Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಳಿ 2024: ನಿಮ್ಮ ರಾಶಿಗೆ ಯಾವ ಬಣ್ಣದಿಂದ ಹೋಳಿ ಆಟ ಪ್ರಾರಂಭಿಸಿದರೆ ಒಳ್ಳೆಯದು?
ಹೋಳಿ ಬರೀ ಸಂಭ್ರಮದ ಆಚರಣೆ ಮಾತ್ರವಲ್ಲ, ಈ ಆಚರಣೆಯ ಹಿಂದೆ ಸಂಪ್ರದಾಯವಿದೆ, ಧಾರ್ಮಿಕ ನಂಬಿಕೆಗಳಿವೆ, ಆದ್ದರಿಂದ ಈ ಹೋಳಿಯನ್ನು ಧಾರ್ಮಿಕ ನಂಬಿಕೆಗಳಂತೆ ಆಚರಿಸಿದರೆ ಇನ್ನೂ ಒಳ್ಳೆಯದು. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರಿಗೆ ಯಾವ ಬಣ್ಣ ಒಳ್ಳೆಯದು ಎಂದು ನೋಡೋಣ ಬನ್ನಿ:

ಹೋಳಿ 2024: ದಿನಾಂಕ ಮತ್ತು ಸಮಯ
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನಾಂಕ: ಮಾರ್ಚ್ 24, 2024 ರಂದು ಬೆಳಗ್ಗೆ 09:57 ಕ್ಕೆ ಪ್ರಾರಂಭ
ಪೂರ್ಣಿಮಾ ತಿಥಿ ಕೊನೆಗೊಳ್ಳುತ್ತದೆ: ಮಾರ್ಚ್ 25, 2024 ರಂದು ಮಧ್ಯಾಹ್ನ 12:32 ಕ್ಕೆ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:02 ರಿಂದ 12:51 ರವರೆಗೆ
ಹೋಲಿಕಾ ದಹನ ಮುಹೂರ್ತ: ಮಾರ್ಚ್ 24, 2024 ರಂದು ರಾತ್ರಿ 11:15 ರಿಂದ ಮಾರ್ಚ್ 25 ರ ಮಧ್ಯರಾತ್ರಿ 12:23 ರವರೆಗೆ.
ಅವಧಿ: 1 ಗಂಟೆ 7 ನಿಮಿಷಗಳು
ವರ್ಣರಂಜಿತ ಹೋಳಿ: 25 ಮಾರ್ಚ್ 2024, ಸೋಮವಾರ
ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಮಂಗಳ ಗ್ರಹ. ಮಂಗಳ ಅಂದ್ರೆ ಕಂಪು ಬಣ್ಣ. ಕೆಂಪು ಬಣ್ಣವು ಪ್ರೀತಿ ಮತ್ತು ಶಕ್ತಿಯ ಸಂಕೇತವಾಗಿದೆ. ಮೇಷ ರಾಶಿಯವರು ಕೆಂಪು ಬಣ್ಣದಲ್ಲಿ ಹೋಳಿಯಾಟ ಆಡಿ.
ವೃಷಭ ರಾಶಿ
ವೃಷಭ ರಾಶಿಯವರ ಅಧಿಪತಿ ಶುಕ್ರ, ಆದ್ದರಿಂದ ಈ ರಾಶಿಯವರಿಗೆ ಶುಭ ಬಣ್ಣವು ಬಿಳಿಯಾಗಿದೆ, ಇದಲ್ಲದೆ, ತಿಳಿ ನೀಲಿ ಬಣ್ಣವು ನಿಮಗೆ ಉತ್ತಮವಾಗಿದೆ. ನೀವು ಹೋಳಿ ಆಟವನ್ನು ಈ ಬಣ್ಣಗಳಿಂದ ಪ್ರಾರಂಭಿಸಿ.
ಮಿಥುನ ರಾಶಿ
ಈ ರಾಶಿಯ ಅಧಿಪತಿ ಬುಧ, ಆದ್ದರಿಂದ ಈ ರಾಶಿಯವರಿಗೆ ಅಧಿಪತಿ ಹಸಿರು ಬಣ್ಣ. ಇದು ಅದೃಷ್ಟದ ಸಂಕೇತ. ಮಿಥುನ ರಾಶಿಯವರು ಹಸಿರು ಬಣ್ಣದ ಹೋಳಿಯ ಆಟ ಪ್ರಾರಂಭಿಸಿ.
ಕರ್ಕ ರಾಶಿ
ಕರ್ಕ ರಾಶಿಯವರ ಅಧಿಪತಿ ಚಂದ್ರ. ಚಂದ್ರನು ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಿಸಲು ಕೆಲಸ ಮಾಡುತ್ತಾನೆ, ಆದ್ದರಿಂದ ಈ ರಾಶಿಯವರಿಗೆ ಬಿಳಿ. ಈ ಬಣ್ಣದೊಂದಿಗೆ ಹೋಳಿ ಆಡುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಸಿಂಹ ರಾಶಿ
ಈ ರಾಶಿಯ ಅಧಿಪತಿ ಸೂರ್ಯ. ಅದೃಷ್ಟದ ಬಣ್ಣಗಳು ಗಾಢ ಕೆಂಪು, ಕಿತ್ತಳೆ, ಹಳದಿ ಮತ್ತು ಗೋಲ್ಡನ್ ಬಣ್ಣ. ಅಂತಹ ಪರಿಸ್ಥಿತಿಯಲ್ಲಿ, ಹೋಳಿ ದಿನದಂದು ನೀವು ಈ ಬಣ್ಣಗಳನ್ನು ಬಳಸಿ.
ಕನ್ಯಾರಾಶಿ
ಕನ್ಯಾ ರಾಶಿಯ ಅದೃಷ್ಟದ ಬಣ್ಣ ಕಡು ಹಸಿರು. ಹಸಿರು ಬಣ್ಣವನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇ. ಇದಲ್ಲದೆ, ನೀಲಿ ಬಣ್ಣ ಕೂಡ ಈ ರಾಶಿಯವರಿಗೆ ಅದೃಷ್ಟಕರ. ಅಂತಹ ಪರಿಸ್ಥಿತಿಯಲ್ಲಿ, ನೀವು ಹಸಿರು ಮತ್ತು ನೀಲಿ ಬಣ್ಣಗಳೊಂದಿಗೆ ಹೋಳಿಯನ್ನು ಆಡಬಹುದು.
ತುಲಾ ರಾಶಿ
ಈ ರಾಶಿಯ ಅಧಿಪತಿ ಶುಕ್ರ, ಈ ರಾಶಿಯವರ ಅದೃಷ್ಟದ ಬಣ್ಣಗಳೆಂದರೆ ಬಿಳಿ ಮತ್ತು ತಿಳಿ ಹಳದಿ. ಅಂತಹ ಪರಿಸ್ಥಿತಿಯಲ್ಲಿ, ತುಲಾ ರಾಶಿಯವರು ಹಳದಿ ಬಣ್ಣದಿಂದ ಹೋಳಿಯನ್ನು ಆಡಬೇಕು.
ವೃಶ್ಚಿಕ ರಾಶಿ
ಈ ರಾಶಿಯ ಅಧಿಪತಿ ಮಂಗಳ, ಆದ್ದರಿಂದ ಈ ರಾಶಿಯವರಿಗೆ ಕೆಂಪು ಮತ್ತು ಮರೂನ್ ಬಣ್ಣಗಳು ಮಂಗಳಕರವಾಗಿದೆ. ಈ ಮಂಗಳಕರ ಬಣ್ಣವನ್ನು ಬಳಸುವುದು ವೃಶ್ಚಿಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಬಣ್ಣದ ಬಳಕೆಯು ಪ್ರತಿ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ.
ಧನು ರಾಶಿ
ಈ ರಾಶಿಯ ಅಧಿಪತಿ ಗುರು. ಗುರುವಿನ ಮಂಗಳಕರ ಬಣ್ಣ ಹಳದಿ. ಈ ರಾಶಿಯವರು ಹಳದಿ ಬಣ್ಣವನ್ನು ಬಳಸಿದರೆ ಒಳ್ಳೆಯದು. ಇದು ಧನು ರಾಶಿಯವರಿಗೆ ಲಾಭವನ್ನು ನೀಡುತ್ತದೆ, ಈ ಬಣ್ಣ ನಿಮ್ಮ ಮನಸ್ಸಿಗೆ ಶಾಂತಿ, ಸಂತೋಷ ನೀಡುತ್ತದೆ.
ಮಕರ ರಾಶಿ
ಈ ರಾಶಿಯ ಅಧಿಪತಿ ಶನಿ. ಶನಿಯು ಅಧಿಪತಿಯಾಗಿರುವುದರಿಂದ ಅದೃಷ್ಟದ ಕಪ್ಪು ಅಥವಾ ಕಡು ನೀಲಿ ಬಣ್ಣದ್ದಾಗಿದೆ. ಮಕರ ರಾಶಿಯವರಿಗೆ ಮರೂನ್ ಬಣ್ಣವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಕುಂಭ ರಾಶಿ
ಈ ರಾಶಿಯ ಅಧಿಪತಿ ಶನಿ, ಆದ್ದರಿಂದ ಈ ರಾಶಿಯವರಿಗೆ ಮಂಗಳಕರ ಬಣ್ಣವೆಂದು ಕಪ್ಪು ಅಥವಾ ಕಡು ನೀಲಿ ಎಂದು ಪರಿಗಣಿಸಲಾಗಿದೆ. ಕುಂಭ ರಾಶಿಯವರಿಗೆ ಈ ಬಣ್ಣಗಳನ್ನು ಬಳಸುವುದು ಪ್ರಯೋಜನಕಾರಿ.
ಮೀನ ರಾಶಿ
ಈ ರಾಶಿಯ ಅಧಿಪತಿ ಗುರು. ಗುರುವಿನ ಮಂಗಳಕರ ಬಣ್ಣವು ಹಳದಿಯಾಗಿದೆ, ಆದ್ದರಿಂದ ಹಳದಿ ಬಣ್ಣವು ಮೀನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಬಣ್ಣವು ನಿಮ್ಮ ಜೀವನದಲ್ಲಿ ಶುಭವನ್ನು ತರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


