಹಾಗೆ ಬಹಳ ಸಮಯದಿಂದ ನೀವು ಮಾಡಬೇಕಿದ್ದ ಕೆಲಸಕ್ಕೆ ಹಣಕಾಸಿನ ಅಡ್ಡಿ ಬರುವುದು ಇಲ್ಲವೆ ಏಕಾಏಕಿ ಹಣಕಾಸಿನ ಖರ್ಚುಗಳು ಹೆಚ್ಚಾಗುತ್ತಾ ಸಾಗುವುದು ಶನಿ ದೋಷದ ಲಕ್ಷಣವಾಗಿರಲಿದೆ.
ಆರೋಗ್ಯದ ಮೇಲೆ ಶನಿ ಪ್ರಭಾವ
ಶನಿಯು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿ ಮಾಡುವ ಜೊತೆಗೆ ನಿಮ್ಮಲ್ಲಿ ಅನಾರೋಗ್ಯಕ್ಕೂ ಸಹ ಕಾರಣವಾಗಿರುತ್ತಾನೆ. ಇದು ನಿಮ್ಮ ಹಣಕಾಸಿನ ವಿಚಾರದಲ್ಲಿ ಹಲವು ಸಮಸ್ಯೆಗಳಿಗೆ ದಾರಿಯಾಗಬುದು. ಅದ್ರಲ್ಲೂ ದೀರ್ಘಕಾಲದ ಮೂಳೆ, ಕೀಲು, ನರ ಸಮಸ್ಯೆಗಳು, ಓಡಾಡಲು ಎದುರಾಗುವ ಸಮಸ್ಯೆಗಳು, ದುರ್ಬಲ ದಷ್ಟಿ, ಚರ್ಮ ರೋಗ, ಒತ್ತಡಗಳು, ಮಾನಸಿಕ ಸಮಸ್ಯೆಗಳು ಕೂಡ ಶನಿಯ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



