ಕೃತಿಕಾ ನಕ್ಷತ್ರಕ್ಕೆ ಗುರು ಸಂಚಾರ: ಇದರಿಂದ ನಿಮ್ಮ ಮೇಲಾಗುವ ಪ್ರಭಾವವೇನು?

ವೈದಿಕ ಜ್ಯೋತಿಷ್ಯದಲ್ಲಿ, ಗುರುವು ಶುಭ ಫಲವನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. . ಮೇ 29, 2024 ರಂದು, ಗುರುವು ಕೃತಿಕಾ ನಕ್ಷತ್ರದ ನಾಲ್ಕನೇ ಸ್ಥಾನದಲ್ಲಿ ಸಾಗಿದ್ದಾನೆ . ಈ ಸಂಚಾರ ನಿಮಗೆ ಶುಭ ಫಲ ನೀಡಿದೆಯೇ ನೋಡೋಣ ಬನ್ನಿ:

Guru Transit In To Krithika Nakshtra

ಮೇಷ ರಾಶಿ

ಗುರುವಿನ ಈ ಸಂಚಾರವು ಮೇಷ ರಾಶಿಯವರ ಸಂಪತ್ತು ಹೆಚ್ಚಿಸಲಿದೆ. ಈ ಸಮಯದಲ್ಲಿ, ನೀವು ಹೊಸ ಆಸ್ತಿ ಅಥವಾ ಯಾವುದೇ ದುಬಾರಿ ವಸ್ತುವನ್ನು ಖರೀದಿಸಲು ಅವಕಾಶವಿರುತ್ತದೆ. ಕುಟುಂಬ ಸದಸ್ಯರು ಅಥವಾ ಒಡಹುಟ್ಟಿದವರ ಜೊತೆ ನಿಮ್ಮ ಸಂಬಂಧದಲ್ಲಿ ಕೆಲ ಭಿನ್ನಾಭಿಪ್ರಾಯ ಕಂಡು ಬರುವುದು, ನೀವು ಹಣ ಮತ್ತು ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳನ್ನು ಎದುರಿಸಬೇಕಾಗಬಹುದು ತಾಳ್ಮೆಯಿಂದ ಎದುರಿಸಬೇಕು.

ವೃಷಭ ರಾಶಿ

ಗುರುವಿನ ಸಾಗಣೆಯು ವೃತ್ತಿ ಬದುಕು ಗಟ್ಟಿಯಾಗಿಸಲು ಸಲಹೆ ಮಾಡುತ್ತದೆ. ಕೆಲವೊಂದು ಸತ್ಯವನ್ನು ನೀವು ಬಹಿರಂಗವಾಗಿ ಮಾತನಾಡುವುದರಿಂದ ಸಮಸ್ಯೆ ಎದುರಿಸಬೇಕಾಗುವುದು, ಅನಗ್ಯತ ಸಮಸ್ಯೆ ಮೈ ಮೇಲೆ ಎಳೆದುಕೊಳ್ಳಬೇಡಿ.

ಮಿಥುನ ರಾಶಿ

ಈ ಅವಧಿಯಲ್ಲಿ ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ, ಈ ಅವಧಿಯಲ್ಲಿ ಹಣ, ಕಾನೂನು ಅಥವಾ ಅಪರಿಚಿತ ಶತ್ರುಗಳಿಂದ ಸಮಸ್ಯೆ ಎದುರಾಗಬಹುದು, ಅತಿಯಾದ ಆತ್ಮವಿಶ್ವಾಸ ಸಮಸ್ಯೆಯನ್ನುಂಟು ಮಾಡುತ್ತದೆ, ನೀವು ಜಾಗರೂಕರಾಗಿರಬೇಕು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಅನಗ್ಯತ ಖರ್ಚು ಮಾಡಬೇಡಿ . ಈ ಅವಧಿಯಲ್ಲಿ, ನಿಮ್ಮ ಗುರಿಗಳನ್ನು ಅಥವಾ ನಿಮ್ಮ ಕನಸುಗಳನ್ನು ಪೂರೈಸಲು ನೀವು ಅವಕಾಶಗಳನ್ನು ಪಡೆಯುತ್ತೀರಿ.

ಸಿಂಹ ರಾಶಿ

ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಈ ಸಮಯದಲ್ಲಿ ಬಡ್ತಿ, ಉದ್ಯೋಗದಲ್ಲಿ ಬದಲಾವಣೆ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ಆದರೆ ಕೆಲಸ ಕಾರ್ಯದಲ್ಲಿ ನಿರ್ಲಕ್ಷ್ಯ ಬೇಡ. ಇಲ್ಲದಿದ್ದರೆ ನೀವು ನಿಮ್ಮ ಕೆಲಸವನ್ನು ಕಳೆದುಕೊಳ್ಳಬಹುದು. ವ್ಯಾಪಾರಿಗಳಿಗೆ ಈ ಅವಧಿ ಸವಾಲಿನಿಂದ ಕೂಡಿರಲಿದೆ.

ಕನ್ಯಾರಾಶಿ

ಕೃತ್ತಿಕಾ ನಕ್ಷತ್ರದ ನಾಲ್ಕನೇ ಮನೆಯಲ್ಲಿ ಗುರುವಿನ ಸಾಗಣೆಯು ಕನ್ಯಾ ರಾಶಿಯವರಿಗೆ ಪ್ರಗತಿ ತರಲಿದೆ. ಈ ಅವಧಿಯು ವೃತ್ತಿಪರ ಮತ್ತು ವೈಯಕ್ತಿಕ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.


ತುಲಾ ರಾಶಿ

ಈ ಸಮಯವು ತುಲಾ ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು. ಈ ಅವಧಿಯು ನಿಮಗೆ ಕಷ್ಟಕರವಾಗಿರುತ್ತದೆ . ಸಂಬಂಧದಲ್ಲಿ ಬಿರುಕು, ಉದ್ಯೋಗ ನಷ್ಟ ಅಥವಾ ಆರ್ಥಿಕ ನಷ್ಟದಂತಹ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ, ಗುರುವಿನ ಈ ಸಂಚಾರಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ದಿನ ನೀವು ಪ್ರೀತಿಪಾತ್ರರ ಮೇಲೆ ಹೆಚ್ಚು ಅವಲಂಬಿತರಾಗುವುದನ್ನು ತಪ್ಪಿಸಬೇಕು. ಗುರುವು ಕೆಲವೊಮ್ಮೆ ನಿಮ್ಮಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ಉಂಟುಮಾಡಬಹುದು, ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.


ಧನು ರಾಶಿ

ಈ ಅವಧಿಯು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ, ಈ ಸಮಯದಲ್ಲಿ ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆಯನ್ನು ಸಹ ನೋಡಬಹುದು. ಇ ಆದರೆ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.

ಮಕರ ರಾಶಿ

ನೀವು ವೃತ್ತಿ ಬದುಕು ನಿರ್ಲಕ್ಷಿಸದಂತೆ ಜಾಗರೂಕರಾಗಿರಬೇಕು. ಪ್ರೇಮಿಗಳಿಗೆ ಈ ಅವಧಿ ಉತ್ತಮವಾಗಿದೆ. ಮಕ್ಕಳ ಬಗ್ಗೆ ಖುಷಿಯ ಸುದ್ದಿ ಪಡೆಯುತ್ತೀರಿ, ಮಕರ ರಾಶಿಯವರು ಈ ಅವಧಿಯಲ್ಲಿ ಕುಟುಂಬದಲ್ಲಿ ಸಂತೋಷ, ನೆಮ್ಮದಿಯನ್ನು ಕಾಣಬಹುದು.

ಕುಂಭ ರಾಶಿ

ಕುಟುಂಬ ಜೀವನದ ದೃಷ್ಟಿಯಿಂದ ಈ ರಾಹು ಸಂಚಾರ ಅನುಕೂಲಕರವಾಗಿದೆ. ಕುಟುಂಬದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಜೀವನದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲು ಸಮಯವು ಸೂಕ್ತವಾಗಿದೆ.


ಮೀನ ರಾಶಿ

ಮೀನ ರಾಶಿಯವರಿಗೆ, ಗುರುವಿನ ಸಂಚಾರವು ವೈಯಕ್ತಿಕ ಅಭಿವೃದ್ಧಿ, ಶೈಕ್ಷಣಿಕ ಜೀವನ ಮತ್ತು ನಿಕಟ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಸುಧಾರಿಸುವ ವಿಷಯದಲ್ಲಿ ಅನುಕೂಲಕರವಾಗಿದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ. ಕುಟುಂಬದಲ್ಲಿ ತಪ್ಪು ಕಲ್ಪನೆ ಇದ್ದರೆ ಬಗೆಹರಿಸಲು ಪ್ರಯತ್ನಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Guru Transit In To Krithika Nakshtra: How It Effects On Your Zodiac In Kannada

Guru Transit In To Krithika Nakshtra 2024: Here is how it effects you read on...
Story first published: Wednesday, June 12, 2024, 22:05 [IST]
X
Desktop Bottom Promotion