ಗುರು ಸಂಚಾರ: ಈ 3 ರಾಶಿಯವರ ಬದುಕು ಬದಲಾಗಲಿದೆ, ಅದೃಷ್ಟದ ಬಾಗಿಲು ತೆರೆಯಲಿದೆ

ಗುರು ಗ್ರಹವು ನಮ್ಮ ರಾಶಿಯಲ್ಲಿ ಬಲವಾದ ಸ್ಥಾನದಲ್ಲಿದ್ದರೆ ಇದರ ಪ್ರಭಾವವನ್ನು ನಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಬೀರುತ್ತದೆ. ಜ್ಯೋತಿಷ್ಯ ಪ್ರಕಾರ ಗುರುಬಲ ಚೆನ್ನಾಗಿದ್ದರೆ ಯಾವುದಕ್ಕೂ ಭಯ ಪಡುವ ಅಗ್ಯತವಿಲ್ಲ ಎಂದು ಹೇಳಲಾಗುವುದು. ಅಲ್ಲದೆ ಗುರುವಿನ ಪ್ರಭಾವ ಧನಾತ್ಮಕವಾಗಿದ್ದರೆ ಅದರ ಪ್ರಭಾವ ಕೆಲವು ದಿನಗಳಿಗೆ ಮೀಸಲಾಗಿರುವುದಿಲ್ಲ, ಒಂದು ವರ್ಷಕ್ಕೂ ಅಧಿಕ ಇರಲಿದೆ, ಏಕೆಂದರೆ ಗುರು 13 ತಿಂಗಳಿಗೊಮ್ಮೆ ತನ್ನ ರಾಶಿ ಪಥ ಬದಲಾಯಿಸುತ್ತದೆ.

ಇದೀಗ ವೃಷಭ ರಾಶಿಯಲ್ಲಿರುವ ಗುರು ಈ ಮಾರ್ಚ್ ತಿಂಗಳಿನ 29ನೇ ತಾರೀಕಿಗೆ ಮೀನ ರಾಶಿಗೆ ಸಂಚರಿಸಲಿದೆ. ಇದೇ ದಿನ ಕರ್ಮದ ಫಲ ನೀಡುವ ಶನಿಯ ಸಂಚಾರ ಕೂಡ ಆಗಲಿದೆ.

ಗುರು ಮಿಥುನ ರಾಶಿಗೆ ಪ್ರವೇಶಿಸಿದಾಗ ಅದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಇರಲಿದ್ದು ಕೆಲ ರಾಶಿಯವರಿಗೆ ಈ ಗುರು ಸಂಚಾರ ಈ ರಾಶಿಗಳಿಗೆ ತುಂಬಾನೇ ಧನಾತ್ಮಕವಾಗಿರಲಿದೆ:

Guru Sanchar 2025

ಮಿಥುನ ರಾಶಿ

ಗುರು ಮಿಥುನ ರಾಶಿಗೆ ಸಂಚಾರವಾದಾಗ ಗುರು ಲಗ್ನ ಮನೆಯಲ್ಲದ್ದು ನಿಮಗೆ ತುಂಬಾನೇ ಅನುಕೂಲಕರ ಫಲಿತಾಂಶ ದೊರೆಯಲಿದೆ. ಈ ಸಂಚಾರದ ಬಳಿಕ ನಿಮ್ಮ ಬದುಕಿನಲ್ಲಿ ಅನೇಕ ಬದಲಾವಣೆ ಕಾಣಬಹುದು. ಗುರು ಬಲದಿಂದ ನಿಮ್ಮ ವೃತ್ತಿ ಬದುಕಿನಲ್ಲಿ ನೀವು ಯಶಸ್ಸು ಪಡೆಯಬಹುದು. ನೀವು ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದ್ದರೆ ನಿಮಗೆ ಯಶಸ್ಸು ದೊರೆಯಲಿದೆ. ಈಗ ನಿಮ್ಮ ವ್ಯವಹಾರದಲ್ಲಿ ಏನಾದರು ಸಮಸ್ಯೆವಿದ್ದರೆ ಅದು ಬಗೆಹರಿಯಲಿದೆ, ನಿಮಗೆ ಧನ ಲಾಭವಾಗಲಿದೆ.

ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ, ಇದರಿಂದಾಗಿ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ.

ವೈವಾಹಿಕ ಬದುಕು ಚೆನ್ನಾಗಿರಲಿದೆ ಅಲ್ಲದೆ ಅವಾಹಿತರಿಗೆ ಮದುವೆಯಲ್ಲಿ ಅಡೆತಡೆ ಇದ್ದರೆ ಅದು ದೂರಾಗಲಿದೆ, ಗುರುಬಲ ಚೆನ್ನಾಗಿರುವುದರಿಂದ ನಿಮಗೆ ಕಂಕಣ ಬಲ ಕೂಡಿ ಬರಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ಗುರು ಸಂಚಾರದ ಬಳಿಕ ತಮ್ಮ ಬದುಕಿನಲ್ಲಿ ಕೆಲ ಬದಲಾವಣೆಯನ್ನು ಕಾಣಬಹುದು. ಶನಿಯ ಸಂಚಾರದ ಬಳಿಕ ಶನಿ ಧೈಯ್ಯದ ಪ್ರಭಾವ ಇರಲಿದೆ, ಆದರೆ ಹೆದರ ಬೇಕಾಗಿಲ್ಲ, ನಿಮಗೆ ಗುರುವು ಉನ್ನತ ಸ್ಥಾನದಲ್ಲಿ ಇರುವುದರಿಂದ ನೀವು ಆರ್ಥಿಕವಾಗಿ ಬೆಳವಣಿಗೆಯನ್ನು ಕಾಣಬಹುದು, ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹಲವು ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು.

ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ, ಉದ್ಯೋಗಿಗಳು ತಮ್ಮ ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯಬಹುದು ಅಥವಾ ಕೆಲಸ ಬದಲಾವಣೆಯ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಒಳ್ಳೆಯ ಅವಕಾಶಗಳು ದೊರೆಯಲಿದೆ. ಸ್ವಂತವಾಗಿ ಏನಾದರು ಬ್ಯುಸ್‌ನೆಸ್‌ ಮಾಡಬೇಕೆಂದು ಬಯಸುವವರಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ.

ಆರ್ಥಿಕವಾಗಿ ಬೆಳೆಯುತ್ತೀರಿ, ಹೀಗಾಗಿ ನೀವು ಬಯಸಿದ ಪ್ರಮುಖ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲಿದೆ, ಹೂಡಿಕೆ ಮಾಡಿದ್ದರೆ ಅದರಿಂದ ನೀವು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ.

ಗುರುವಿನ ಬಲದಿಂದ ಕುಟುಂಬ ಜೀವನ ಕೂಡ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಯೋಗ ಕೂಡಿ ಬರಲಿದೆ.


ಮಕರ ರಾಶಿ

ಮಕರ ರಾಶಿಯವರು ತುಂಬಾ ಉತ್ತಮ ಪ್ರಯೋಜನ ಪೆಯುತ್ತೀರಿ, ನೀವು ಗುರುವಿನ ದೆಸೆಯಿಂದಾಗಿ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ.

ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ತುಂಬಾನೇ ಉತ್ತಮ ಪ್ರಯೋಜನ ಪಡೆಯುತ್ತೀರಿ. ನೀವು ಏನು ಲಾಭ ನಿರೀಕ್ಷೆ ಮಾಡುತ್ತಿದ್ದೀರೋ ಅದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.

ಉದ್ಯೋಗದಲ್ಲಿ ಬದಲಾವಣೆಗೆ ಪ್ರಯತ್ನಿಸುತ್ತಿರುವವರೆಗೆ, ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ, ಬಡ್ತಿಯ ನಿರೀಕ್ಷೆಯಲ್ಲಿದ್ದವರಿಗೆ ಈ ಗುರು ಸಂಚಾರ ಅದೃಷ್ಟದ ಬಾಗಿಲು ತೆರೆಯಲಿದೆ. ವೃತ್ತಿ ಬದುಕಿನಲ್ಲಿನ ಅಭದ್ರತೆ ದೂರಾಗಿ ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಗುವುದು. ಈ ರಾಶಿಯ ರಾಜಕಾರಣಿಗಳ ಖ್ಯಾತಿ ಹೆಚ್ಚಾಗಲಿದೆ.

ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ, ಕುಟುಂಬ ಬದುಕು ಚೆನ್ನಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Guru Sanchar: Jupiter Transit Brings Changes In These Zodiac Signs L:ife

Guru Sanchar 2025: Jupiter transit brings so much positive changes in these zodiac signs read on...
Story first published: Monday, March 17, 2025, 9:38 [IST]
X
Desktop Bottom Promotion