Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಗುರು ಸಂಚಾರ 2024: ಈ 6 ರಾಶಿಯ ಅವಾಹಿತರಿಗೆ ಗುರು ಬಲದಿಂದಾಗಿ ಕಂಕಣ ಭಾಗ್ಯವಿದೆ
ಗುರು ವೃಷಭ ರಾಶಿಗೆ ಸಂಚರಿಸಿದೆ, ಇನ್ನು 12 ತಿಂಗಳು ವೃಷಭ ರಾಶಿಯಲ್ಲಿ ಇರಲಿದೆ. ಈ ಗುರು ಸಂಚಾರ ಕೆಲ ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದೆ. ಇನ್ನು ಗುರು ಬಲ ಚೆನ್ನಾಗಿದ್ದರೆ ವಿವಾಹ ಯೋಗ ಕೂಡಿ ಬರಲಿದೆ, ಈ ರಾಶಿಯ ಅವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಮೇಷ ರಾಶಿ
ಮೇಷ ರಾಶಿಯವರಿಗೆ ಗುರುವಿನ ಸ್ಥಾನ ತುಂಬಾ ಚೆನ್ನಾಗಿರಲಿದೆ. ಹಾಗಾಗಿ ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಅವಾಹಿತರಿಗೆ ಗುರು ಬಲ ಚೆನ್ನಾಗಿ ಇರುವುದರಿಂದ ಗುರುವಿನ ಈ ಸಂಚಾರದ ಸಮಯದಲ್ಲಿ ಮದುವೆಯಾಗುವ ಬಲವಾದ ಸಾಧ್ಯತೆ ಇದೆ. ಇನ್ನು ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ಈ ಸಮಯ ತುಂಬಾ ಚೆನ್ನಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಬೇಗನೆ ಶುಭ ಕಾರ್ಯ ನಡೆಯಲಿದೆ. ಏಕೆಂದರೆ ಗುರು ನಿಮ್ಮ ರಾಶಿಯಲ್ಲಿ ಬಲವಾದ ಸ್ಥಾನದಲ್ಲಿ ಇದ್ದಾನೆ. ವಿವಾಹಿತರಿಗೂ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿಯೂ ಗುರುವಿನ ಸ್ಥಾನ ತುಂಬಾ ಬಲವಾಗಿದೆ. ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಇಬ್ಬರ ನಡುವೆ ವೈವಾಹಿಕ ಸಂಬಂಧ ಚೆನ್ನಾಗಿಲಿದೆ. ಪ್ರೇಮಿಗಳಿಗಳಿಗೆ ಈ ಅವಧಿ ವಿಶೇಷವಾಗಿರಲಿದೆ. ಅವಾಹಿತರಿಗೆ ಗುರುಬಲ ಕೂಡಿ ಬರಲಿದೆ. ಆರ್ಥಿಕವಾಗಿಯೂ ಚೆನ್ನಾಗಿ ಇರುವುದರಿಂದ ಮದುವೆ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ.
ಮಕರ ರಾಶಿ
ಮಕರ ರಾಶಿಯಲ್ಲಿ ಗುರು ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಮನೆಯಲ್ಲಿ ಮಕರ ರಾಶಿಯ ಅವಾಹಿತರಿದ್ದರೆ ತುಂಬಾ ಸಮಯದಿಂದ ಮದುವೆಗೆ ಪ್ರಯತ್ನಿಸುತ್ತಿದ್ದು ಯಾವ ಸಂಬಂಧ ಕೂಡಿ ಬರದಿದ್ದರೆ ನಿಮ್ಮ ಚಿಂತೆ ದೂರಾಗಲಿದೆ. ಏಕೆಂದರೆ ಗುರು ಸಂಚಾರದ ಈ ಸಮಯದಲ್ಲಿ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ, ಪ್ರೇಮಿಗಳು ವಿವಾಹವಾಗಲು ಬಯಸುತ್ತಿದ್ದರೆ ಈ ಅವಧಿ ಉತ್ತಮವಾಗಿರಲಿದೆ. ಮನೆಯವರ ಒಪ್ಪಿಸಿ ಮದುವೆಯಾಗಲು ಸಾಧ್ಯವಾಗುವುದು.
ಕುಂಭ ರಾಶಿ
ಕುಂಭ ರಾಶಿಯವರ ಆರ್ಥಿಕ ಸೌಕರ್ಯ ಹೆಚ್ಚಾಗಲಿದೆ. ಇನ್ನು ಅವಾಹಿತರು ಜೀವನದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿ ಮದುವೆಯಾಗಬೇಕೆಂದು ಬಯಸಿದರೆ ಈ ಅವಧಿಯಲ್ಲಿ ಮದುವೆ ಬಗ್ಗೆ ಯೋಚನೆ ಮಾಡುತ್ತಾರೆ. ವಾಹನ, ಆಸ್ತಿ ಎಲ್ಲಾ ಗಳಿಸುತ್ತೀರಿ, ಜೀವನದಲ್ಲಿ ಮದುವೆಯಾಗಿ ಸೆಟ್ಲ್ ಆಗಬೇಕು ಎಂಬ ಆಲೋಚನೆ ಮೂಡುತ್ತದೆ, ಒಳ್ಳೆಯ ಸಂಬಂಧ ಕೂಡಿ ಬರಲಿದೆ.
ಮಿಥುನ ರಾಶಿ
ಅವಾಹಿತರಿಗೆ ಈ 12 ತಿಂಗಳೊಳಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಈ ವರ್ಷ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ ಆರ್ಥಿಕವಾಗಿಯೂ ಈ ಸಮಯ ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಈ ಸಂಚಾರ ತುಂಬಾ ವಿಶೇಷವಾಗಿರಲಿದೆ. ನೀವಿಬ್ಬರು ಮದುವೆಯಾಗಲು ನಿರ್ಧಾರಕ್ಕೆ ಬರುತ್ತೀರಿ. ವಿವಾಹಿತರು ಮಗುವಿನ ಅಪೇಕ್ಷೆಯಲ್ಲಿದ್ದರೆ ಈ ಅವಧಿಯಲ್ಲಿ ಶುಭ ಸುದ್ದಿ ಪಡೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
