Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
100 ವರ್ಷದ ಬಳಿಕ ದೀಪಾವಳಿಯಲ್ಲಿ ಹಂಸಯೋಗ: ಈ ರಾಶಿಗಳ ಅದೃಷ್ಟ ಬದಲು.! ಹುಡುಕಿ ಬರಲಿದೆ ಯಶಸ್ಸು!
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗಿದೆ. ಅದ್ರಲ್ಲೂ ಹಿಂದೂ ಕ್ಯಾಲೆಂಡರ್ ಪ್ರಕಾರ ಶುಭ ಸಮಯದಲ್ಲಿ ಉಂಟಾಗವಂತಹ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ವಿಶೇಷತೆಗಳಿಗೆ ಕಾರಣವಾಗುತ್ತದೆ. ಗ್ರಹಗಳ ಸ್ಥಾನಪಲ್ಲಟದಿಂದ ಹಲವು ರೀತಿಯ ಶುಭ ಹಾಗೂ ಶುಭಗಳ ನೋಡಬಹುದು, ಹಾಗೆ ವಿಶೇಷ ದಿನದಲ್ಲಿನ ಗ್ರಹಗಳ ಚಲನೆಯು ಅಪರೂಪದ ಯೋಗಗಳನ್ನು ಉಂಟು ಮಾಡುವುದು ಸಹ ನೋಡಬಹುದು.
ಇನ್ನು ನವರಾತ್ರಿ ದಸರಾ ಮುಗಿಯುತ್ತಿದ್ದಂತೆ ದೀಪಾವಳಿ ಆರಂಭವಾಗುತ್ತಿದೆ. ಈ ಸಮಯದಲ್ಲಿ ಹಲವು ರಾಶಿಗಳ ಚಲನೆಯಲ್ಲಿನ ಬದಲಾಣೆಯು ವಿಶೇಷ ಹಾಗೂ ಅಪರೂಪದ ಯೋಗಗಳನ್ನು ತರಲಿದೆ. ಅಕ್ಟೋಬರ್ 20ರಂದು ದೀಪಾವಳಿ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಗುರು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಹಲವು ರೀತಿಯ ಅಪರೂಪದ ಯೋಗ ರೂಪುಗೊಳ್ಳುವುದು ನೋಡಬಹುದು.

ದೀಪಾವಳಿಯ ಸಮಯದಲ್ಲಿ ಗುರುವಿನ ಈ ಚಲನೆಯಿಂದಾಗಿ 100 ವರ್ಷಗಳ ಬಳಿಕ ಹಂಸಯೋಗ ರೂಪುಗೊಳ್ಳುತ್ತಿದೆ. ಈ ಯೋಗವು 100 ವರ್ಷಗಳ ಬಳಿಕ ದೀಪಾವಳಿಯ ದಿನವೇ ರೂಪುಗೊಳ್ಳುತ್ತಿದೆ. ಹೀಗಾಗಿ ಇದನ್ನು ಅತ್ಯಂತ ವಿಶೇಷ ಹಾಗೂ ಅಪರೂಪದ ಯೋಗ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಗುರಿವಿನ ಯೋಗ ಯಾವ ಜಾತಕದಲ್ಲಿ ಧನಾತ್ಮಕ ರೀತಿಯಲ್ಲಿ ಇರಲಿದ್ಯೋ ಅವರಿಗೆ ಅತ್ಯಂತ ಶುಭಕರ ಯೋಗಗಳ ತರಲಿದೆ ಎಂದು ಹೇಳಲಾಗಿದೆ.
ಈಗ ಈ ಹಂಸ ಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆಯೂ ಉಂಟಾಗುತ್ತಿದೆ. ಕೆಲವು ರಾಶಿ ಜನರಿಗೆ ಅದೃಷ್ಟವನ್ನು ತರಲಿದೆ. ಅದರಲ್ಲು ಬಹುಕಾಲದ ಬಯಕೆಯೊಂದು ಈಡೇರಿಸಿಕೊಳ್ಳಲಿದ್ದೀರಿ. ವೃತ್ತಿ ಜೀವನ ಹಾಗೆ ವೈವಾಹಿಕ ಜೀವನ ಸಂಬಂಧವಾಗಿ ಹಲವು ರೀತಿಯ ಲಾಭಗಳನ್ನು ನೋಡುವಿರಿ. ಹಾಗಾದ್ರೆ ಈ ಹಂಸ ಯೋಗದಿಂದಾಗಿ ಯಾರಿಗೆಲ್ಲಾ ಶುಭವಿದೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
ಗುರು ತುಲಾ ರಾಶಿಯ 10ನೇ ಮನೆಯಲ್ಲಿ ಚಲಿಸುವುದರಿಂದ ನಿಮ್ಮಲ್ಲಿ ಉತ್ತಮ ಲಾಭವಿದೆ. ಕಚೇರಿ ಕೆಲಸಗಳಲ್ಲಿ ಶುಭವಿದೆ. ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದಂತಹ ವಿಚಾರದಲ್ಲಿ ಅಡ್ಡಿಗಳು ನಿವಾರಣೆಯಾಗಲಿದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಕೆಲಸದಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಲಭ್ಯವಾಗುತ್ತದೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ವೈವಾಹಿಕ ಜೀವನದಲ್ಲಿದ್ದ ಸಮಸ್ಯೆಗಳು ದೂರಾಗಲಿದೆ. ಪರಿಹಾರ ಆಗದೆ ಉಳಿದಿದ್ದಂತಹ ಕೌಟುಂಬಿಕ ಸಮಸ್ಯೆಯೊಂದರಿಂದ ಮುಕ್ತಿ ಪಡೆಯುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯ ಮೊದಲ ಮನೆಯಲ್ಲೇ ಹಂಸ ಯೋಗ ರೂಪುಗೊಳ್ಳುತ್ತದೆ. ಹಾಗೆ ಗುರುವಿನ ಸಂಚಾರದ ಲಾಭವು ನಿಮಗಿರುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಅದ್ರಲ್ಲೂ ರಾಜಕೀಯದಲ್ಲಿ ಗುರುತಿಸಿಕೊಂಡವರಿಗೆ, ಸಮಾಜಸೇವೆಯಂತಹ ಕೆಲಸದಲ್ಲಿ ಭಾಗಿಯಾಗಿರುವ ಮಂದಿಗೆ ಅಭೂತಪೂರ್ವ ಬೆಂಬಲ ಸಿಗಲಿದೆ. ಉದ್ಯಮಿಗಳಿಗೆ ಉತ್ತಮ ಲಾಭ ತರುವ ದೊಡ್ಡ ಒಪ್ಪಂದಗಳು ಸಿಗುತ್ತವೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಂಗಾತಿಯೊಂದಿಗಿನ ಸಂಬಂಧವು ಸಿಹಿಯಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧವಾಗಿ ಶುಭ ಸುದ್ದಿಗಳು ಬರಲಿವೆ. ವಾಹನ ಸಂಬಂಧವಾಗಿ ಎದುರಾಗಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ 9ನೇ ಮನೆಯಲ್ಲಿ ಹಂಸ ಯೋಗ ರೂಪುಗೊಳ್ಳುತ್ತಿದೆ. ಇದು ಹಲವು ರಾಶಿಯ ಜನರಲ್ಲಿ ಅದೃಷ್ಟ ತರಲಿದೆ. ನಿಮ್ಮ ಸಾಲದ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ನೀವು ಕಷ್ಟಪಡುತ್ತಿದ್ದರೆ ಬಹಳ ಅನುಕೂಲವಿದೆ. ಪಿತ್ರಾರ್ಜಿತ ಆಸ್ತಿ, ಅಥವಾ ಮನೆಯ ಆಸ್ತಿ ಕುರಿತಾದ ವಿಚಾರದಲ್ಲಿ ಅಡೆತಡೆಗಳನ್ನು ನೀವು ಎದುರಿಸಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯದಲ್ಲಿ ಸುಧಾರಣೆ ಇರಲಿದೆ. ದೀಪಾವಳಿಯ ನಂತರ ಕೆಲಸದ ವಿಚಾರದಲ್ಲಿ ನಿಮಗೆ ಹೊಸ ಜವಾಬ್ದಾರಿಗಳು ಬರಬಹುದು. ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











