Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಗುರು-ಶುಕ್ರ ಯೋಗ: ಈ 3 ರಾಶಿ ಜನರಿಗೆ ಪ್ರತಿಯೊಂದು ಕೆಲಸದಲ್ಲೂ ಜಯ, ಕೈತುಂಬ ಹಣ
ಅಕ್ಟೋಬರ್‌ನಲ್ಲಿ ಹಲವು ಗ್ರಹಗಳ ಸಂಚಾರವು ವಿಶೇಷ ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಪ್ರಭಾವಶಾಲಿ ಗ್ರಹಗಳು ತನ್ನ ಸ್ಥಾನ ಬದಲಾಯಿಸುವುದು ಹಲವು ರೀತಿಯ ಲಾಭಗಳಿಗೆ ಕಾರಣವಾಗಲಿದೆ. ಅದ್ರಲ್ಲೂ ಗುರು ಹಾಗೂ ಶುಕ್ರನ ಸಂಯೋಗ ಅಥವಾ ಚಲನೆಯಿಂದಾಗಿ ಹಲವು ರೀತಿಯ ಲಾಭಗಳ ನೋಡಬಹುದು. ಗುರು ಹಾಗೂ ಶುಕ್ರನು 60 ಡಿಗ್ರಿ ಕೋನದಲ್ಲಿ ಚಲಿಸುತ್ತಾರೆ. ಇಂದು ಗುರು ಹಾಗೂ ಶುಕ್ರನ ಚಲನೆಯು ಹಲವು ರೀತಿಯ ಲಾಭಗಳ ತರಲಿದೆ.
ಅದೃಷ್ಟ, ಪ್ರಗತಿ ಮತ್ತು ಸಕಾರಾತ್ಮಕ ಬದಲಾವಣೆಯ ಸಂಕೇತವೆಂದು ಗುರು ಹಾಗೂ ಶುಕ್ರನ ಸಂಚಾರವನ್ನು ಪರಿಗಣಿಸಲಾಗುತ್ತದೆ. ಶುಕ್ರ ಪ್ರೀತಿ, ಐಷಾರಾಮಿ ಮತ್ತು ಸೌಂದರ್ಯವನ್ನು ಸಂಕೇತಿಸಿದರೆ, ಗುರು ಜ್ಞಾನ, ಸಂಪತ್ತು ಮತ್ತು ಪ್ರಗತಿಯ ಪ್ರತಿನಿಧಿಸುತ್ತದೆ. ಈ ಎರಡರ ನಡುವಿನ ಸಂಯೋಗವು ಎಲ್ಲಾ ರಾಶಿಗಳ ಮೇಲೆಯೂ ಧನಾತ್ಮಕ ಪರಿಣಾಮ ಉಂಟು ಮಾಡುವುದು ನೋಡಬಹುದು.

ಗುರು ಹಾಗೂ ಶುಕ್ರನ ಈ ಸಂಚಾರವು ಹಲವು ರಾಶಿಯ ಜನರ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತೇಜನವನ್ನು ಅನುಭವಿಸುವುದಲ್ಲದೆ, ಅವರ ಸಂಬಂಧಗಳಲ್ಲಿ ಮಾಧುರ್ಯ ಮತ್ತು ಸ್ಥಿರತೆಯನ್ನು ಅನುಭವಿಸುತ್ತವೆ. ಈ ಅಪರೂಪದ ಯೋಗವು ಹಲವರ ಜೀವನದಲ್ಲಿ ಬದಲಾವಣೆಗಳ ತರುವುದು ನೋಡಬಹುದು. ಹಾಗಾದ್ರೆ ಶುಕ್ರ ಹಾಗೂ ಗುರುವಿನಿಂದ ಆಗುವ ಲಾಭಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಈ ಯೋಗವು ವೃಷಭ ರಾಶಿಯವರಿಗೆ ಅತ್ಯಂತ ಶುಭ ಮತ್ತು ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ. ಶುಕ್ರನು ನಿಮ್ಮ ಆಡಳಿತ ಗ್ರಹವಾಗಿರುವುದರಿಂದ, ಶುಕ್ರನೊಂದಿಗೆ ಸಂಬಂಧಿಸಿದ ಸ್ಥಾನವು ನಿಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನಿಮ್ಮ ಹಣಕಾಸಿನ ವಿಚಾರವಾಗಿ ದೊಡ್ಡ ಲಾಭವಿದೆ. ಅದ್ರಲ್ಲೂ ವರ್ಷಗಳಿಂದ ತೊಡಕುಗಳ ಎದುರಿಸಿದ್ದರೆ ಈ ಸಮಯದಲ್ಲಿ ನಿಮಗೆ ಶುಭವಿದೆ. ಸಾಲಗಳ ಮರುಪಾವತಿಯಿಂದ ನಿಮ್ಮಲ್ಲಿ ಹೊಸ ರೀತಿಯ ನೆಮ್ಮದಿ ಇರಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಮಧುರತೆ ಹೆಚ್ಚಾಗಲಿದೆ. ಇದರಿಂದ ನಿಮ್ಮ ದಾಂಪತ್ಯವು ಸುಖವಾಗುತ್ತದೆ. ಕುಟುಂಬದಲ್ಲಿದ್ದ ಹಣಕಾಸು ಸಂಬಂಧಿ ಸಮಸ್ಯೆಗೂ ಪರಿಹಾರ ಮಾಡುವಿರಿ.
ಕರ್ಕಾಟಕ ರಾಶಿ
ಈ ಲಾಭ ಯೋಗವು ಕರ್ಕಾಟಕ ರಾಶಿಯವರಿಗೆ ವರದಾನವಾಗಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಚ್ಚರಿ ಫಲಿತಾಂಶ ನೋಡುವಿರಿ. ನೀವು ಬಹಳ ಸಮಯದಿಂದ ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಅತ್ಯುತ್ತಮ ಅವಕಾಶ ಹುಡುಕಿ ಬರಲಿದೆ. ಸ್ವಂತ ಮನೆ ನಿಮ್ಮ ಕನಸಾಗಿದ್ದರೆ ಈ ಸಮಯದಲ್ಲಿ ಅದಕ್ಕಾಗಿ ಒಂದು ಹೆಜ್ಜೆ ಮುಂದಿಡುತ್ತೀರಿ. ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆ ವಿಚಾರವಾಗಿ ಇರುವ ಅಡ್ಡಿಯೊಂದು ನಿವಾರಣೆಯಾಗಲಿದೆ. ನೀವು ಹೊಸ ಸಂಬಂಧಗಳು ಅಥವಾ ಪಾಲುದಾರಿಕೆಗಳ ದಿಕ್ಕಿನಲ್ಲಿ ಮುಂದುವರಿಯಬಹುದು. ಕುಟುಂಬ ಜೀವನದಲ್ಲಿ ದೀರ್ಘಕಾಲದ ಉದ್ವಿಗ್ನತೆಗಳು ಅಥವಾ ಭಿನ್ನಾಭಿಪ್ರಾಯಗಳು ಪರಿಹರಿಸಲ್ಪಡುವ ಸಾಧ್ಯತೆಯಿದೆ.
ಧನು ರಾಶಿ
ಈ ಸಂಯೋಗವು ಧನು ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದರಿಂದ ನೀವು ಸುಧಾರಣೆ ನೋಡುವಿರಿ. ಶುಭ ಕಾರ್ಯ ಸಂಬಂಧವಾಗಿ ಮಾತುಕತೆಗಳು ನಡೆಯಲಿವೆ. ನಿಮ್ಮ ಉಳಿತಾಯಗಳು ಹೆಚ್ಚಾಗಲಿದೆ. ಸಾಲದ ಪ್ರಮಾಣ ಕಡಿಮೆ ಮಾಡಿಕೊಳ್ಳಲು ನೀವು ತೆಗೆದುಕೊಳ್ಳುವ ನಿರ್ಧಾರವು ಅನುಕೂಲಕರ ಫಲಿತಾಂಶ ತರಲಿದೆ. ಉನ್ನತ ಸ್ಥಾನಗಳಲ್ಲಿರುವವರಿಗೆ ನಾಯಕತ್ವದ ಅವಕಾಶಗಳು ಹುಡುಕಿ ಬರಲಿವೆ. ಆಸ್ತಿ ಮಾರಾಟ ಅಥವಾ ಖರೀದಿಯಲ್ಲಿ ಶುಭವಿದೆ. ಪ್ರೀತಿ ಸಂಬಂಧವಾಗಿ ನಿಮ್ಮಲ್ಲಿ ಹೊಸ ಸಂಬಂಧ ಬೆಸೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











