Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೋಹಿಣಿ ನಕ್ಷತ್ರಕ್ಕೆ ಗುರು ಸಂಚಾರ: ಈ ಮೂರು ರಾಶಿಯವರಿಗೆ ಹಣ, ಯಶಸ್ಸು ಸಿಗಲಿದೆ
ಗುರುವನ್ನು ಜ್ಯೋತಿಷ್ಯದಲ್ಲಿ ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ, ಗುರುವಿನ ಸ್ಥಾನ ಚೆನ್ನಾಗಿದ್ದರೆ ಬದುಕಿನಲ್ಲಿ ಯಶಸ್ಸು ಸಿಗುವುದು, ಅದೃಷ್ಟದ ಬೆಂಬಲದಿಂದ ಆರ್ಥಿಕ ಲಾಭ ಪಡೆಯಲು ಸಾಧ್ಯವಾಗುವುದು. ದೇವಗುರು ಇದೀಗ ವೃಷಭ ರಾಶಿಯಲ್ಲಿದೆ, ಗುರು ರಾಶಿ ಬದಲಾವಣೆಯನ್ನು ಮೇ 1ಕ್ಕೆ ಮಾಡಿತ್ತು, ಜೂನ್ 13ಕ್ಕೆ ನಕ್ಷತ್ರ ಬದಲಾವಣೆ ಕೂಡ ಮಾಡಿದೆ.

ಗುರು ರೋಹಿಣಿ ನಕ್ಷತ್ರದಲ್ಲಿದೆ
ಗುರು ಜೂನ್ 13ಕ್ಕೆ ರೋಹಿಣಿ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು ಆಗಸ್ಟ್ 20, 2024 ರಂದು ಸಂಜೆ 05:22 ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದೆ, ಗುರು ಈ ರೋಹಿಣಿ ನಕ್ಷತ್ರದಲ್ಲಿ ಇರುವ ಅವಧಿಯು ಕೆಲ ರಾಶಿಗಳಿಗೆ ತುಂಬಾನೇ ಶುಭವಾಗಿದೆ. ಗುರುವಿನ ಅನುಕೂಲಕರ ಸ್ಥಾನದಿಂದ ಶ್ರಮದ ಜೊತೆಗೆ ಅದೃಷ್ಟದ ಬೆಂಬಲ ಇರುವುದರಿಂದ ಉತ್ತಮ ಫಲ ಪಡೆಯುತ್ತೀರಿ, ಇದು ಮನೆಯ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದು.
ಗುರು ರೋಹಿಣಿ ನಕ್ಷತ್ರದಲ್ಲಿ ಇರುವ ಈ ಅವಧಿಯಲ್ಲಿ ಈ ಮೂರು ರಾಶಿಯವರು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ:
ಮೇಷ ರಾಶಿ
ಈ ಅವಧಿ ಮೇಷ ರಾಶಿಯವರಿಗೆ ತುಂಬಾನೇ ಶುಭವಾಗಿದೆ. ಈ ಸಮಯದಲ್ಲಿ ವೃತ್ತಿ ಬದುಕು ಚೆನ್ನಾಗಿರಲಿದೆ, ಕೆಲಸ ಬದಲಾವಣೆಗೂ ಈ ಸಮಯ ತುಂಬಾ ಒಳ್ಳೆಯದಿದೆ. ನೀವು ತುಂಬಾ ಸಮಯದಿಂದ ಆಸೆ ಪಟ್ಟಂತೆ ನೀವು ಹೊಸ ಮನೆ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಈ ಅವಧಿ ತುಂಬಾನೇ ಪ್ರಯೋಜನಕಾರಿಯಾಗಿದೆ. '
ಕುಟುಂಬ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ನೀವು ಇಟ್ಟ ಹೆಜ್ಜೆಯಲ್ಲಿ ಯಶಸ್ಸು ಪಡೆಯುತ್ತೀರಿ. ಆದರೆ ನಿಮ್ಮ ಶತ್ರುಗಳ ಬಗ್ಗೆ ಜಾಗ್ರತೆವಹಿಸಿ. ವೃತ್ತಿ ಬದುಕಿನಲ್ಲಿ ನೀವು ಧನಾತ್ಮಕ ಬದಲಾವಣೆ ಕಾಣುತ್ತೀರಿ.
ಮಿಥುನ ರಾಶಿ
ಗುರು ರೋಹಿಣಿ ನಕ್ಷತ್ರದಲ್ಲಿ ಇರುವ ಈ ಅವಧಿಯಲ್ಲಿ ಮಿಥುನ ರಾಶಿಯವರು ಕೂಡ ಅಪಾರ ಲಾಭ ಪಡೆಯುತ್ತೀರಿ. ಈ ಅವಧಿಯಲ್ಲಿ, ನೀವು ಮನೆ, ವಾಹನ ಅಥವಾ ಹೊಸ ಕಚೇರಿಯನ್ನು ಖರೀದಿಸುವ ಸಾಧ್ಯತೆಯಿದೆ. ಹೂಡಿಕೆಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಆ ಹೂಡಿಕೆಯಿಂದ ಉತ್ತಮ ಲಾಭ ಕೂಡ ಪಡೆಯುತ್ತೀರಿ.
ಈ ಅವಧಿಯಲ್ಲಿ, ನಿಮ್ಮ ಆದಾಯದ ಜೊತೆಗೆ, ನಿಮ್ಮ ಉಳಿತಾಯದ ಕಡೆಗೂ ಗಮನಹರಿಸುತ್ತೀರಿ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣಬಹುದು. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನೀವು ಬಯಸಿದ ಉದ್ಯೋಗ ಸಿಗಲಿದೆ, ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಎಲ್ಲಾ ಅಡೆತಡೆಗಳು ದೂರಾಗಿ ನೀವು ಬಯಸಿದಂತೆಯೇ ಒಳ್ಳೆಯ ಕೆಲಸ ಸಿಗಲಿದೆ. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಕರ್ಕ ರಾಶಿ
ರೋಹಿಣಿ ನಕ್ಷತ್ರದಲ್ಲಿ ಗುರುವಿನ ಸಂಚಾರವು ಕರ್ಕ ರಾಶಿಯವರಿಗೆ ಕೂಡ ಫಲಕಾರಿಯಾಗಲಿದೆ. ಈ ಸಮಯದಲ್ಲಿ ನೀವು ಆರ್ಥಿಕ ಪ್ರಗತಿ ಕಾಣಬಹುದು. ನೀವು ಏನಾದರೂ ಹೊಸ ಕೆಲಸ ಪ್ರಾರಂಭ ಮಾಡಲು ಬಯಸಿದರೆ ಅದಕ್ಕೂ ಈ ಅವಧಿ ತುಂಬಾನೇ ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ಸ್ಥಾನ-ಮಾನ ಹೆಚ್ಚಲಿದೆ.
ಮದುವೆ ಪ್ರಾಯದವರಿಗೆ ಮದುವೆ ಸಂಬಂಧ ಕೂಡಿ ಬರಲಿದೆ. ವಿವಾಹಿತರ ಜೀವನದಲ್ಲಿ ಖುಷಿ ಸುದ್ದಿ ಸಿಗಲಿದೆ, ಆರೋಗ್ಯಉತ್ತಮವಾಗಿರಲಿದೆ. ವೈವಾಹಿಕ ಜೀವನ, ಕುಟುಂಬ ಜೀವನ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿಈ ಸಮಯದಲ್ಲಿ ಹೊಸ ಎತ್ತರ ತಲುಪಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications



