ಗುರು ಮಾರ್ಗಿ: ಫೆಬ್ರವರಿ 4ರಿಂದಲೇ ಈ 5 ರಾಶಿಯವರ ಬದುಕಿನಲ್ಲಿ ಧನಾತ್ಮಕ ಬದಲಾವಣೆಯಾಗಲಿದೆ

ಗುರು ಗ್ರಹವನ್ನು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ, ಗುರುವು ಈಗ ವಕ್ರೀಯ ಚಲನೆಯಲ್ಲಿದೆ, ಗುರುವು ಫೆಬ್ರವರಿ 4ಕ್ಕೆ ಮಾರ್ಗಿಯಾಗಲಿದೆ, 4 ತಿಂಗಳು ಹಿಮ್ಮುಖ ಚಲನೆಯಲ್ಲಿದ್ದ ಗುರುವು ಮತ್ತೆ ಮಾರ್ಗಿಯಾಗಿ ಸಂಚರಿಸಲಿದೆ, ಗುರುವು ಒಂದು ರಾಶಿಗೆ ಸಂಚಾರ ಮಾಡಿದರೆ ಆ ರಾಶಿಯಲ್ಲಿ 13 ತಿಂಗಳು ಇರುತ್ತದೆ, ಇದೀಗ ಗುರು ಮಾರ್ಗಿಯಾಗಿರುವುದರಿಂದ ಈ ರಾಶಿಯವರು ಗುರುವಿನ ಬಲದಿಂದ ಹೆಚ್ಚಿನ ಅನುಕೂಲಕರ ಪ್ರಯೋಜನ ಪಡೆಯುತ್ತಾರೆ:

Guru Margi 2025

ಮೇಷ ರಾಶಿ
ಮೇಷರಾಶಿಯವರಿಗೆ ಗುರು ಬಲದಿಂದ ಅದೃಷ್ಟದ ಸಮಯ ಫೆಬ್ರವರಿ 4ರಿಂಲೇ ಶುರು ಎಂದು ಹೇಳಬಹುದು. ನಿಮ್ಮದು ಏನಾದರು ಕೆಲಸ ಕಾರ್ಯ ಅಪೂರ್ಣವಾಗಿ ಉಳಿದಿದ್ದರೆ ಅದೆಲ್ಲವೂ ಈ ಅವಧಿಯಲ್ಲಿ ಪೂರ್ಣವಾಗಲಿದೆ, ಹೊಸ ಕೆಲಸಕ್ಕೆ ಪ್ರಯತ್ನ ಮಾಡಿದ್ದರೆ ಉತ್ತಮ ಅವಕಾಶಗಳು ದೊರೆಯಲಿದೆ. ವ್ಯಾಪಾರಸ್ಥರು ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿರುವವರು ಹೆಚ್ಚಿನ ಲಾಭ ಗಳಿಸುತ್ತೀರಿ. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆಯಲ್ಲಿ ಇರುವವರೆಗೆ ಒಳ್ಳೆಯ ಕೆಲಸ ಸಿಗಲಿದೆ. ಒಟ್ಟಿನಲ್ಲಿ ಗುರು ಮಾರ್ಗಿಯಾಗಿರುವುದಿರಿಂದ ಗುರು ಗ್ರಹದ ಶುಭ ಪ್ರಭಾವ ನಿಮ್ಮ ಮೇಲೆ ಹೆಚ್ಚಿರಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ನಿಮ್ಮ ಪ್ರಮುಖ ಕನಸು ನನಸಾಗಲಿದೆ. ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರಲಿದೆ. ಕೆಲಸದಲ್ಲಿ ಬಡ್ತಿ ಅಥವಾ ಕೆಲಸದ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಮಾರ್ಗಿಯಾಗಿರುವ ಗುರುವಿನ ಬಲದಿಂದ ನೀವು ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ಹಣಕಾಸಿಗೆ ಸಂಬಂಧಿಸಿದ ಪ್ರಯತ್ನದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ.

ಕನ್ಯಾ ರಾಶಿ
ಫೆಬ್ರವರಿ 4ರಿಂದಲೇ ಕನ್ಯಾರಾಶಿಯವರು ತಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು. ಆರ್ಥಿಕ ಜೀವನದಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತೀರಿ. ಸಾಲ ಮಾಡಿದ್ದರೆ ಅದನ್ನು ತೀರಿಸಲು ಸಾಧ್ಯವಾಗಲಿದೆ, ಹಣವನ್ನು ಉಳಿತಾಯ ಮಾಡಲು ಬಯಸಸಿದ್ದರೆ ಈ ಅವಧಿಯಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ನೀವು ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ನೀವು ಬಯಸಿದ ಕೆಲಸ ಪಡೆಯಲು ಸಾಧ್ಯವಾಗಲಿದೆ.

ತುಲಾ ರಾಶಿ
ಗುರು ಮಾರ್ಗಿಯಾದ ಬಳಿಕ ತುಲಾ ರಾಶಿಯವರಿಗೂ ಅದೃಷ್ಟದ ಬಾಗಿಲು ತೆರೆಯಲಿದೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಕಾಣುತ್ತೀರಿ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ, ಖ್ಯಾತಿ ಹೆಚ್ವಾಗಲಿದೆ. ಮದುವೆ ಸಂಬಂಧ ಹುಡುಕುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಈ ಗುರು ಸಂಚಾರ ತುಂಬಾನೇ ಅನುಕೂಲಕರವಾಗಿದೆ, ನೀವು ಗುರುದೆಸೆಯಿಂದ ಬದುಕಿನಲ್ಲಿ ಹಲವು ಧನಾತ್ಮಕ ಬದಲಾವಣೆಯನ್ನ ಕಾಣಬಹುದು, ಈ ಸಮಯದಲ್ಲಿ ಆರ್ಥಿಕ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.ಅಪೂರ್ಣವಾಗಿರುವ ಕೆಲಸ ಕಾರ್ಯಗಳು ಪೂರ್ಣವಾಗಲಿದೆ.

ಗುರುವನ್ನು ದೃಷ್ಟದಿಂದ ಗ್ರಹವೆಂದು ಪರಿಗಣಿಸಲಾಗಿದೆ, ಈ ಗುರು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿ ನಾವು ಅತ್ಯುತ್ತಮವಾದ ಫಲವನ್ನು ಪಡೆಯಬಹುದು. ಗುರುವು ನಮ್ಮ ವೃತ್ತಿ ಬದುಕು, ಆರ್ಥಿಕ ಬದುಕು, ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Guru Margi: These 5 Zodiac Gets More Benefits In Kannada

Guru Margi 2025: Most Lucky To These 5 Zodiac Signs In Kannada
Story first published: Monday, February 3, 2025, 18:16 [IST]
X
Desktop Bottom Promotion