ಗುರು ಸಂಚಾರ 2024: ಈ 5 ರಾಶಿಗಳಿಗೆ ಮಿಶ್ರಫಲ, ಇದರ ಫಲ 12 ತಿಂಗಳು ಇರಲಿದೆ

ಗುರು ಅದೃಷ್ಟದ ಗ್ರಹ. ಈ ಗುರು ಈ ವರ್ಷ ಮೇ 1ಕ್ಕೆ ವೃಷಭ ರಾಶಿಗೆ ಸಂಚರಿಸಲಿದೆ, ಈ ಸಂಚಾರ ಕೆಲ ರಾಶಿಗಳಿಗೆ ಮಿಶ್ರಫಲಿತಾಂಶ, ಯಾವೆಲ್ಲಾ ರಾಶಿಗಳಿಗೆ ಮಿಶ್ರ ಫಲಿತಾಂಶ ಎಂದು ನೋಡೋಣ ಬನ್ನಿ:

ತುಲಾ ರಾಶಿ

ಈ ಗುರು ಸಂಚಾರ ತುಲಾ ರಾಶಿಯವರಿಗೆ ಮಿಶ್ರಫಲ. ನೀವು ಕೆಲಸದಲ್ಲಿ ಜಾಗ್ರತೆವಹಿಸಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಅವರು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಆರ್ಥಿಕವಾಗಿಯೂ ಈ ಅವಧಿ ಒಳ್ಳೆಯದಲ್ಲ. ಇನ್ನು ಸಾಲ ಹೆಚ್ಚಾಗಲಿದೆ, ಸಾಲ ಮಾಡಿದ್ದರೆ ಸಾಲದ ಒತ್ತಡ ಹೆಚ್ಚಾಗಲಿದೆ.

Guru Sanchar 2024

ಧಾರ್ಮಿಕ ವಿಷಯಗಳ ಕಡೆಗೆ ಗಮನಹರಿಸುತ್ತೀರಿ. ಇನ್ನು ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ಖರ್ಉ ಹೆಚ್ಚಾಗಲಿದೆ, ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಬಹುದು.

ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯವಿರಲಿದೆ. ನಿಮ್ಮ ಸಂಗಾತಿಯ ಮನಸ್ಸು ನೋಯಿಸದಂತೆ ಜಾಗ್ರತೆವಹಿಸಿ. ನೀವು ಸಂಗಾತಿಗೆ ಸಮಯ ಕೊಡದಿದ್ದರೆ ಸಮಸ್ಯೆ ಉಂಟಾಗುವುದು. ಆದ್ದರಿಂದ ಜಾಗ್ರತೆವಹಿಸಿ.

ಧನು ರಾಶಿ

ಧನು ರಾಶಿಯವರಿಗೆ ಗುರು 6ನೇ ಮನೆಗೆ ಸಾಗುವುದರಿಮದ ಖರ್ಚು ಹೆಚ್ಚಾಗಲಿದೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು, ಹಣದ ಖರ್ಚು ಹೆಚ್ಚಾಗಲಿದೆ. ಅಲ್ಲದೆ ನ್ಯಾಯಾಲಕ್ಕೆ ಸಂಬಂಧಿಸಿದ ಪ್ರಕರಣಗಳು ಇದ್ದರೆ ಹಣ ತುಂಬಾನೇ ಖರ್ಚಾಗಲಿದೆ. ನೀವು ಹೆಚ್ಚು ಸಾಲ ಮಾಡಲು ಹೋಗಬೇಡಿ, ಮಾಡಿದರೆ ಸಾಲವು ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ.

ವೃತ್ತಿ ಭವಿಷ್ಯ ವೃತ್ತಿ ಜೀವನ ಚೆನ್ನಾಗಿರಲಿದೆ, ಆದರೆ ನಿಮ್ಮ ಮೇಲೆ ಕೆಲವರಿಗೆ ಅಸೂಯೆ ಇರಲಿದೆ, ಹಾಗಾಗಿ ಅವರು ನಿಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಾರೆ, ಆದ್ದರಿಂದ ಜಾಗ್ರತೆವಹಿಸಿ. ನಿಮ್ಮ ಕೆಲಸದ ರಹಸ್ಯ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಆಸ್ತಿ ಸಂಬಂಧಿಸಿದ ಪ್ರಯತ್ನದಲ್ಲಿ ಜಾಗ್ರತೆ ವಹಿಸಿ. ಈ ಸಮಯ ಆಸ್ತಿ ಮಾರಲು, ಹೂಡಿಕೆಗೆ ಈ ಸಮಯ ಅನುಕೂಲಕರವಲ್ಲ.

ಕನ್ಯಾ ರಾಶಿ

ಗುರು ಸಂಚಾರ ಈ ಸಾಗಣೆಯು ನಿಮಗೆ ಅನೇಕ ಸಂದರ್ಭಗಳಲ್ಲಿ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ ಆದರೆ ಆಗಾಗ ಸವಾಲುಗಳು ಕೂಡ ಉಂಟಾಗಲಿದೆ. ನಿಮ್ಮ ಸೌಕರ್ಯ ಹೆಚ್ಚಾಗಲಿದೆ. ಉನ್ನತ ಶಿಕ್ಷಣಕ್ಕೆ ನೀವು ವಿದೇಶದಲ್ಲಿ ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.

ವೈಯಕ್ತಿಕ ಜೀವನದಲ್ಲಿ ಯಾವುದೇ ಗೊಂದಲವಿಲ್ಲದೆ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ಸಂಬಂಧ ಚೆನ್ನಾಗಿರಲಿದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ.

ವೃಷಭ ರಾಶಿ

ಈ ಗುರು ಸಂಚಾರ ವೃಷಭ ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ. ಇನ್ನು ಗುರು ಸಂಚಾರದ ಬಳಿಕ ಆಸ್ತಿ ವ್ಯವಹಾರಕ್ಕೆ ತುಂಬಾನೇ ಅನುಕೂಲಕರವಾಗಿರಲಿದೆ. ಇನ್ನು ಆರ್ಥಿಕವಾಗಿ ಬೆಳವಣಿಗೆ ಕಾಣುತ್ತೀರಿ. ಆದರೆ ವೃತ್ತಿ ಬದುಕಿನತ್ತ ಗಮನಹರಿಸಬೇಕು, ಗುರುವಿನಿಂದ ತಪ್ಪಾಗದಂತೆ ಜಾಗ್ರತೆವಹಿಸಿ. ವೃತ್ತಿಯಲ್ಲಿ ನಿರ್ಲಕ್ಷ್ಯ ದೊಡ್ಡ ಸಮಸ್ಯೆ ಉಂಟು ಮಾಡಬಹುದು, ಉಳಿದಂತೆ ಈ ಗುರು ಸಂಚಾರ ನಿಮಗೆ ಉತ್ತಮವಾಗಿದೆ.

ಮೀನ ರಾಶಿ

ಈ ಗುರು ಸಂಚಾರದ ಬಳಿಕ ಕುಟುಬ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿರುವ ಭಿನ್ನಾಭಿಪ್ರಾಯ ದೂರಾಗಲಿದೆ. ಈ ಸಮಯದಲ್ಲಿ ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ನಿಮ್ಮ ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಈ ಸಮಯ ತುಂಬಾ ಚೆನ್ನಾಗಿರಲಿದೆ. ಆದ್ದರಿಂದ ವ್ಯಾಪಾರಿಗಳು ಈ ಅವಧಿಯಲ್ಲಿ ತುಂಬಾ ಖುಷಿಯಾಗಿರುತ್ತೀರಿ. ಇನ್ನು ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳ ಕಡೆ ಒಲವು ಹೆಚ್ಚಾಗುವುದು. ಆದರೆ ನೀವು ಕೆಲಸದಲ್ಲಿ ನಿರ್ಲಕ್ಷ್ಯ ಮಾಡಿದರೆ ಹಲವು ಸಮಸ್ಯೆ ಅನುಭವಿಸಬೇಕಾಗುತ್ತದೆ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Guru Sanchar 2024: Jupiter Transit Unlucky To These 5 Zodiac Signs In Kannada

Guru Sanchar 2024: This Jupiter transit unlucky to these zodiac read on..
Story first published: Saturday, April 27, 2024, 23:50 [IST]
X
Desktop Bottom Promotion