Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಈ ಜನ್ಮ ನಕ್ಷತ್ರದಲ್ಲಿ ಜನಿಸಿದವರಿಗೆ ಡಿಸೆಂಬರ್‌ನಲ್ಲಿ ಕಾಡಲಿದೆ ಅನಾರೋಗ್ಯ..!
ಜ್ಯೋತಿಷ್ಯದಲ್ಲಿ ನಿಮ್ಮ ರಾಶಿ ಹೇಗೆ ನಿಮ್ಮ ಭವಿಷ್ಯ ನಿರ್ಧರಿಸುತ್ತದೆಯೋ ಅದೇ ರೀತಿ ಜನ್ಮ ನಕ್ಷತ್ರಗಳು ಕೂಡ ನಿಮ್ಮ ಮುಂದಿನ ದಿನಗಳಲ್ಲಿ ಉಂಟಾಗುವ ಭವಿಷ್ಯಗಳ ನಿರ್ಧರಿಸಲಿದೆ. ನೀವು ಯಾವ ಜನ್ಮ ನಕ್ಷತ್ರದಲ್ಲಿ ಜನಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಗುಣಗಳು ಕೂಡ ನಿರ್ಧಾರವಾಗುತ್ತದೆ. ಇನ್ನು ನಿಮ್ಮ ಜನನ ದಿನಾಂಕ, ಗ್ರಹಗಳು, ಹುಟ್ಟಿದ ಸಮಯ, ಗಳಿಗೆ, ದಿನ ವಾರ, ತಿಂಗಳು ಇದೆಲ್ಲವನ್ನೂ ಆಧರಿಸಿ ಜನ್ಮ ಕುಂಡಲಿ ಮತ್ತು ಜಾತಕ ಸಿದ್ಧಪಡಿಸಲಾಗುತ್ತದೆ.
ಹಾಗಾದ್ರೆ ನಿಮ್ಮ ನಕ್ಷತ್ರ ಯಾವುದು? ಯಾವ ನಕ್ಷತ್ರದಲ್ಲಿ ಜನಿಸಿದವರು ಡಿಸೆಂಬರ್‌ನಲ್ಲಿ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಯಾರ ಆರೋಗ್ಯದಲ್ಲಿ ಏರುಪೇರಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಅಶ್ವಿನ ನಕ್ಷತ್ರ
ಅಶ್ವಿನಿ ನಕ್ಷತ್ರವನ್ನು 'ಸಾರಿಗೆ ನಕ್ಷತ್ರ' ಎಂದು ಪರಿಗಣಿಸಲಾಗಿದೆ. ಈ ನಕ್ಷತ್ರದ ಪ್ರಭಾವದಿಂದ ಜನರು ಸಾಹಸಮಯ ಮತ್ತು ಶಕ್ತಿಯಿಂದ ತುಂಬಿರುತ್ತಾರೆ. ಆದ್ರೆ ಡಿಸೆಂಬರ್‌ನಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ನಿಮಗೆ ಮೂಳೆಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ನೀವು ಎಚ್ಚರಿಕೆ ವಹಿಸಬೇಕಿದೆ. ಏಕೆಂದರೆ ಡಿಸೆಂಬರ್‌ನಲ್ಲಿ ನಿಮ್ಮ ಜನ್ಮ ನಕ್ಷತ್ರ ಹಾಗೂ ಗ್ರಹಗತಿಗಳ ಬದಲಾವಣೆಯು ನಿಮ್ಮ ಆರೋಗ್ಯ ವೃದ್ಧಿಗೆ ಸಹಕರಿಸುವುದಿಲ್ಲ. ಹೀಗಾಗಿ ನೀವು ಯಾವುದಾದರು ಮೂಳೆ ಸಮಸ್ಯೆಗಳಿಗೆ ಗಂಟು ನೋವು, ಕೀಲು ನೋವು, ಮೂಳೆ ಮುರಿತದಂತಹ ಸಮಸ್ಯೆಗೆ ಒಳಗಾಗಿದ್ದರೆ ಅದರಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಸ್ವಾತಿ ನಕ್ಷತ್ರ
ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ಶುಕ್ರನ ನೆರಳಿನಲ್ಲಿರುತ್ತಾರೆ. ಆದರೆ ಈ ಡಿಸೆಂಬರ್‌ನಲ್ಲಿ ನಿಮಗೆ ಹಲವು ಅನಾನುಕೂಲತೆ ಎದುರಾಗಬಹುದು, ನಿಮ್ಮ ಆರೋಗ್ಯದಲ್ಲಿ ಹಲವು ರೀತಿಯ ಪ್ರಭಾವ ಉಂಟಾಗಬಹುದು. ನೀವು ಪಂಚೇಂದ್ರಿಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಂದರೆ ನಿಮ್ಮಲ್ಲಿ ಕಣ್ಣು, ಕಿವಿ, ಬಾಯಿ, ಚರ್ಮ, ಬಾಯಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ತುತ್ತಾಗಬಬಹುದು.
ಕೃತಿಕಾ ನಕ್ಷತ್ರ
ಕೃತಿಕಾ ನಕ್ಷತ್ರದಲ್ಲಿ ಜನಿಸಿದರು ಸ್ಥಿರವಾದ ಆರೋಗ್ಯಕ್ಕೆ ಹೆಸರಾದವರು ಆದ್ರೆ ಡಿಸೆಂಬರ್‌ನಲ್ಲಿ ನಿಮಗೂ ಅನಾರೋಗ್ಯಕ್ಕೆ ಒಳಗಾಗುವ ಸಂಭವವಿದೆ. ನಿಮ್ಮಲ್ಲಿ ವೈರಸ್‌ಗೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಕಂಡುಬರಬಹುದು. ಹಾಗೆ ಇದರಿಂದ ನೀವು ಕೆಲವು ದಿನಗಳ ಕಾಲ ಅನಾರೋಗ್ಯಕ್ಕೆ ತುತ್ತಾಗಬಹುದು. ಆದರೆ ತಿಂಗಳ ಕೊನೆಯಲ್ಲಿ ನಿಮ್ಮ ಆರೋಗ್ಯ ಸುಧಾರಿಸಲಿದೆ.
ರೇವತಿ ನಕ್ಷತ್ರ
ರೇವತಿ ನಕ್ಷತ್ರದಲ್ಲಿ ಜನಿಸಿದ ಡಿಸೆಂಬರ್ ತಿಂಗಳಲ್ಲಿ ಹಲ್ಲು ನೋವು, ಕಣ್ಣು ನೋವಿನಂತಹ ಸೂಕ್ಷ್ಮ ಅನಾರೋಗ್ಯ ಸಮಸ್ಯೆಗೆ ಒಳಗಾಗಬಹುದು, ಹಾಗೆ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಎದುರಿಸುತ್ತಿರುವವರು ಎಚ್ಚರಿಕೆ ವಹಿಸುವುದು ಬಹಳ ಉತ್ತಮ. ಹಾಗೆ ಈ ಜನ್ಮ ನಕ್ಷತ್ರದಲ್ಲಿ ಜನಿಸಿದವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಾಣಿಸಬಹುದು.
ಅನುರಾಧ
ಅನುರಾಧ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನಿಮಗೆ ಮಾನಸಿಕ ಆರೋಗ್ಯ ಹದಗೆಡಬಹುದು. ಅಂದರೆ ನಿಮಗೆ ನೆಮ್ಮದಿ ಇಲ್ಲದ ದಿನಗಳು ಎದುರಾಗಬಹುದು. ಡಿಸೆಂಬರ್‌ನಲ್ಲಿ ನಿಮಗೆ ಮಾನಸಿಕವಾಗಿ ಒಂದಿಷ್ಟು ಕಿರಿಕಿರಿಯ ದಿನಗಳು ಕಾಡಬಹುದು. ಮನೆಯಲ್ಲಿ ಅಶಾಂತಿ, ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications