Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Guru Gochar: ಅ.19ರಿಂದ ಗುರು ಸಂಚಾರವು ಜೀವನದ ಅಡೆತಡೆ ನಿವಾರಿಸಲಿದೆ, ಬದುಕು ಬೆಳಗಲಿದೆ!
ಅಕ್ಟೋಬರ್‌ನಲ್ಲಿ ಹಲವು ಹಬ್ಬಗಳ ಜೊತೆಗೆ ಗ್ರಹಗತಿಗಳ ಬದಲಾವಣೆಗಳ ನೋಡಬಹುದು. ವೈದಿಕ ಶಾಸ್ತ್ರದಲ್ಲಿ ಹೇಳುವಂತೆ ಗ್ರಹಗತಿಗಳಲ್ಲಿನ ಬದಲಾವಣೆ ಜಾತಕದಲ್ಲಿನ ಹಲವು ಯೋಗಗಳಿಗೆ ಕಾರಣವಾಗುತ್ತದೆಲ ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಅದೇ ರೀತಿ ಅಕ್ಟೋಬರ್ 19ರಂದು ಗುರು ಗ್ರಹದ ಸ್ಥಾನಪಲ್ಲಟವು ಹಲವು ರೀತಿಯ ಶುಭಗಳಿಗೆ ಆರಂಭವಾಗುತ್ತಿದೆ.
ಅಕ್ಟೋಬರ್ 19ರ ಮಧ್ಯಾಹ್ನ 12:57ಕ್ಕೆ ಗುರು ಕರ್ಕ ರಾಶಿ ಪ್ರವೇಶಿಸಲಿದೆ. ಅದೇ ರಾಶಿಯಲ್ಲಿ ಡಿಸೆಂಬರ್ 4ರ ವರೆಗೂ ಸಂಚರಲಿಸಲಿದ್ದಾನೆ. ಬಳಿಕ ಡಿಸೆಂಬರ್ 4 ರಂದು ರಾತ್ರಿ 8:39 ಕ್ಕೆ ಗುರು ಮಿಥುನ ರಾಶಿಗೆ ಹಿಂತಿರುಗುತ್ತಾನೆ. ಜ್ಯೋತಿಷಿಗಳ ಪ್ರಕಾರ ಗುರುವಿನ ಈ ಚಲನೆಯು ಜ್ಯೋತಿಷ್ಯದಲ್ಲಿ ಒಂದು ಮಹತ್ವದ ಘಟನೆಯಾಗಿದ್ದು, ಇದು 12 ರಾಶಿ ಮೇಲೆಯೂ ಪರಿಣಾಮ ಬೀರಲಿದೆ.

ಗುರು ಕರ್ಕ ರಾಶಿಗೆ ಪ್ರವೇಶಿಸುವುದರೊಂದಿಗೆ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲು ಪ್ರತಿಯೊಬ್ಬರ ವೃತ್ತಿ, ಪ್ರಗತಿ, ಕೌಟುಂಬಿಕ ಜೀವನ, ವಿವಾಹ, ಐಷಾರಾಮಿ ಜೀವನ ಕುರಿತಾದ ವಿಚಾರಗಳಲ್ಲಿ ಶುಭವಾಗುತ್ತಿದೆ. ಹಲವರಲ್ಲಿ ಅಪೇಕ್ಷಿತ ಲಾಭಗಳಿವೆ. ಹಾಗಾದ್ರೆ ಗುರುವಿನ ಸಂಚಾರದ ಪರಿಣಾಮವಾಗಿ ಯಾವ ರಾಶಿಯವರಿಗೆ ಶುಭದಾಯಕ ಎಂಬುದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಗುರುವಿನ ಸಂಚಾರವು ಸಕಾರಾತ್ಮಕ ಬದಲಾವಣೆಗಳಿಂದ ತುಂಬಿರುತ್ತದೆ. ನೀವು ಹೂಡಿಕೆಗಳ ಮೇಲೆ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಮಕ್ಕಳ ಉದ್ಯೋಗ ಸಂಬಂಧವಾಗಿ ಇದ್ದಂತಹ ಅಡೆತಡೆ ನಿವಾರಣೆಯಾಗಲಿದೆ. ಇದರಿಂದ ಅವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ನಿಮ್ಮ ಮದುವೆಯ ಹಾದಿಯಲ್ಲಿನ ಅಡೆತಡೆಗಳಿಂದ ನೀವು ಮುಕ್ತರಾಗುತ್ತೀರಿ ಮತ್ತು ಹಲವು ಅವಕಾಶಗಳ ಪಡೆಯುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತೆಗೆದುಕೊಳ್ಳುವವರಿಗೆ ಈ ಸಮಯದಲ್ಲಿ ಬಹಳ ದೊಡ್ಡ ಶುಭವಿದೆ. ಬ್ಯಾಂಕ್‌ನಿಂದ ಸಾಲ ಪಡೆಯುವ ನಿಮ್ಮ ಆಲೋಚನೆಯಲ್ಲಿ ಲಾಭ ನೋಡುವಿರಿ. ಆಸ್ತಿ ಖರೀದಿಯ ವಿಚಾರವಾಗಿ ನಿಮ್ಮಲ್ಲಿ ಹೊಸ ರೀತಿಯ ವಿಚಾರಗಳು ಬರಲಿವೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇದು ಶುಭ ಸಮಯವಾಗಿರುತ್ತದೆ. ನಿಮ್ಮ ವೃತ್ತಿಜೀವನವು ಸಕಾರಾತ್ಮಕ ದಿಕ್ಕನ್ನು ತೆಗೆದುಕೊಳ್ಳುತ್ತದೆ. ಗುರುವಿನ ಆಶೀರ್ವಾದದ ಪರಿಣಾಮ ನಿಮ್ಮಲ್ಲಿ ಹೊಸ ವಸ್ತುಗಳ ಖರೀದಿಯ ವಿಚಾರದಲ್ಲಿ ಲಾಭವಿದೆ. ಪ್ರೇಮ ವಿವಾಹದ ಸ್ಪಷ್ಟ ಚಿಹ್ನೆಗಳು ಗೋಚರಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಅನುಭವಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಬಹುದು. ಕೌಟುಂಬಿಕ ವಿಚಾರದಲ್ಲಿ ಈ ಮೊದಲು ಅನುಭವಿಸಿದ್ದ ಹಲವು ಅಡ್ಡಿಗಳು ಬಗೆಹರಿಯಬಹುದು. ನಿಮ್ಮ ಆರೋಗ್ಯದಲ್ಲೂ ಸುಧಾರಣೆಗಳನ್ನು ಅನುಭವಿಸುವಿರಿ.
ಕುಂಭ ರಾಶಿ
ಈ ಸಮಯ ಕುಂಭ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ವ್ಯವಹಾರದಲ್ಲಿ ಆರ್ಥಿಕ ಲಾಭಗಳು ಮುಂದಿನ 7 ವರ್ಷಗಳಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತವೆ. ನಿಮ್ಮ ಅನೇಕ ಕೆಲಸಗಳಲ್ಲಿ ಹಣಕಾಸಿನ ವಿಚಾರವಾಗಿ ಶುಭವಿದೆ. ಮನೆಯಲ್ಲಿ ನೀವು ಶುಭ ಕಾರ್ಯ ಸಂಬಂಧವಾಗಿ ಮುಖ್ಯ ನಿರ್ಧಾರ ತೆಗೆದುಕೊಳ್ಳಬಹುದು. ಮಕ್ಕಳ ವೃತ್ತಿ ಜೀವನ ವಿವಾಹ ಸಂಬಂಧವಾಗಿ ಶುಭಕರ ದಿನಗಳನ್ನು ನೋಡಬಹುದು. ವೃತ್ತಿ ಜೀವನದಲ್ಲಿ ಬಡ್ತಿ, ವರ್ಗಾವಣೆಯಲ್ಲಿ ಶುಭವಿದೆ. ಮನೆಗಾಗಿ ನೀವು ಬಯಸಿದಂತಹ ವಸ್ತುವೊಂದನ್ನು ಖರೀದಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications