ಗುರು ಗೋಚರ: ರಾಹು ನಕ್ಷತ್ರಕ್ಕೆ ಗುರು ಸಂಚಾರದಿಂದ ಈ ರಾಶಿಯವರಿಗೆ ಅದೃಷ್ಟ.!!

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಗಳ ಸಂಚಾರವನ್ನು ಹಾಗೂ ಅದರ ಪರಿಣಾಮಗಳನ್ನು ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಈಗ ಗುರು ಗ್ರಹದ ಚಲನೆ ಹಲವು ರಾಶಿಯವರಿಗೆ ಶುಭವಾಗುತ್ತಿದೆ. ಜೂನ್ 14ರಂದು ಗುರು ಗ್ರಹವು ತನ್ನ ನಕ್ಷತ್ರ ಬದಲಾಯಿಸುತ್ತಿದೆ. ಗುರು ಆರ್ದ್ರ ನಕ್ಷತ್ರ ಪ್ರವೇಶಿಸಲಿದೆ. ಅಲ್ಲಿಯೇ ಆಗಸ್ಟ್ 13ರ ವರೆಗೂ ಇರಲಿದೆ.

ಆರ್ದ್ರ ನಕ್ಷತ್ರದಲ್ಲಿ ಗುರು ಗೋಚರವಾಗುವುದು ಹಲವು ರಾಶಿಯವರಿಗೆ ಲಾಭದಾಯಕವಾಗಲಿದೆ. ಗುರು ಆರ್ದ್ರ ನಕ್ಷತ್ರವನ್ನು ಪ್ರವೇಶಿಸಿದಾಗ ಕೆಲವು ರಾಶಿ ಅದೃಷ್ಟದಿಂದ ತುಂಬಿರಲಿದೆ. ಹಾಗೆ ಗುರು ಮಿಥುನ ರಾಶಿಯಲ್ಲಿರುವುದರಿಂದ ಆರ್ದ್ರ ನಕ್ಷತ್ರದಲ್ಲಿ ಗುರುವನ ಗೋಚರವು ಹಲವು ರೀತಿಯಲ್ಲಿ ಲಾಭವಾಗಬಹುದು.

Jupiter Transits In Rahu Star Will Bringing Luck For These Zodiac Sign

ಮುಖ್ಯವಾಗಿ ವೈವಾಹಿಕ ಸಂತೋಷ, ಜ್ಞಾನ, ಶಿಕ್ಷಣ, ಮಕ್ಕಳು ಮತ್ತು ವಿವಾಹದ ವಿಚಾರವಾಗಿಯೂ ಲಾಭವಾಗಲಿದೆ. ಆರ್ದ್ರ ನಕ್ಷತ್ರವು ರಾಹುವಿನ ಅಧಿಪತಿ. ಹೀಗಾಗಿ ರಾಹುವಿನ ನಕ್ಷತ್ರದಲ್ಲಿ ಗುರುವಿನ ಸಂಚಾರವು ಹಲವು ರೀತಿಯಲ್ಲಿ ಲಾಭದಾಯಕ ಎನ್ನಬಹುದು. ಹಾಗಾದ್ರೆ ಗುರು ಗೋಚರವು ಯಾರಿಗೆ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ನಿರ್ಧಾರಗಳ ತೆಗೆದುಕೊಳ್ಳಬಹುದು. ಅದರಲ್ಲೂ ಹಲವು ಪ್ರಮುಖರ ಭೇಟಿಯಾಗಿ ವ್ಯವಹಾರ ಸಂಬಂಧಿ ಮಾತುಕತೆಯಲ್ಲಿ ಭಾಗಿಯಾಗುತ್ತೀರಿ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರಲಿದೆ. ಹೂಡಿಕೆ ಲಾಭ ಪಡೆಯಲು ನೀವು ತಾಳ್ಮೆಯಿಂದ ಕಾಯಬೇಕಾಗುತ್ತದೆ. ಆರ್ಥಿಕ ಸ್ಥಿತಿ ಮೊದಲಿಗಿಂತಲೂ ಸುಧಾರಿಸಲಿದೆ. ಮನೆಗೆ ಅತಿಥಿಗಳ ಆಗಮನವು ನಿಮ್ಮಲ್ಲಿ ಸಂತಸ ತರಲಿದೆ. ದಾಂಪತ್ಯದಲ್ಲಿ ಸಿಹಿ ಇರಲಿದೆ. ಆರೋಗ್ಯದ ವಿಚಾರವಾಗಿ ಹೇಳುವುದಾದರೆ ನಿಮಗೆ ಹಲವು ದಿನಗಳಿಂದ ಕಾಡಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ.

ವೃಷಭ ರಾಶಿ

ಗುರು ನಕ್ಷತ್ರ ಬದಲಾಯಿಸುವುದು ವೃಷಭ ರಾಶಿ ಮಂದಿಗೆ ಅನುಕೂಲಕರ ದಿನಗಳ ತರಲಿದೆ. ಪ್ರೇಮ ವಿವಾಹಗಳ ವಿಚಾರದಲ್ಲಿ ಶುಭವಾಗುತ್ತದೆ. ಬಹಳ ಸಮಯದಿಂದ ನೀವು ಹೂಡಿಕೆ ಮಾಡುತ್ತಾ ಬಂದಿದ್ದರೆ ಈ ಸಮಯದಲ್ಲಿ ನೀವು ಲಾಭ ಮಾಡುತ್ತೀರಿ. ಉದ್ಯೋಗಿಗಳು ಹೊಸ ಕೆಲಸ ಹುಡುಕುತ್ತಿದ್ದರೆ ಈ ಸಮಯದಲ್ಲಿ ಬಹಳ ಲಾಭದಾಯಕ ಅವಕಾಶಗಳ ಪಡೆಯುತ್ತೀರಿ. ಆಸ್ತಿ ಖರೀದಿ ಸಂಬಂಧವಾಗಿ ಶುಭವಾಗಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುವ ಕೆಲಸ ಮಾಡುವಿರಿ. ಪಿತ್ರಾರ್ಜಿತ ಕೆಲಸದಿಂದ ನೀವು ಲಾಭ ಮಾಡಬಹುದು. ವಾಹನ ಖರೀದಿಯ ಬಯಕೆ ಹೊಂದಿದ್ದರೆ ಈ ಸಮಯದಲ್ಲಿ ಒಂದು ಹೆಜ್ಜೆ ಮುಂದಿಡಬಹುದು. ಹಾಗೆ ತಯಾರಿಯಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ಗೃಹಿಣಿಯರಿಗೆ ಈ ಸಮಯದಲ್ಲಿ ಬಹಳಷ್ಟು ಲಾಭ ಮಾಡುತ್ತೀರಿ.

ತುಲಾ ರಾಶಿ

ತುಲಾ ರಾಶಿಚಕ್ರದ ಜನರಿಗೆ ಕುಟುಂಬ ವ್ಯವಹಾರ ಅಥವಾ ಪೂರ್ವಜರ ಆಸ್ತಿಯಿಂದ ಆರ್ಥಿಕ ಪ್ರಯೋಜನಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಧಾರಗಳು ಶುಭವಾಗಲಿವೆ. ನಿಮಗೆ ಬಹಳ ಸಮಯದಿಂದ ಯಾವುದಾದರು ಹಣ ಬರಬೇಕಿದ್ದರೆ ಈ ಸಮಯದಲ್ಲಿ ಯಾವುದೇ ಅಡ್ಡಿಯಿಲ್ಲದೆ ಕೈ ಸೇರಬಹುದು. ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳಲ್ಲಿ ಯಶಸ್ಸು ಪಡೆಯಲಿದ್ದೀರಿ. ಪ್ರಯಾಣಗಳಲ್ಲಿ ಉತ್ತಮ ಫಲಿತಾಂಶಗಳ ಪಡೆಯಲಿದ್ದೀರಿ. ಆಪ್ತರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಬೆಂಬಲ ಸಿಗಲುದೆ. ಕೃಷಿಕರಿಗೆ ಈ ಸಮಯ ಬಹಳ ಉತ್ತಮವಾಗಿರಲಿದೆ. ವಾಹನ ಖರೀದಿಗೆ ನೀವು ಬಯಸಿದ್ದರೆ ಉತ್ತಮ ಲಾಭವಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

Guru Gochar: Jupiter Transits In Rahu Star Will Bringing Luck For These Zodiac Sign.!!

Jupiter's appearance in Ardra Nakshatra will be beneficial for many zodiac signs. Due to Jupiter's transit to Rahu Nakshatra, many people may see good progress.
Story first published: Monday, June 16, 2025, 12:56 [IST]
X
Desktop Bottom Promotion