Latest Updates
-
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ!
Guru Gochar 2025: ಗುರುಬಲದ ಉತ್ತುಂಗದಿಂದ ಯಾರಿಗೆಲ್ಲಾ ಅದೃಷ್ಟದ ಜೀವನ! ಯಾರಿಗೆ ಶುಭಯೋಗ!
Guru Gochar 2025: ವೈದಿಕ ಜ್ಯೋತಿಷ್ಯದಲ್ಲಿ ಗುರುವನ್ನು ಶುಭ ಮತ್ತು ಹೆಚ್ಚು ಪರಿಣಾಮವನ್ನುಂಟು ಮಾಡುವ ಗ್ರಹವೆಂದು ಪರಿಗಣಿಸಲಾಗಿದೆ. ಹಾಗೆ ಗುರುವಿನಿಂದ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಗುರುಬಲದ ಅಂಶ ಹೊಂದಿರುವ ರಾಶಿ ಜನರಲ್ಲಿ ಗುರುವಿನ ದೊಡ್ಡ ಮಟ್ಟದ ಲಾಭ ಪಡೆಯುವುದು ನೋಡಬಹುದು. ಹಾಗೆ ಗುರು ಪ್ರತಿ 13 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ.
ಗುರುವು ಅ 19 ರಂದು ಮಧ್ಯಾಹ್ನ 12:57ಕ್ಕೆ ಕರ್ಕ ರಾಶಿ ಪ್ರವೇಶಿಸಿದ್ದಾನೆ. ಕರ್ಕ ರಾಶಿಯ ಆಡಳಿತ ಗ್ರಹ ಚಂದ್ರ, ಮತ್ತು ಗುರು ಚಂದ್ರನೊಂದಿಗೆ ಸ್ನೇಹಪರನಾಗಿರುತ್ತಾನೆ. ಇದಲ್ಲದೆ ಗುರುವು ಕರ್ಕ ರಾಶಿಯಲ್ಲಿ ಉತ್ತುಂಗದಲ್ಲಿದ್ದಾನೆ. ಡಿಸೆಂಬರ್ 3ರ ವರೆಗೆ ಗುರುವು ಈ ರಾಶಿಯಲ್ಲಿ ಉಳಿಯುತ್ತದೆ, ನಂತರ ಅದು ಹಿಮ್ಮುಖ ಚಲನೆಯಲ್ಲಿರಲಿದ್ದಾನೆ.

ಹಿಮ್ಮುಖ ಚಲನೆಯಲ್ಲಿದ್ದಾಗಲೇ ಗುರು ಮಿಥುನ ರಾಶಿ ಪ್ರವೇಶಿಸಲಿದ್ದಾನೆ. ಆದ್ರೆ ಗುರು ಈಗ ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ಚಲಿಸಲಿದ್ದಾನೆ. ಗುರು ಪ್ರಸ್ತುತ ನೇರ ಚಲನೆಯಲ್ಲಿ ಸಾಗುತ್ತಿದ್ದು ನವೆಂಬರ್ 12 ರಂದು ಹಿಮ್ಮುಖವಾಗುತ್ತದೆ. ಈ ರಾಶಿ ಬದಲಾವಣೆಯು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ನವೆಂಬರ್ 12ರ ವರೆಗೂ ಕರ್ಕ ರಾಶಿಯಲ್ಲಿದ್ದು ಡಿಸೆಂಬರ್‌ನಲ್ಲಿ ಮಿಥುನ ರಾಶಿಗೆ ಚಲಿಸಲಿದ್ದಾನೆ. ಈ ಗುರು ಗೋಚಾರವು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾದ್ರೆ ಗುರುವಿಂದ ಯಾರಿಗೆ ಲಾಭವಾಗುತ್ತಿದೆ. ಯಾರಿಗೆಲ್ಲಾ ಶುಭಕರ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಗುರು ಗೋಚರದ ಕಾರಣದಿಂದಾಗಿ ವೃಷಭ ರಾಶಿಯವರಿಗೆ ಎಲ್ಲಿಲ್ಲದ ಶುಭವಿದೆ. ಗುರು ಈ ರಾಶಿಯ 10 ಮತ್ತು 11ನೇ ಮನೆಯ ಆಳುತ್ತಾನೆ. ಆದ್ರೆ ಈಗ 3ನೇ ಮನೆಯಲ್ಲಿ ಚಲಿಸುತ್ತಿದ್ದಾನೆ. ಇದರಿಂದಾಗಿ ನಿಮಗೆ ಹಲವು ರೀತಿಯ ಪ್ರಯೋಜನಗಳ ತರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವನ್ನು ನೋಡುತ್ತೀರಿ. ಆರ್ಥಿಕ ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ಬಡ್ತಿಯ ಸಾಧ್ಯತೆಗಳಿವೆ. ಈ ಸಮಯದಲ್ಲಿ ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಬಹಳ ದಿನದಿಂದ ಬಯಸಿದಂತಹ ವಿಚಾರದಲ್ಲಿ ಹಣಕಾಸಿನ ಅಡ್ಡಿಯ ನಿವಾರಣೆಯಾಗಲಿದೆ.
ಕರ್ಕ ರಾಶಿ
ಗುರು ಆರನೇ ಮನೆಯ ಅಧಿಪತಿ ಮತ್ತು ಅದೃಷ್ಟದ ಒಂಬತ್ತನೇ ಮನೆಯ ಅಧಿಪತಿ. ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರವು ನಿಮ್ಮ ಮೊದಲ ಮನೆಯಲ್ಲಿರುತ್ತದೆ. ಗುರುವಿನ ಸಂಚಾರವು ತನ್ನ ಉಚ್ಚ ರಾಶಿಯಾದ ಕರ್ಕಾಟಕ ರಾಶಿಯಲ್ಲಿ ಬಹಳ ಶುಭ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ಗೌರವ ಮತ್ತು ವ್ಯಕ್ತಿತ್ವವು ಸುಧಾರಿಸುತ್ತದೆ. ನಿಮ್ಮ ಹೊಸ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿವೆ. ಇದರಿಂದ ನಿಮ್ಮ ಹಲವು ಸಮಸ್ಯೆಗಳು ದೂರಾಗಲಿದೆ.
ಕನ್ಯಾ ರಾಶಿ
ಗುರು ಕನ್ಯಾ ರಾಶಿಯ ನಾಲ್ಕನೇ ಮನೆಯ ಅಧಿಪತಿ ಮತ್ತು 7ನೇ ಮನೆಯ ಅಧಿಪತಿ. ಮತ್ತು ಅಕ್ಟೋಬರ್ 19, 2025 ರಂದು ಉಚ್ಚ ರಾಶಿಯಲ್ಲಿ ಗುರುವಿನ ಸಂಚಾರವು ನಿಮ್ಮ ಲಾಭದ ಮನೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಲಾಭದ ಮನೆಯಲ್ಲಿ ಗುರುವಿನ ಸಂಚಾರವು ಉತ್ತಮ ಫಲಿತಾಂಶಗಳನ್ನು ತರುತ್ತದೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ ಮತ್ತು ನೀವು ಹೊಸ ಯೋಜನೆಗಳಿಂದ ಪ್ರಯೋಜನ ಪಡೆಯುತ್ತೀರಿ. ವಿವಾಹ ಸಂಬಂಧವಾಗಿ ನಿಮಗೆ ಶುಭ ಸುದ್ದಿಗಳು ಬರಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications