Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ದೀಪಾವಳಿಗೆ ಕೆಲ ದಿನಗಳಿರುವಾಗಲೇ ಬಂದಿದೆ ಗುರು ಪುಷ್ಯ ಯೋಗ: ಧನ ತ್ರಯೋದಶಿಯಷ್ಟೇ ಶ್ರೇಷ್ಠ ಈ ದಿನ ಕೂಡ, ಏಕೆ?
ಗುರು ಪುಷ್ಯ ಬಲು ಅಪರೂಪದ ಯೋಗವಾಗಿದೆ. ಈ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಕರೆಯಲಾಗುವುದು, ಅಕ್ಟೋಬರ್ 24ಕ್ಕೆ ಆ ಶುಭಯೋಗವಿದೆ, ನಂತರ ಈ ವರ್ಷ ನವೆಂಬರ್ ಮಾಸದಲ್ಲಿ ಒಂದು ದಿನವಿದೆ ಅಷ್ಟೇ.
ಜ್ಯೋತಿಷ್ಯದಲ್ಲಿ ಗುರು ಪುಷ್ಯ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗಿದೆ
ಯಾವುದೇ ಶುಭ ಕಾರ್ಯಕ್ಕೆ ಈ ಯೋಗ ಅತ್ಯಂತ ಶುಭವಾಗಿದೆ. ಈ ಶುಭ ಯೋಗದಲ್ಲಿ ಮಾಡಿದ ಕೆಲಸದಲ್ಲಿ ಉತ್ತಮ ಫಲ ಸಿಗಲಿದೆ , ಮನೆಗೆ ಅಡಿಪಾಯ ಹಾಕುವುದು, ಗೃಹ ಪ್ರವೇಶ, ಹೊಸ ಉದ್ಯಮ ಪ್ರಾರಂಭಿಸುವುದು, ಗಾಡಿ ಖರೀದಿ, ಹೊಸ ಅಂಗಡಿ ತೆರೆಯುವುದು ಇದಕ್ಕಲ್ಲಾ ತುಂಬಾನೇ ಶುಭ ಎಂದು ಹೇಳಲಾಗುವುದು. ಈ ಶುಭ ಘಳಿಗೆಯಲ್ಲಿ ಏನೇ ಮಾಡಿದರೂ ಉತ್ತಮ ಯಶಸ್ಸು ಪಡೆಯುತ್ತಾರೆ ಎಂದು ಹೇಳಲಾಗುವುದು, ಹಾಗಾಗಿ ತುಂಬಾ ಜನ ಏನಾದರು ಹೊಸ ಕಾರ್ಯ ಪ್ರಾರಂಭಿಸಲು ಈ ಶುಭ ದಿನಕ್ಕಾಗಿ ಕಾಯುತ್ತಾರೆ.

ಗುರು ಗ್ರಹ ಹಾಗೂ ಪುಷ್ಯ ನಕ್ಷತ್ರದ ಪ್ರಭಾವದಿಂದ ಯಶಸ್ಸು ದೊರೆಯಲಿದೆ
ಗುರು ಗ್ರಹವನ್ನು ಅದೃಷ್ಟದ ಗ್ರಹ. ಗುರು ಬಲ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು ಎಂದು ಹೇಳಲಾಗುವುದು. ಇನ್ನು ಪುಷ್ಯ ನಕ್ಷತ್ರವನ್ನು ಅತ್ಯಂತ ಶುಭ ನಕ್ಷತ್ರ ಎಂದು ಪರಿಗಣಿಸಲಾಗಿದೆ. ಈ ಪುಷ್ಯ ನಕ್ಷತ್ರವನ್ನು ಇತರ 26 ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗಿದೆ. ಒಟ್ಟು 27 ನಕ್ಷತ್ರ, ಅದರಲ್ಲಿ ಅತಿ ಶ್ರೇಷ್ಠ ನಕ್ಷತ್ರ ಎಂದು ಪುಷ್ಯ ನಕ್ಷತ್ರವನ್ನು ಪರಿಗಣಿಸಲಾಗಿದೆ. ನವಗ್ರಹಗಳಲ್ಲಿ ಗುರು ಕೂಡ ಅದೃಷ್ಟದ ಗ್ರಹ, ಈ ಎರಡೂ ಸೇರಿ ಅತ್ಯಂತ ಶುಭ ಘಳಿಗೆಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುವುದು.
ಗುರು ಪುಷ್ಯ ನಕ್ಷತ್ರ ಯಾವಾಗ ಉಂಟಾಗುವುದು?
ಮೊದಲೇ ಹೇಳಿದಂತೆ ಈ ಗುರು ಪುಷ್ಯ ಯೋಗ ಬಲು ಅಪರೂಪದ ಯೋಗ. ಈ ಸಮಯದಲ್ಲಿ ಏನಾದರು ಪ್ರಾರಂಭಿಸಿದರೆ ಅದು ಖಂಡಿತ ಶುಭ ಫಲವನ್ನೇ ನೀಡಲಿದೆ ಎಂದು ಹೇಳಲಾಗುವುದು. ಗುರುವಾರದ ದಿನ ಪುಷ್ಯ ನಕ್ಷತ್ರ ಬಂದರೆ ಅದನ್ನು ಗುರು ಪುಷ್ಯ ಯೋಗ ಎಂದು ಹೇಳಲಾಗುವುದು.
ಅಕ್ಟೋಬರ್ 24 ರಂದು ದೀಪಾವಳಿಗೆ ಮುನ್ನ ಬಂದಿದೆ ಈ ಶುಭ ಯೋಗ
ಧನ್ತೇರಸ್‌ಗೆ ಚಿನ್ನ ಖರೀದಿಸಬೇಕು ಎಂದು ಕಾಯಬೇಕಾಗಿಲ್ಲ, ಅಷ್ಟೇ ಶುಭದಿನ ಇದಾಗಿದೆ. ಚಿನ್ನ ಖರೀದಿಗೆ, ಗಾಡಿ ಖರೀದಿಗೆ ಈ ದಿನ ಶುಭವಾಗಿದೆ.
ದೀಪಾವಳಿಯ ಕೆಲ ದಿನಗಳ ಮುನ್ನವೇ ಈ ಶುಭ ಯೋಗ ಬಂದಿರುವುದರಿಂದ ನೀವು ದೀಪಾವಳಿಗೆ ಏನಾದರು ಹೊಸ ಕಾರ್ಯ ಮಾಡಬೇಕೆಂದಿದ್ದರೆ ಈ ದಿನ ಕೂಡ ಮಾಡಬಹುದು.
ಗುರು ಪುಷ್ಯ ಯೋಗ ಶುಭ ಸಮಯ
ಬೆಳಗ್ಗೆ 06:15ರಿಂದ ಅಕ್ಟೋಬರ್ 25 ಬೆಳಗ್ಗೆ 06:12ರವರೆಗೆ ಇದೆ, ಇಡೀ ದಿನ ಶುಭವಾಗಿದೆ.
ಈ ವರ್ಷ ಇನ್ಯಾವಾಗ ಗುರು ಪುಷ್ಯ ಯೋಗವಿದೆ
ಈ ವರ್ಷ ನವೆಂಬರ್ 21ಕ್ಕೆ ಗುರು ಪುಷ್ಯ ಯೋಗವಿದೆ, ಈ ದಿನ ಕೂಡ ಶುಭ ಕಾರ್ಯ ಮಾಡಲು ಅತ್ಯಂತ ಶುಭವಾಗಿದೆ.
ಗುರು ಪುಷ್ಯ ಯೋಗ ದಿನ ಯಾವ ವಸ್ತುಗಳನ್ನು ಖರೀದಿಸಿದರೆ ಶುಭ
ಚಿನ್ನ ಖರೀದಿಸಲು ಧನ್ತೇರಸ್ ದಿನದಷ್ಟೇ ಶುಭವಾಗಿದೆ
ಚಿನ್ನ ಸಾಧ್ಯವಿಲ್ಲ ಎಂದಾದರೆ ಅರಿಶಿಣದ ತುಂಡುಗಳನ್ನು ಖರೀದಿಸಿ ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜಿಸಿ
ಈ ದಿನ ಕಡ್ಲೆ ಬೇಳೆ ಖರೀದಿಸುವುದು ಶುಭ, ಇದು ಗುರು ಪ್ರಭಾವವನ್ನು ಆಕರ್ಷಿಸುತ್ತದೆ
ಹಳದಿ ಬಟ್ಟೆ, ಹಿತ್ತಾಳೆ ಪಾತ್ರೆ ಈ ಬಗೆಯ ವಸ್ತುಗಳನ್ನು ಕೂಡ ಖರೀದಿಸಬಹುದು
ಬೆಳ್ಳಿಯ ವಸ್ತುಗಳನ್ನು ಕೂಡ ಖರೀದಿ ಮಾಡಬಹುದು.
ಗುರುವಾರದಂದು ಲಕ್ಷ್ಮಿಯನ್ನು ಆರಾಧಿಸಿ
ಗುರು ಪಷ್ಯ ಯೋಗ ಗುರುವಾರ ಬಂದಿರುವುದರಿಂದ ಲಕ್ಷ್ಮಿಯನ್ನು ಆರಾಧಿಸಿ. ಈ ದಿನ ತುಪ್ಪದ ದೀಪ ಹಚ್ಚಿ ಲಕ್ಷ್ಮಿ ಮಂತ್ರವನ್ನು ಪಠಿಸಿ.
ಲಕ್ಷ್ಮಿ ಮಂತ್ರ
'ಶ್ರೀಂ'
"ಓಂ ಸರ್ವಬಾಧಾ ವಿನಿರ್‌ಮುಕ್ತೊ ಧನ ಧಾನ್ಯಃ ಸುತಾನ್ವಿತಃ, ಮನುಷ್ಯೊ ಮತ್‌ಪ್ರಸಾದಿನ್ ಭವಿಷ್ಯತಿ ನ ಸನ್‌ಶಯಾ ಓಂ:"
"ಓಂ ಶ್ರಿಂಗ್ ಶ್ರಿಯೆ ನಮಃ".
"ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ"
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲೆಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ"
"ಓಂ ಶ್ರೀಂ ಹ್ರೀಂ ಕಮಲೆ ಕಮಲಲಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ"
ಲಕ್ಷ್ಮಿ ಗಾಯತ್ರಿ ಮಂತ್ರ
"ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದ್ಮಹೇ ವಿಷ್ಣು ಪತ್ಮಿಯೇ ಚ ಧೀಮಹಿ ತನ್ನೊ ಲಕ್ಷ್ಮಿ ಪ್ರಚೋದಯಾತ್ ಓಂ"
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications