Latest Updates
-
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ!
ಗುರು ಪುಷ್ಯ ಯೋಗ: ಈ ನಾಲ್ಕು ರಾಶಿಯವರಿಗೆ ಊಹಿಸಲಾಗದಷ್ಟು ಲಾಭ ತರಲಿದೆ..!!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ಪುಷ್ಯ ಬಲು ಅಪರೂಪದ ಯೋಗವಾಗಿದೆ. ಚಂದ್ರ ಕಟಕ ರಾಶಿಯಲ್ಲಿ ಚಲಿಸುವುದರಿಂದ ಈ ಗುರು ಪುಷ್ಯ ಯೋಗ ಈ ವರ್ಷದ ಕೊನೆಯಲ್ಲಿ ಬರುತ್ತಿದೆ. ಈ ಯೋಗದಿಂದಾಗಿ ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಹತ್ತಾರು ರೀತಿಯಲ್ಲಿ ಲಾಭದಾಯಕವಾಗಲಿದೆ. ಈ ಯೋಗವು ಹಣಕಾಸು, ಆರೋಗ್ಯ, ಹೂಡಿಕೆ, ವ್ಯವಹಾರ, ಸಂಬಂಧಗಳು, ವಿದ್ಯಾಭ್ಯಾಸ, ಆಸ್ತಿ, ವಾಹನ ಹೀಗೆ ಹತ್ತಾರು ಶುಭ ಕಾರಕ ಅಂಶಗಳಿಗೆ ಕಾರಣವಾಗಲಿದೆ.
ನಾವಿಂದು ಗುರು ಪುಷ್ಯ ಯೋಗದಿಂದ ಯಾವ ನಾಲ್ಕು ರಾಶಿಯವರಿಗೆ ಇನ್ನಿಲ್ಲದ ಲಾಭ ಆಗಲಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲಾ ರಾಶಿಗಳ ಮೇಲೆಯೂ ಈ ಗುರು ಪುಷ್ಯ ಯೋಗದ ಪ್ರಭಾವ ಇರಲಿದ್ದು ನಾವಿಂದು ಹೇಳುತ್ತಿರುವ 4 ರಾಶಿಗಳ ಮೇಲೆ ವಿಶೇಷವಾದ ಪ್ರಭಾವ ಇರಲಿದೆ.
ಸಂಪತ್ತು, ಜ್ಞಾನ ಮತ್ತು ಸಮೃದ್ಧಿಯ ಸಂಕೇತವಾದ ಗುರು ಗ್ರಹವು ಮಂಗಳಕರವಾದ ಪುಷ್ಯ ನಕ್ಷತ್ರವನ್ನು ಸೇರಿದಾಗ ಗುರು ಪುಷ್ಯ ಯೋಗವು ರೂಪುಗೊಳ್ಳುತ್ತದೆ ಎಂಬುದನ್ನು ನಾವು ತಿಳಿದಿದ್ದೇವೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಇದು ಶುಭ ತರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಕಟಕ ರಾಶಿ
ನಿಮ್ಮ ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಕಾಣಿಸಲಿದೆ. ನಿಮಗಾಗಿ ನೀವು ಮಾಡುವ ಒಂದು ಕೆಲಸ ನಿಮಗೆ ಲಾಭ ತಂದು ಕೊಡಲಿದೆ. ಹಾಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಹಲವು ಕಾಲದ ಆಸ್ತಿ ವಿವಾದ ಅಥವಾ ಕಾನೂನಾತ್ಮಕ ಹೋರಾಟಗಳಿಗೆ ಅಂತಿಮ ಘಟ್ಟ ಮುಟ್ಟುವ ಸಾಧ್ಯತೆಗಳಿವೆ. ನೀವು ನಾಯಕತ್ವದ ಗುಣಗಳಿಂದಾಗಿ ಲಾಭ ಪಡೆಯುತ್ತೀರಿ. ಹೊಸ ಯಂತ್ರ ಖರೀದಿಯ ಕಡೆಗೆ ನೀವು ಒಲವು ಹೊಂದಿದ್ದರೆ ಅದರಿಂದ ಲಾಭವಾಗುತ್ತದೆ. ವ್ಯಾಪಾರಸ್ಥರಿಗೆ ನಾಳೆ ನಾಯಕತ್ವವನ್ನು ವಹಿಸುವ ಯೋಗವಿದೆ. ಇದರಿಂದ ನಿಮಗೆ ಲಾಭ ದೊರಕುವ ಉತ್ತಮ ಅವಕಾಶ ಲಭಿಸುವುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಗುರು ಪುಷ್ಯ ಯೋಗದಿಂದ ಅತ್ಯಧಿಕ ಲಾಭವಾಗುತ್ತಿದೆ. ನಿಮ್ಮಲ್ಲಿ ಆರ್ಥಿಕ ಪ್ರಗತಿಗೆ ಇದು ಕಾರಣವಾಗುತ್ತಿದೆ. ವ್ಯಹವಾರಗಳಲ್ಲಿ ಎಂದು ಕಂಡಿರದ ಲಾಭ, ಅಭಿವೃದ್ಧಿ ನೋಡಬಹುದು. ವೃತ್ತೀಪರರಿಗೆ ಸಂಸ್ಥೆಯ ಕಡೆಯಿಂದ ಶುಭ ಸೂಚನೆ, ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಇದು ಶುಭ ಕಾಲ ಆಗಿರಲಿದೆ. ಮನೆಯಲ್ಲಿ ಯಾವುದಾದರೂ ವ್ಯಕ್ತಿಯ ವಿವಾಹದಲ್ಲಿ ಅಡೆತಡೆ ಉಂಟಾಗಿದ್ದರೆ, ಅವೆಲ್ಲವೂ ದೂರವಾಗುವುದು, ಹಾಗೆ ಶುಭ ಸುದ್ದಿ ಕೇಳುವ ಕಾಲ ಸನ್ನಿಹಿತವಾಗುವುದು. ಲಾಭದಾಯಕ ಹುದ್ದೆಗಳ ಕಡೆಗೆ ನೀವು ಸಾಗಬಹುದು. ಹೊಸದಾಗಿ ಉದ್ಯಮ ಆರಂಭಿಸುವವರಿಗೂ ಇದು ಅತ್ಯುತ್ತಮ ಸಮಯವಾಗಲಿದೆ. ಆರೋಗ್ಯದಲ್ಲೂ ನಿಮಗೆ ಚೇತರಿಕೆ ಕಾಣಲಿದೆ.
ಧನು ರಾಶಿ
ಧನು ರಾಶಿಯವರಿಗೆ ಗುರು ಪುಷ್ಯ ಯೋಗವು ಅವರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ, ನೀವು ಈಗಷ್ಟೆ ಹೊಸ ಸಂಬಂಧಕ್ಕೆ ತೆರೆದುಕೊಂಡಿದ್ದರೆ ಈ ಯೋಗದಿಂದ ನಿಮಗೆ ಲಾಭವಾಗಲಿದೆ. ಹಾಗೆ ನಿಮ್ಮ ಆದಾಯದ ಮೂಲಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಹಳ ಕಾಲದಿಂದಲೂ ಬಗೆಹರಿಯದೆ ಉಳಿದಿದ್ದಂತಹ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಸಂಬಂಧಿಕರ ಅನಿರೀಕ್ಷಿತ ಭೇಟಿ ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಹಿಂದೆ ಸ್ಥಗಿತಗೊಂಡಿದ್ದ ಯೋಜನೆಗಳು ಈಗ ತ್ವರಿತವಾಗಿ ಪೂರ್ಣಗೊಳ್ಳುತ್ತವೆ, ಲಾಭದಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಯೋಜಿಸುವವರಿಗೆ ಈ ಅವಧಿಯು ಲಾಭ ತಂದು ಕೊಡಲಿದೆ.
ಕುಂಭ ರಾಶಿ
ಈ ರಾಶಿಯ ಜನರಿಗೆ ಈ ಗುರು ಪುಷ್ಯ ಯೋಗದಿಂದಾಗಿ ಅತ್ಯಧಿಕ ಲಾಭ ನೋಡಲಿದ್ದಾರೆ. ನೀವು ಮಾಡಿದ ಕೆಲಸಗಳು ನಿಮ್ಮ ಯಶಸ್ವಿಗೆ ದಾರಿಯಾಗುತ್ತವೆ. ಬಹಳ ವರ್ಷಗಳ ನಿಮ್ಮ ಕನಸು ನನಸಾಗುವ ನಿರೀಕ್ಷೆ ಇದೆ. ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಸುಧಾರಣೆಯ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಅನಿರೀಕ್ಷಿತ ಲಾಭವನ್ನು ನಿರೀಕ್ಷಿಸಬಹುದು. ಹೂಡಿಕೆ, ಸಾಲ, ಬಂಡವಾಳ, ಖರೀದಿಯಂತಹ ಕೆಲಸಗಳಲ್ಲಿ ನಿಮಗೆ ಲಾಭವಾಗುವ ಸಾಧ್ಯತೆ ಇದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











