Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು ಸ್ಥಾನಪಲ್ಲಟದಿಂದ ಹಂಸ ರಾಜಯೋಗ: ಗುರುಬಲ ಪಡೆಯುವ ರಾಶಿಗಳಿವು, ಅದೃಷ್ಟವೂ ನಿಮ್ಮದೇ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಸಂಚಾರವನ್ನು ಬಹಳ ವಿಶೇಷ ಹಾಗೂ ಪ್ರಮುಖ ವಿದ್ಯಮಾನ ಎಂಬುದಾಗಿ ಪರಿಗಣಿಸಲಾಗುತ್ತದೆ. ಹಾಗೆ ಎಲ್ಲಾ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದನ್ನು ಸಹ ನೋಡಬಹುದು. 12 ರಾಶಿಗಳ ದೈನಂದಿನ ಬದುಕು ನಿರ್ಧರಿತವಾಗಿರುವುದು ಗ್ರಹಗತಿಗಳ ಬದಲಾವಣೆಯ ಆಧಾರದ ಮೇಲೆ. ಹಾಗೆ ಈ ಗ್ರಹಗಳ ಸಂಚಾರ ಹಾಗೂ ಸಂಯೋಗವು ಶುಭ ಹಾಗೂ ಅಶುಭ ಯೋಗಗಳ ತರುವುದು ನೋಡಬಹುದು.
ಇನ್ನು ಗುರುವಿನ ಸಂಚಾರದಲ್ಲಿನ ಬದಲಾವಣೆಗಳು ಎಲ್ಲಾ ರಾಶಿ ಮೇಲೆಯೂ ಉಂಟಾಗುವುದು ನೋಡಬಹುದು. ಹಾಗೆ ನಾವಿಂದು ಗುರು ಬದಲಾವಣೆಯ ಕುರಿತಾಗಿ ತಿಳಿದುಕೊಳ್ಳೋಣ. ಜ್ಯೋತಿಷ್ಯದಲ್ಲಿ ಗುರುವು ಅತ್ಯಂತ ಶಕ್ತಿಶಾಲಿ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುವಿನ ಅಂಶವು ಅನುಕೂಲಕರವಾಗಿದ್ದರೆ, ಅವರಿಗೆ ಎಲ್ಲಾ ಪ್ರಯೋಜನಗಳು ದೊರೆಯುತ್ತವೆ.

ಗುರುವು ಪ್ರತಿ 12-13 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜೂನ್ 2 2026 ರಂದು ಗುರು ತನ್ನ ಅತ್ಯುನ್ನತ ರಾಶಿಯಾದ ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ, ಇದು ಪ್ರಬಲ ಹಂಸ ರಾಜಯೋಗವನ್ನು ಸೃಷ್ಟಿಸುತ್ತದೆ. ಗುರುವು ಸೃಷ್ಟಿಸಿದ ಈ ಹಂಸ ರಾಜಯೋಗವು ಕೆಲವು ರಾಶಿ ಜನರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ಈ ಅವಧಿಯಲ್ಲಿ, ಅವರು ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನ ಎರಡರಲ್ಲೂ ಅಪಾರ ಪ್ರಯೋಜನಗಳನ್ನು ಪಡೆಯುತ್ತಾರೆ.
ಹಾಗಾದ್ರೆ ಗುರುವಿನ ಈ ಸಂಚಾರದಿಂದ ಯಾರಿಗೆಲ್ಲಾ ಶುಭಯೋಗವಿದೆ ಯಾರಲ್ಲಿ ಅನುಕೂಲಕರ ವಿದ್ಯಮಾನ ನೋಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕರ್ಕ ಜನರು ಈ ಯೋಗದಿಂದಾಗಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಲಿದ್ದಾರೆ. ಈ ಅವಧಿಯಲ್ಲಿ ಅವರು ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮ ಹಲವು ಆರ್ಥಿಕ ವಿಚಾರಗಳು ಯಾವುದೇ ಅಡ್ಡಿಗಳಿಲ್ಲದೆ ನಡೆಯಲಿದೆ. ಸಾಲ ಹೆಚ್ಚಾದರು ಅದರ ಸಮಸ್ಯೆಯಲ್ಲಿನ ಪರಿಹಾರ ಪಡೆಯುವ ದಿನಗಳಿವೆ. ವೆಚ್ಚಗಳ ಕಡಿಮೆ ಮಾಡುವ ಕುರಿತಾಗಿ ನೀವು ಆಲೋಚಿಸಬಹುದು. ಆಪ್ತರಿಂದ ಬರಬೇಕಿದ್ದ ಹಣವು ನಿಮ್ಮ ಕೈಸೇರುವುದು, ವರ್ಷದ ಕೊನೆಯ ತಿಂಗಳುಗಳಲ್ಲಿ ಈ ಯೋಗದಿಂದ ನಿಮಗೆ ಗುರುಬಲವಿದೆ. ಇದು ವೈಯಕ್ತಿಯ ಯಶಸ್ಸಿಗೆ ಕಾರಣವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ 2026 ರಲ್ಲಿ ರೂಪುಗೊಳ್ಳುವ ಹಂಸ ರಾಜಯೋಗವು ಆದಾಯ ಮತ್ತು ಹಣಕಾಸಿನಲ್ಲಿ ಭಾರಿ ಸುಧಾರಣೆಯನ್ನು ತರಬಹುದು. ಈ ಅವಧಿಯಲ್ಲಿ ಅವರ ಆದಾಯದ ಮೂಲಗಳು ಹೆಚ್ಚಾಗುತ್ತವೆ ಮತ್ತು ಅವರು ವಿವಿಧ ವಿಧಾನಗಳ ಮೂಲಕ ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಕುಟುಂಬ ಜೀವನದಲ್ಲಿ ಶಾಂತಿ ಇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ರಾಜಕೀಯವಾಗಿ ನೀವು ಗುರುತಿಸಿಕೊಳ್ಳಲು ಮುಂದಾದರೆ ಈ ಸಮಯ ನಿಮಗೆ ಒಳಿತು ಮಾಡಲಿದೆ. ನಿಮ್ಮ ವ್ಯವಹಾರಗಳಿಂದ ಬುದ್ದಿ ಕಲಿಯುವಿರಿ. ಆಪ್ತರಿಂದ ದೊಡ್ಡ ಲಾಭ ಪಡೆಯಬಹುದು.
ತುಲಾ ರಾಶಿ
ಹಂಸ ರಾಜಯೋಗವು ತುಲಾ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ತರಲಿದೆ. ಅವಿವಾಹಿತರಲ್ಲಿ ವಿವಾಹ ಯೋಗದಿಂದ ಹಿಡಿದು ಉದ್ಯೋಗ ಯೋಗ ನೀಡಲಿದೆ. ಎಲ್ಲಾ ಪ್ರಯತ್ನಗಳು ಈಗ ಯಶಸ್ಸನ್ನು ನೀಡುತ್ತವೆ. ನಿಮ್ಮ ಕೌಶಲ್ಯದ ಗುರುತಿಸುವಿಕೆ ನೋಡಬಹುದು. ಮನದ ಶಾಂತಿಗೆ ಕಾರಣವಾಗುವ ಒಂದಿಷ್ಟು ಕೆಲಸಗಳನ್ನು ಮಾಡುವಿರಿ. ನಿಮ್ಮ ಆರ್ಥಿಕ ವಿಚಾರದಲ್ಲಿನ ಸುಧಾರಣೆ ನೋಡಬಹುದು. ಮಕ್ಕಳ ವಿಚಾರದಲ್ಲಿನ ದೊಡ್ಡ ಸಮಸ್ಯೆಯೊಂದು ಈ ಸಮಯದಲ್ಲಿ ಬಗೆಹರಿಯಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications