Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಜ್ಯೋತಿಷ್ಯದ ಪ್ರಕಾರ ಜೂನ್‌ವರೆಗೆ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ತ್ರೈಮಾಸಿಕದ ಭವಿಷ್ಯ ನೀಡಲಾಗಿದೆ, ಇಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗಿನ ಭವಿಷ್ಯ ನೀಡಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರ ಬದುಕಿನಲ್ಲಿ ಈ ಬರುವ 3 ತಿಂಗಳಲ್ಲಿ ಧನಾತ್ಮಕ ಬದಲಾವಣೆ ಕಂಡು ಬರುವುದು. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಈ ಮೂರು ತಿಂಗಳು ದೈಹಿಕವಾಗಿ, ಮಾನಸಿಕವಾಗಿ ತುಂಬಾ ಉತ್ತಮವಾಗಿದೆ. ಈ ಅವಧಿಯಲ್ಲಿ ನೀವು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸುವುದರಿಂದ ನೀವು ಹೆಚ್ಚಿನ ಪ್ರಗತಿ ಕಾಣುವಿರಿ.
ಆರ್ಥಿಕ ಸದೃಢತೆ ಕಾಣುವಿರಿ, ಸಾಲ ಮಾಡಿದ್ದರೆ ಅದನ್ನು ತೀರಿಸಲು ಸಾಧ್ಯವಾಗುವುದು. ಇನ್ನು ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ಸಮಯ ತುಂಬಾ ಉತ್ತಮವಾಗಿದೆ, ನೀವು ಬಯಸಿದ ಉದ್ಯೋಗ ಪಡೆಯುವಿರಿ. ನೀವು ಜೂನ್ ತಿಂಗಳಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುವುದು. ಆಹಾರಕ್ರಮ ಹಾಗೂ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಅವಧಿ ಉತ್ತಮವಾಗಿದೆ. ಆರ್ಥಿಕ ಹಾಗೂ ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ತುಂಬಾ ಉತ್ತಮವಾಗಿದೆ. ಇನ್ನು ಆನ್‌ಲೈನ್ ವ್ಯವಹಾರ ಮಾಡುತ್ತಿರುವವರು ಉತ್ತಮ ಪ್ರಯೋಜನ ಪಡೆಯುತ್ತೀರಿ. ಇನ್ನು ವಿದೇಶ ಪ್ರಯಾಣಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ.
ಇನ್ನು ಈ ಅವಧಿಯಲ್ಲಿ ನೀವು ಮನೆಯ ಸೌಕರ್ಯ ಹೆಚ್ಚಿಸಲು ಪ್ರಯತ್ನಿಸುತ್ತೀರಿ. ವೃತ್ತಿ ಜೀವನದಲ್ಲಿ ಬದಲಾವಣೆಗೆ ಈ ಅವಧಿ ಉತ್ತಮವಾಗಿದೆ. ಏಪ್ರಿಲ್‌ಗಿಂತ ಮೇ, ಜೂನ್ ತಿಂಗಳಿನಲ್ಲಿ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ.
ಮಿಥುನ ರಾಶಿ
ಏಪ್ರಿಲ್ ತಿಂಗಳಿನಲ್ಲಿ ನೀವು ಕೆಲವು ಬದಲಾವಣೆಯನ್ನು ಕಾಣಬಹುದು. ಈ ಅವಧಿಯಲ್ಲಿ ಅನಗ್ಯತ ಚಿಂತೆಗಳಿಂದ ದೂರವಿರಿ.
ಅದೃಷ್ಟದ ಚಿಂತೆ ಬಿಡಿ, ನೀವು ಕಠಿಣ ಪರಿಶ್ರಮವನ್ನು ಮುಂದುವರೆಸಿ, ಮುಂದೆ ಖಂಡಿತ ಫಲ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಮೇ ತಿಂಗಳಿನ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ಕರ್ಕ ರಾಶಿ
ಈ ಅವಧಿಯಲ್ಲಿ ಸ್ವಲ್ಪ ಗೊಂದಲ ಕಾಡಬಹುದು. ಮೇ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೊಸ ಯೋಜನೆಯನ್ನು ಪ್ರಾರಂಭಿಸುವ ಅಥವಾ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಸಾಧ್ಯತೆ ಇದೆ, ಉದ್ಯೋಗದಲ್ಲಿ ಇರುವವರಿಗೆ ಹೊಸ ಅವಕಾಶಗಳು ದೊರೆಯಲಿದೆ.
ಸಿಂಹ ರಾಶಿ
ಈ ಅವಧಿಯು ನಿಮಗೆ ಸವಾಲಿನಿಂದ ಕೂಡಿರಲಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಬಯಸಿದರೆ, ಅದರಲ್ಲಿ ಆತುರಪಡಬೇಡಿ ಏಕೆಂದರೆ ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಈ ಸಮಯದಲ್ಲಿ ಹೊಸದನ್ನು ಕಲಿಯುವತ್ತ ಆಸಕ್ತಿ ತೋರಿಸುತ್ತೀರಿ. ಆರೋಗ್ಯದ ಕಡೆಗೆ ಗಮನಹರಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಅವಧಿಯು ಅದ್ಭುತವಾಗಿರಲಿದೆ. ನೀವು ನಿಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಭವಿಷ್ಯದಲ್ಲಿ ನೀವು ಅದರ ಪ್ರತಿಫಲವನ್ನು ಪಡೆಯುತ್ತೀರಿ. ವೃತ್ತಿ ಹಾಗೂ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ.
ತುಲಾ ರಾಶಿ
ಈ ಅವಧಿಯಲ್ಲಿ ಸಂಬಂಧದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು . ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮದುವೆಗೆ ಸಂಬಂಧ ಹುಡುಕುತ್ತಿರುವವರಿಗೆ ಈ ಅವಧಿ ಉತ್ತಮವಾಗಿದೆ. ನಿಮ್ಮ ಸಂಗಾತಿಯೊಂದಿಗಿನ ಎಲ್ಲಾ ವಿವಾದಗಳನ್ನು ಪರಿಹರಿಸಲು ಮತ್ತು ಸಂಬಂಧವನ್ನು ಸುಧಾರಿಸಲು ಈ ಅವಧಿಯು ಉತ್ತಮ ಸಮಯವಾಗಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಏಪ್ರಿಲ್ ಮತ್ತು ಮೇ ತಿಂಗಳುಗಳು ಅತ್ಯುತ್ತಮವಾಗಿರಲಿದೆ. ಈ ಅವಧಿ ವೃತ್ತಿಜೀವನ ಹಾಗೂ ಆರ್ರತಿಕ ದೃಷ್ಟಿಯಿಂದ ಉತ್ತಮವಾಗಿದೆ. ಜೂನ್ ತಿಂಗಳಿನಲ್ಲಿ ಕೆಲ ಅಡೆತಡೆಗಳಿರಬಹುದು ತಾಳ್ಮೆಯಿಂದಿರಬೇಕು.
ಧನು ರಾಶಿ
ಈ ಅವಧಿ ನಿಮಗೆ ಉತ್ತಮವಾಗಿರಲಿದೆ. ನೀವು ನಿಮ್ಮ ಎಲ್ಲಾ ಕೆಲಸವು ಪೂರ್ಣಗೊಳ್ಳಲಿದೆ. ಮೇ ತಿಂಗಳು ಕೆಲಸದ ದೃಷ್ಟಿಯಿಂದ ಉತ್ತಮವಾಗಿರಲಿದೆ, ಬಡ್ತಿ ಪಡೆಯುವಿರಿ. ಈ ಅವಧಿಯಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು.
ಮಕರ ರಾಶಿ
ಮಕರ ರಾಶಿಯವರ ಆರ್ಥಿಕ ಹಾಗೂ ವೃತ್ತಿ ಜೀವನ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವಾಡುವ ಮಾತಿನ ಕಡೆಗೆ ಗಮನಹರಿಸಬೇಕು, ನಿಮ್ಮ ಮಾತೇ ನಿಮಗೆ ಸಮಸ್ಯೆ ಇರಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ.
ಕುಂಭ ರಾಶಿ
ಆರ್ಥಿಕವಾಗಿ ಸದೃಢರಾಗಲು ಮತ್ತು ಉತ್ತಮ ಕಾರ್ಯತಂತ್ರ ರೂಪಿಸಲು ಇದು ಉತ್ತಮ ಸಮಯ. ಈ ಸಮಯದಲ್ಲಿ ನೀವು ಸಮಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು, ನಿಮ್ಮ ಕೆಲಸವನ್ನು ಅವಧಿಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಿ.ಈ ಸಮಯದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು.
ಮೀನ ರಾಶಿ
ಹಣಕಾಸಿನ ವಿಷಯಕ್ಕೆ ಬಂದಾಗ ಈ ಅವಧಿಯು ನಿಮಗೆ ಮುಖ್ಯವಾಗಿದೆ.ಈ ಅವಧಿಯಲ್ಲಿ ಕೆಲ ಸವಾಲು, ಚಿಂತೆಗಳು ಕಾಡಬಹುದು . ನೀವು ತಾಳ್ಮೆಯಿಂದ ಅಡೆತಡೆಗಳನ್ನು ಎದುರಿಸಲು ಪ್ರಯತ್ನಿಸಿದರೆ ಒಳ್ಳೆಯದು. ಈ ಅವಧಿಯಲ್ಲಿ, ನಿಮ್ಮ ಅಭ್ಯಾಸಗಳಿಗೆ ಗಮನ ಕೊಡಿ ಮತ್ತು ನಿಮ್ಮ ದಿನಚರಿಯಲ್ಲಿ ಧ್ಯಾನವನ್ನು ಸೇರಿಸಿ, ಇದು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications