Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜುಲೈ 9ರಂದು ಗುರು ಉದಯ: ಈ ರಾಶಿಯವರಿಗೆ ಕಂಟಕ ಎದುರಾಗೋದು ಖಚಿತ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಗುರು ಗ್ರಹದ ಚಲನೆಯನ್ನು ಕೂಡ ನಾವು ಬಹಳ ಪರಿಣಾಮಕಾರಿ ಎಂದು ಪರಿಗಣಿಸಿರುವುದು ನೋಡಬಹುದು. ಇಲ್ಲಿ ಗುರು ವಿವಾಹ, ಸಂಬಂಧ, ಔದ್ಯೋಗಿಕ ವಿವಾರವಾಗಿಯೂ ಗುರುವಿನ ಕೃಪ ಇರಬೇಕಾಗುತ್ತದೆ. ಹಾಗೆ ಗುರುವಿನಿಂದಾಗಿ ನಿಮಗೆ ಹಲವು ರೀತಿಯ ಲಾಭಗಳಿವೆ.
ಇನ್ನು ಗುರು ಗ್ರಹವು ಜುಲೈ 9 ರಂದು ರಾತ್ರಿ 10:50ಕ್ಕೆ ಮಿಥುನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದು ವಿಶೇಷ ದಿನ ಎಂದು ಪರಿಗಣಿಸಲಾಗಿದೆ. ಅದ್ರಲ್ಲೂ ಉದ್ಯೋಗ, ವಿವಾಹ, ಸಂಬಂಧ, ವ್ಯಾಪಾರ ಸೇರಿದಂತೆ ಹಲವು ವಿಚಾರಗಳಲ್ಲಿ ಲಾಭದಾಯಕ ದಿನಗಳ ತರುವಂತಹ ಸಮಯ ಎಂದು ಹೇಳಲಾಗಿದೆ. ಹಾಗೆ ಮತ್ತೆ ಕೆಲವರಿಗೆ ಗುರು ಉದಯವು ಅಶುಭಕಾರಕ.

ಗುರು ಉದಯಿಸಿದಾಗ ಅದರ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ. ಹಾಗಾದ್ರೆ ಮಿಥುನ ರಾಶಿಯಲ್ಲಿ ಗುರು ಉದಯ ಯಾವ ರಾಶಿಯವರಿಗೆ ಸಮಸ್ಯೆಗಳ ತರಬಹುದು, ಇದು ಯಾರಿಗೆ ಅಶುಭಕಾರಕವಾಗಬಹುದು. ಯಾರಲ್ಲಿ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ ಮೇಲೆ ಪರಿಣಾಮ ಗುರು ಉದಯದಿಂದ ಹಲವು ಪರಿಣಾಮ ನೋಡಬಹುದು. ಭಾವನಾತ್ಮಕವಾಗಿ ನಿಮಗೆ ಒಂಟಿತನ ಕಾಡುವ ಸಾಧ್ಯತೆ ಇದೆ. ಆತುರದಿಂದ ಮಾಡುವ ಕೆಲಸದಲ್ಲಿ ವಿಫಲತೆ ಎದುರಾಗುತ್ತದೆ. ನೀವು ಅವಿವಾಹಿತರಾಗಿದ್ದರೆ ಮನೆಯಲ್ಲಿ ಅಹಿತಕರ ಸುದ್ದಿ ಕೇಳಬೇಕಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಗಳಿಗೆ ಹಲವು ವಿಚಾರಗಳು ಅಡ್ಡಿಯಾಗಿ ಸಮಸ್ಯೆಗಳ ತರಬಹುದು. ಹೆಚ್ಚಿನದಾಗಿ ಸರ್ಕಾರಿ ನೌಕರರು ಜಾಗೃತೆ ವಹಿಸಬೇಕಿದೆ, ಅನಾವಶ್ಯಕ ಸಮಸ್ಯೆಗಳನ್ನು ತಾವಾಗಿಯೇ ಮೈ ಮೇಲೆ ಎಳೆದುಕೊಳ್ಳಬೇಡಿ. ನ್ಯಾಯಾಲಯ ಸಂಬಂಧಿ ವಿಚಾರಗಳಲ್ಲಿ ಹಿನ್ನಡೆ ಅನುಭವಿಸುವಿರಿ. ತಂದೆ ತಾಯಿಯ ನಿರ್ಧಾರದ ವಿರುದ್ಧ ನೀವು ಹೋಗಬೇಕಾಗಬಹುದು, ಇದು ಕುಟುಂಬದಲ್ಲಿ ಅಶಾಂತಿಗೆ ಕಾರಣವಾಗಬಹುದು, ಸಹೋದರರೊಂದಿಗೂ ಮನಸ್ತಾಪ ಇರಬಹುದು.
ಕನ್ಯಾ ರಾಶಿ
ಗುರುವಿನ ಉದಯವು ಕನ್ಯಾ ರಾಶಿಯವರಲ್ಲಿ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ. ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುವ ಹಲವು ಘಟನೆಗಳು ನಡೆಯಬಹುದು. ಹೂಡಿಕೆಗಳಲ್ಲಿ ನೀವು ಬಯಸಿದಂತೆಹ ಲಾಭಕರ ವಾತಾವರಣ ಇರದೆ ಇರಬಹುದು. ಆರ್ಥಿಕ ಸಮತೋಲನ ಕಷ್ಟವಾಗಬಹುದು. ಆಪ್ತರಿಂದ ಹಣ ಮರಳಿ ಪಡೆಯುವುದು ವಿಳಂಬವಾಗಲಿದೆ. ಕಟ್ಟಡ ನಿರ್ಮಾಣ, ಮನೆ ನಿರ್ಮಾಣದಂತಹ ಕೆಲಸದಲ್ಲಿ ಭಾಗಿಯಾದವರಿಗೆ ಹಣ ಕೈಗೂಡದೆ ಇರಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುವುದಿಲ್ಲ, ಗೃಹಿಣಿಯರ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ವಿವಾಹಿತರಲ್ಲಿ ದೊಡ್ಡ ಮಟ್ಟದ ದಾಂಪತ್ಯ ವಿಚಾರದ ಗೊಂದಲ ಅಥವಾ ಸಮಸ್ಯೆ ಎದುರಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ಗುರು ಗ್ರಹದ ಉದಯವು ಅಡೆತಡೆಗಳಿಗೆ ಕಾರಣವಾಗಬಹುದು. ನಿಮ್ಮ ತಾಳ್ಮೆ ಪರೀಕ್ಷಿಸುವಂತಹ ಹಲವು ವಿಚಾರಗಳು ನಡೆಯಲಿದೆ. ನಿಮ್ಮ ಉದ್ಯೋಗ ಸಂಬಂಧ ದೊಡ್ಡ ಬದಲಾವಣೆಗಳಿಗೆ ನೀವು ಒಳಗಾಗಬೇಕಾಗಬಹುದು, ಜವಾಬ್ದಾರಿ ಹೆಚ್ಚಳವು ಒತ್ತಕ್ಕೆ ಕಾರಣವಾಗಬಹುದು. ನಿಮ್ಮ ಪ್ರಯಾಣಗಳು ನೀವು ಬಯಸಿದಂತಹ ಫಲಿತಾಂಶ ನೀಡದೆ ಇರಬಹುದು. ನಿಮ್ಮ ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ವಿಚಾರಗಳು ಕೂಡ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳ ಸಂಬಂಧ ನಿಯಮಿತ ಪರೀಕ್ಷೆಗಳಿಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಆಸ್ತಿ ವಿಚಾರವಾಗಿ ಉಂಟಾಗಿರುವ ಮನಸ್ತಾಪವು ಹೆಚ್ಚಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications