Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಗುರು ಉದಯ: ಈ ವರ್ಷ 4 ರಾಶಿಯವರಿಗೆ ಗುರುವಿನ ಪ್ರಭಾವ ತುಂಬಾ ಚೆನ್ನಾಗಿರಲಿದೆ
ಮೇ 1ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸಿದ ಗುರು ಇನ್ನು ಒಂದು ವರ್ಷ ವೃಷಭ ರಾಶಿಯಲ್ಲಿ ಇರಲಿದೆ. ಆದರೆ ವೃಷಭ ರಾಶಿಯಲ್ಲಿದ್ದ ಗುರು ಅಸ್ತವಾಗಿತ್ತು, ಇದೀಗ ಜೂನ್ 3ಕ್ಕೆ ಗುರು ಉದಯವಾಗಿದೆ.
ಗುರು ಅಸ್ತವಾಗಿದ್ದಾಗ ಅದರ ಒಳ್ಳೆಯ ಪರಿಣಾಮ ಸಿಗುವುದಿಲ್ಲ, ಅದರ ಪ್ರಭಾವದ ಶಕ್ತಿ ಕಡಿಮೆ ಇರುತ್ತದೆ, ಇದೀಗ ಗುರು ಉದಯವಾಗಿರುವುದರಿಂದ ಈ ರಾಶಿಯವರು ನಿಮ್ಮ ಬದುಕಿನಲ್ಲಿ ಧನಾತ್ಮಕವಾದ ಬದಲಾವಣೆ ಕಾಣುತ್ತೀರಿ.

ಮೇಷ ರಾಶಿ
ಮೇಷ ರಾಶಿಯವರಿಗೆ ಗುರುವಿನ ಉದಯ ಸ್ಥಿತಿಯು ಶುಭವಾಗಿರುತ್ತದೆ. ಈ ಅವಧಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮಗೆ ಉತ್ತಮ ಫಲ ನೀಡಲಿದೆ. ಈ ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿಉತ್ತಮ ಫಲ ಸಿಗಲಿದೆ.
ವೈವಾಹಿಕ ಜೀವನದಲ್ಲಿ ಸಂತೋಷ, ಶಾಂತಿ ಇರಲಿದೆ. ಈ ಸಮಯದಲ್ಲಿ, ನಿಮ್ಮ ಸಂಗಾತಿಯು ಪ್ರತಿ ಹಂತದಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ , ನಿಮ್ಮ ಸಂಗಾತಿಯ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಲಾಭ ಗಳಿಸುತ್ತೀರಿ. ಹಾಗಾಗಿ ಈ ವರ್ಷ ನಿಮಗೆ ಅದ್ಭುತವಾಗಿರಲಿದೆ.
ಕೆಲಸದಲ್ಲಿ ಬದಲಾವಣೆ ಮಾಡಲು ಬಯಸುತ್ತಿದ್ದರೆ ಈ ಅವಧಿ ನಿಮಗೆ ತುಂಬಾ ಉತ್ತಮವಾಗಿರಲಿದೆ. ಇನ್ನು ಈ ಅವಧಿಯಲ್ಲಿ ಮನೆ ಖರೀದಿಸುವುದು ಅಥವಾ ಮನೆಕಟ್ಟುವುದು ಬಯಸಿದರೆ ಸಾಧ್ಯವಾಗುವುದು.
ವೃಷಭ ರಾಶಿ
ವೃಷಭ ರಾಶಿಯ ಲಗ್ನ ಮನೆಯಲ್ಲಿ ಇರುವ ಗುರುವು ವೃಷಭ ರಾಶಿಗೆ ಅನೇಕ ಮಂಗಳಕರ ಸಂದರ್ಭಗಳನ್ನು ಸೃಷ್ಟಿಸಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುತ್ತೀರಿ, ಕುಟುಂಬದಲ್ಲಿ ಖುಷಿ ಇರಲಿದೆ. ಮದುವೆ ಪ್ರಾಯದವರು ಮನೆಯಲ್ಲಿದ್ದರೆ ಮನೆಯಲ್ಲಿ ಶುಭಕಾರ್ಯ ನಡೆಯುವುದು. ತುಂಬಾ ಸಮಯದಿಂದ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಉತ್ತಮ ಲಾಭ ಪಡೆಯುತ್ತೀರಿ, ಇನ್ನು ವೃತ್ತಿ ಬದುಕಿನಲ್ಲಿ ಬಡ್ತಿ ಸಿಗಲಿದೆ, ಸಂಬಳ ಹೆಚ್ಚಾಗುವುದು.
ವೈವಾಹಿಕ ಜೀವನ ಚೆನ್ನಾಗಿರಲಿದೆ. ಗುರು ವೃಷಭ ರಾಶಿಯಲ್ಲಿರುವಾಗ ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗುರುವಿನ ಉದಯವು ಶುಭ ಫಲಿತಾಂಶ ನೀಡುವುದು. ಗುರು ವೃಷಭ ರಾಶಿಯಲ್ಲಿ ಇರುವಾಗ ಮಿಥುನ ರಾಶಿಯಲ್ಲಿ 12ನೇ ಸ್ಥಾನದಲ್ಲಿ ಇರಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ಯಶಸ್ಸು ಗಳಿಸುತ್ತಾರೆ. ಹೂಡಿಕೆಗೆ ಈ ಸಮಯ ಚೆನ್ನಾಗಿದೆ, ನೀವು ಉತ್ತಮ ಲಾಭ ಗಳಿಸುತ್ತೀರಿ, ಬಹುದಿನ ಆಸೆ ಈಡೇರಲಿದೆ.
ಮನೆ ಅಥವಾ ವಾಹನ ಖರೀದಿಸುವ ನಿಮ್ಮ ಆಸೆ ನೆರವೇರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಉದ್ಯೋಗಿಗಳು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಮಿಥುನ ರಾಶಿಯವರು ಆರ್ಥಿಕ ಸ್ಥಿತಿ ಬಲವಾಗುವುದು. ಮನೆಯಲ್ಲಿ ಮಂಗಳಕರ ಕಾರ್ಯ ನಡೆಯಲಿದೆ. ಗುರು ವೃಷಭ ರಾಶಿಯಲ್ಲಿರುವ ಈ ಅವಧಿ ನಿಮಗೆ ಎಲ್ಲಾ ರೀತಿಯಿಂದಲೂ ತುಂಬಾನೇ ಅನುಕೂಲಕರವಾಗಿದೆ.
ಸಿಂಹ ರಾಶಿ
ಗುರು ಉದಯವಾಗಿರುವುದರಿಂದ ಸಿಂಹ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ, ಈ ಅವಧಿಯು ಈ ಜನರಿಗೆ ಆರ್ಥಿಕ ದೃಷ್ಟಿಕೋನದಿಂದ ಮಂಗಳಕರವಾಗಿರುತ್ತದೆ ಸ್ವಂತ ವ್ಯವಹಾರವನ್ನು ಹೊಂದಿರುವ ಜನರು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಅಲ್ಲದೆ ವ್ಯಾಪಾರ ವಿಸ್ತರಣೆಗೆ ಬಯಸಿದರೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ನೀವು ಲಾಭ ಪಡೆಯುತ್ತೀರಿ, ಆರ್ಥಿಕವಾಗಿ ಸುಧಾರಣೆ ಕಂಡು ಬರುವುದು.
ಈ ಅವಧಿಯಲ್ಲಿ, ನಿಮ್ಮ ಗೌರವ ಮತ್ತು ಪ್ರತಿಷ್ಠೆ ಎರಡೂ ಹೆಚ್ಚಾಗುತ್ತದೆ. ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ಗಳಿಸುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಮದುವೆಯಾಗಲಿದೆ. ಈ ಗುರುವಿನ ಕೃಪೆಯಿಂದ ಬದುಕಿನಲ್ಲಿ ಯಶಸ್ಸು ಕಾಣುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications