Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಮುಟ್ಟಿನ ಕಪ್ ಬಳಸಿದರೆ ಕಿಡ್ನಿಗೆ ಹಾನಿಯೇ? ಮುಟ್ಟಿನ ಕಪ್ ಬಳಸುವವರು ತಿಳಿದಿರಲೇಬೇಕಾದ ಸಂಗತಿಯಿದು
ಮುಟ್ಟಿನ ಸಮಯದಲ್ಲಿ ಬಟ್ಟೆ ಒಳ್ಳೆಯದಲ್ಲ ಎಂದು ಪ್ಯಾಡ್‌ಗಳಂತೂ ಬಂತು, ನಂತರ ಪ್ಯಾಡ್‌ಗಳು ಹೆಣ್ಣಿನ ಮುಟ್ಟಿನ ಸಮಸ್ಯೆಗೆ ಸಂಪೂರ್ಣ ಪರಿಹಾರವಾಗಲಿಲ್ಲ, ಅದರಲ್ಲಿರುವ ಕೆಮಿಕಲ್ ಅವಳ ಶರೀರಕ್ಕೆ ಒಳ್ಳೆಯದಲ್ಲ, ಅಲ್ಲದೆ ಪ್ಯಾಡ್‌ಗಳಿಂದಾಗಿ ಪರಿಸರಕ್ಕೂ ಮಾರಕ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಮುಟ್ಟಿನ ಕಪ್‌ಗಳು ಬಂತು.
ಈ ಮುಟ್ಟಿನ ಕಪ್‌ನಿಂದಾಗಿ ಪ್ರತಿ ತಿಂಗಳು ಮುಟ್ಟಾದಾಗ ಪ್ಯಾಡ್‌ಗೆ ಅಂತ ಹಣ ಖರ್ಚಿಲ್ಲ ಅಲ್ಲದೆ ಒಂದು ಮುಟ್ಟಿನ ಕಪ್ ವರ್ಷದವರೆಗೆ ಕೂಡ ಬಳಸಬಹುದು ಅಲ್ಲದೆ ಪರಿಸರಕ್ಕೆ ಆಗುತ್ತಿರುವ ಹಾನಿಯೂ ಕಡಿಮೆಯಾಗುತ್ತೆ, ಮತ್ತೆ ಲೀಕೇಜ್, ಪ್ಯಾಡ್ ತುಂಬುತ್ತೆ ಎಂಬ ಭಯವಿಲ್ಲ, ಹಾಗಾಗಿ ಹೆಣ್ಮಕ್ಕಳು ಈಗ ಮುಟ್ಟಿನ ಕಪ್ ಬಳಸುತ್ತಿದ್ದಾರೆ, ಆದರೆ ಇದು ಕೂಡ 100% ಸುರಕ್ಷಿತವಲ್ಲ, ಸರಿಯಾಗಿ ಬಳಸದಿದ್ದರೆ ಕಿಡ್ನಿ ಡ್ಯಾಮೇಜ್ ಉಂಟಾಗಬಹುದು!

ಮುಟ್ಟಿನ ಕಪ್ ಕಿಡ್ನಿ ಆರೋಗ್ಯಕ್ಕೆ ಹೇಗೆ ಹಾನಿಕರಕ?
ಮುಟ್ಟಿನ ಕಪ್ ಸರಿಯಾದ ರೀತಿಯಲ್ಲಿ ಬಳಸಬೇಕು, ಇಲ್ಲದಿದ್ದರೆ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದನ್ನು ಹಾಕುವ ರೀತಿ ಸರಿಯಾಗಿರಬೇಕು, ಇಲ್ಲದಿದ್ದರೆ ಕಿಡ್ನಿ ಹಾಗೂ ಗರ್ಭಕೋಶದಲ್ಲಿ ಊತ ಉಂಟಾಗುವುದು, ಅಲ್ಲದೆ ಮೂತ್ರ ಮೂತ್ರ ಸರಾಗವಾಗಿ ಹೋಗುವುದಕ್ಕೆ ಅಡ್ಡಿಯಾಗುವುದು, ಇದನ್ನು ವೈದ್ಯಕೀಯ ಭಾಷೆಯಲ್ಲಿ ureterohydronephrosis ಎಂದು ಕರೆಯಲಾಗುವುದು, ಇದರಿಂದ ಕೂಡ ಕಿಡ್ನಿ ಆರೋಗ್ಯಕ್ಕೆ ಹಾನಿಯುಂಟಾಗುವುದು.
ಮುಟ್ಟಿನ ಕಪ್ ಸರಿಯಾಗಿ ಬಳಸದಿದ್ದಾಗ ಮಾತ್ರ ಈ ಬಗೆಯ ತೊಂದರೆ ಉಂಟಾಗುವುದು
ಒಂದು ಅಧ್ಯಯನದಲ್ಲಿ ಮಹಿಳೆಯೊಬ್ಬರಿಗೆ ಅತೀವ ಸೊಂಟನೋವಿನಿಂದ ಆಸ್ಪತ್ರೆಗೆ ಬರ್ತಾರೆ, ಅವರಿಗೆ ಮೂತ್ರದಲ್ಲಿ ರಕ್ತ ಕೂಡ ಹೋಗ್ತಾ ಇರುತ್ತದೆ, ಅವರನ್ನು ಸ್ಕ್ಯಾನ್ ಮಾಡಿದಾಗ ಅವರ ಮುಟ್ಟಿನ ಕಪ್ ಸರಿಯಾದ ರೀತಿಯಲ್ಲಿ ಬಳಕೆ ಮಾಡದೇ ಇದ್ದಿದ್ದರಿಂದಾಗಿ ಕಿಡ್ನಿಗೆ ಹಾನಿಯುಂಟಾಗಿ ಈ ಬಗೆಯ ಸಮಸ್ಯೆ ಉಂಟಾಗಿತ್ತು.
Urology Case Reports ಎಂದು 2020ರಲ್ಲಿ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಮಹಿಳೆಯೊಬ್ಬರಿಗೆ ಅತಿಯಾದ ಸೊಂಟ ನೋವಿನಿಂದಾಗಿ ಆಸ್ಪತ್ರೆಗೆ ಬರ್ತಾರೆ, ಅವರು ಮುಟ್ಟಿನ ಕಪ್ ಬಳಸುತ್ತಿದ್ದರು, ಆ ಕಪ್ ಬಳಸುವುದನ್ನು ನಿಲ್ಲಿಸಿದ ಬಳಿಕ ಆ ಸೊಂಟ ನೋವು ದೂರಾಯ್ತು.
ಮುಟ್ಟಿನ ಕಪ್ ಬಳಸುವಾಗ ಯಾವ ತಪ್ಪು ಮಾಡಬಾರದು
ತುಂಬಾನೇ ಒಳಭಾಗಕ್ಕೆ ನೂಕುವುದು ಅಥವಾ ಹಾಕಿದ ರೀತಿ ಸರಿಯಾಗಿ ಇರದಿದ್ದರೆ ಅದು ಮೂತ್ರನಾಳದ ಮೇಲೆ ತುಂಬಾನೇ ಒತ್ತಡ ಹಾಕುತ್ತದೆ, ಇದರಿಂದ ಮೂತ್ರ ಸಂಚಾರಕ್ಕೆ ತೊಂದರೆ ಉಂಟಾಗುವುದು, ಈ ರೀತಿ ಪ್ರತಿ ತಿಂಗಳು 4-5 ದಿನ ಆಗ್ತಾ ಇದ್ದರೆ ಅದು ಕಿಡ್ನಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಅದನ್ನು ಹೊರತೆಗೆಯುವಾಗಲೂ ಸಮಸ್ಯೆಯಾಗುವುದು
ಅದನ್ನು ಹಿಡಿದು ಎಳೆಯುವುದರಿಂದ ಬ್ಲೇಡರ್ ಹಾಗೂ ಮೂತ್ರಕೋಶದಲ್ಲಿರುವ ಚಿಕ್ಕ ನಾಳಗಳಿಗೆ ಹಾನಿಯುಂಟಾಗುವುದು, ಇದರಿಂದ ಕೂಡ ಕಿಡ್ನಿಗೆ ಹಾನಿಯುಂಟಾಗುವುದು.
ಕಪ್ ಆಗಾಗ ಶುಚಿಗೊಳಿಸದಿದ್ದರೆ ಬ್ಯಾಕ್ಟಿರಿಯಾ ಉಂಟಾಗುವ ಸಾಧ್ಯತೆ ಇದೆ
ಕಪ್ ಅನ್ನು ನಿರಂತರವಾಗಿ 12 ಗಂಟೆ ಕಾಲ ಬಳಸಿದರೆ ಬ್ಯಾಕ್ಟಿರಿಯಾ ಉಂಟಾಗಿ ಬಿಳುಪು ಹೋದಾಗ ದುರ್ವಾಸನೆ ಬೀರುವುದು.
ಮುಟ್ಟಿನ ಕಪ್ ಈ ಬಗೆಯ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಬಡ
ಜ್ವರ
ಗುಳ್ಳೆಗಳು ಏಳುವುದು
ವಾಂತಿ
ತುರಿಕೆ
ಈ ಬಗೆಯ ಸಮಸ್ಯೆ ಕಂಡು ಬಂದರೆ ಮುಟ್ಟಿನ ಕಪ್ ತೆಗೆಯಿರಿ
ಸರಿಯಾದ ಕಪ್ ಆಯ್ಕೆ ಹೇಗೆ?
ಸ್ಮಾಲ್ ಕಪ್ ಮದುವೆಯಾಗದೆ ಇರುವ ಹೆಣ್ಮಕ್ಕಳು (ಲೈಂಗಿಕ ಚಟುವಟಿಕೆ ಮಾಡದೆ ಇರುವವರು), ಬಾಲಕಿಯರು, ಕಡಿಮೆ ರಕ್ತಸ್ರಾವವಿರುವ ಮಹಿಳೆಯರು ಬಳಸಬಹುದು
ಹೆರಿಗೆಯಾಗಿದ್ದರೆ ಅಥವಾ ಅಧಿಕ ರಕ್ತಸ್ರಾವವಿದ್ದರೆ ಲಾರ್ಜ್ ಕಪ್ ಬಳಸಬಹುದು
ಯಾರಿಗೆ ಬ್ಲೇಡರ್ ಸೆನ್ಸಿಟಿವಿಟಿ ಇದೆಯೋ ಅವರು ಬಳಸಬಹುದು
ಫರ್ಮ್ ಕಪ್ ಒಳಗಡೆ ಹಾಕಲು ಸುಲಭವಾಗುವುದು
ಹೇಗೆ ಬಳಸಬೇಕು?
ಕೈಗಳನ್ನು ಸೋಪು ಹಚ್ಚಿ ತೊಳೆಯಬಕು
ಕಪ್ ಅನ್ನು ಬಳಸುವ ಮುನ್ನ ಬಿಸಿ ನೀರಿಗೆ ಹಾಕಿಡಿ
ನಂತರ ಇಂಡಿಯನ್ ಟಾಯ್ಲೆಟ್‌ನಲ್ಲಿ ಕೂರುವ ರೀತಿಯಲ್ಲಿ ಕೂರಬೇಕು
ಬಳಿಕ ಮುಟ್ಟಿನ ಕಪ್‌ನ ತುದಿಯನ್ನು ಮಡಚಬೇಕು, C ಶೇಪ್‌ನಲ್ಲಿ ಮಡಚಿ
ನಂತರ ಮೆಲ್ಲನೆ ಒಳಗಡೆ ಹಾಕಿ
ನಂತರ ಮುಟ್ಟಿನ ಕಪ್ ಸರಿಯಾಗಿ ಕೂತಿದೆಯೇ ಎಂಬುವುದನ್ನು ಬೆರಳನ್ನು ಮುಟ್ಟಿ ಪರಿಶೀಲಿಸಿ.
ನೀವು ಮುಟ್ಟಿನ ಕಪ್ ಹಾಕಿದ ಮೇಲೆ ಮೆಲ್ಲನೆ ತಿರುಗಿಸಿ ಸರಿಯಾಗಿ ಕೂತಿದೆಯೇ ಪರಿಶೀಲಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











