Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Guru Transit 2024: ಗುರು ಸಂಚಾರದಿಂದ ಈ 3 ರಾಶಿಯವರಿಗೆ ಕುಬೇರ ಯೋಗ, ನಿಮ್ಮ ಆಸೆ ಈಡೇರುವ ಸಮಯವಿದು
ವೈದಿಕ ಶಾಸ್ತ್ರದಲ್ಲಿ ಗುರು ಮತ್ತು ಶುಕ್ರನನ್ನು ಅದೃಷ್ಟದ ಗ್ರಹಗಳೆಂದು ಪರಿಗಣಿಸಲಾಗಿದೆ. ಈ ಗ್ರಹಗಳು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇದ್ದರೆ ಯಾವುದಕ್ಕೂ ಕೊರತೆ ಇರಲ್ಲ, ಇದೀಗ ಮೇ 1ಕ್ಕೆ ಗುರು ತನ್ನ ರಾಶಿ ಬದಲಾವಣೆ ಮಾಡಿದೆ, ಇನ್ನು 12 ತಿಂಗಳು ಇದೇ ರಾಶಿಯಲ್ಲಿ ಇರಲಿದೆ.
ಗುರು ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಗೆ ಸಂಚರಿಸಿದಾಗ ಅದರ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲಿರುತ್ತದೆ. ರಾಶಿಗಳಲ್ಲಿ ಗುರುವಿರುವ ಸ್ಥಾನದ ಪ್ರಕಾರ ಅದು ಬೀರುವ ಪ್ರಭಾವ ಇರುತ್ತದೆ ಎಂದು ಹೇಳಲಾಗುವುದು. ಅದರಲ್ಲೂ ಗುರು ವೃಷಭ ರಾಶಿಗೆ ಸಂಚರಿಸಿದಾಗ ಕೆಲವು ರಾಶಿಗಳಲ್ಲಿ ಕುಬೇರ ಯೋಗ ಉಂಟಾಗಿದೆ. ಆದ್ದರಿಂದ ಆ ರಾಶಿಯವರು ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯುತ್ತಾರೆ.

ಕುಬೇರ ಯೋಗದಿಂದಾಗಿ ಆದಾಯ ಹೆಚ್ಚಾಗಲಿದೆ, ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗುವುದು, ಈ ಅವಧಿಯಲ್ಲಿ ಹಣದ ಸ್ಥಿತಿ ಚೆನ್ನಾಗಿರುವುದರಿಂದ ಈ ಅವಧಿ ಈ ರಾಶಿಗಳಿಗೆ ತುಂಬಾನೇ ಒಳ್ಳೆಯದಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯಲ್ಲಿ 2ನೇ ಮನೆಯಲ್ಲಿ ಗುರು ಇದ್ದು ಕುಬೇರ ಯೋಗ ರೂಪುಗೊಂಡಿದೆ. ಈ ಕುಬೇರ ಯೋಗದ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗಲಿದೆ. ನೀವು ಬಯಸಿದ್ದು ಈ 12 ತಿಂಗಳ ಒಳಗೆ ನೆರವೇರಲಿದೆ. ಅಲ್ಲದೆ ನೀವು ಏನಾದರೂ ಉದ್ಯಮ ಮಾಡುತ್ತಿದ್ದರೆ ಒಳ್ಳೆಯ ಲಾಭ ಪಡೆಯುತ್ತೀರಿ, ನಿರೀಕ್ಷೆಯೇ ಮಾಡಿರಲ್ಲ ಅಷ್ಟೊಂದು ಲಾಭಗಳಿಸುತ್ತೀರಿ. ಉದ್ಯೋಗಿಗಳು ಪ್ರಗತಿ ಕಾಣುತ್ತಾರೆ, ನಿಮ್ಮ ಉದ್ಯೋಗದಲ್ಲಿ ಬಡ್ತಿ, ಸಂಬಳ ಹೆಚ್ಚಾಗುವುದು ಈ ರೀತಿ ನಿಮಗೆ ಒಳಿತಾಗಲಿದೆ. ಬ ಇನ್ನು ನೀವು ಮತ್ತಷ್ಟು ಉತ್ತಮ ಸ್ಥಾನ ಗಳಿಸಲು ಸ್ಥಾನ ಬದಲಾಯಿಸಲು ಬಯಸಿದರೆ ಅದು ಕೂಡ ನೆರವೇರಲಿದೆ. ಹೀಗಾಗಿ ಈ ಗುರು ಸಂಚಾರ ನಿಮ್ಮ ಪಾಲಿಗೆ ಅದೃಷ್ಟದ ಬಾಗಿಲು ತೆರೆದಿದೆ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ 11ನೇ ಮನೆಯಲ್ಲಿ ಕುಬೇರ ಯೋಗವು ರೂಪುಗೊಂಡಿದೆ ಈ ಯೋಗದ ಫಲದಿಂದಾಗಿ ನೀವು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಈ ಅದೃಷ್ಟದ ಬೆಂಬಲದಿಂದ, ಅಪೂರ್ಣ ಮತ್ತು ಕಷ್ಟಕರವಾದ ಕೆಲಸಗಳು ಸಹ ಬಹಳ ಸುಲಭವಾಗಿ ಪೂರ್ಣವಾಗಲಿದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಜಯ ನಿಮ್ಮದಾಗಲಿದೆ. ಯಾವುದೇ ವ್ಯವಹಾರದಲ್ಲಿ ತೊಡಗಿರುವ ಜನರು ಉತ್ತಮ ಲಾಭ ಮತ್ತು ದೊಡ್ಡ ವ್ಯವಹಾರವನ್ನು ಪಡೆಯಬಹುದು. ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ, ಆಸ್ತಿ ಖರೀದಿ ಅಥವಾ ವಾಹನ ಖರೀದಿಯ ಆಸೆ ಈಡೇರಲಿದೆ.
ಸಿಂಹ ರಾಶಿ
ಗುರುವು ವೃಷಭ ರಾಶಿಯನ್ನು ಪ್ರವೇಶ ಮಾಡಿದಾಗ ಸಿಂಹ ರಾಶಿಯಲ್ಲಿ ಕುಬೇರ ಯೋಗ ಉಂಟಾಗಲಿದೆ. ಈ ಯೋಗದ ಬಲದಿಂದಾಗಿ ನಿಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ಒಳ್ಳೆಯ ಲಾಭ ಸಿಗಲಿದೆ. ನಿಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ. ನಿಮಗೆ ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ಬರಲಿದೆ. ವ್ಯಾಪಾರಿಗಳು ಕೂಡ ಈ ದಿನ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications