12 ವರ್ಷಗಳ ಬಳಿಕ ಗುರು ಆದಿತ್ಯ ರಾಜಯೋಗ: ಈ ರಾಶಿಯವರಲ್ಲಿ ಆರ್ಥಿಕ ಸಮಸ್ಯೆಗೆ ಪರಿಹಾರ

ವೈದಿಕ ಶಾಸ್ತ್ರದಲ್ಲಿ ಎಲ್ಲಾ ರಾಶಿಗಳನ್ನು ಎಲ್ಲಾ ಗ್ರಹಗಳನ್ನು ಮುಖ್ಯ ಎಂದು ಪರಿಗಣಿಸಲಾಗುತ್ತದೆ. 12 ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಜನರ ಜೀವನದಲ್ಲಿ ಬದಲಾವಣೆಗಳ ತರುವುದು ನೋಡಬಹುದು. ಹಾಗೆ ಕಾಲ ಕಾಲಕ್ಕೆ ಗ್ರಹಗತಿಗಳ ಬದಲಾವಣೆಯು ದೊಡ್ಡ ಮಟ್ಟದಲ್ಲಿ ಬದಲಾವಣೆಗಳ ತರುವುದನ್ನು ಕೂಡ ನಾವು ನೋಡಬಹುದು. ಇನ್ನು ಗ್ರಹಗಳು ತಮ್ಮ ರಾಶಿ ಬದಲಿಸಿ ಮತ್ತೊಂದು ರಾಶಿಗೆ ಚಲಿಸಿದಾಗ ಉಂಟಾಗುವ ಯೋಗವು ಹಲವು ರೀತಿಯ ಲಾಭಗಳ ತರಲಿದೆ.

ಈಗ ಗ್ರಹಗಳ ಕೇಂದ್ರಬಿಂದು ಎಂದು ಕರೆಯಲಾಗುವ ಸೂರ್ಯನು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ ಈಗಾಗಲೇ ಗುರು ಮಿಥುನ ರಾಶಿಯಲ್ಲಿರುವುದರಿಂದಾಗಿ ಸೂರ್ಯ ಹಾಗೂ ಗುರು ಗ್ರಹಗಳ ಸಮ್ಮಿಲವಾಗುತ್ತಿದೆ. ಇದೇ ಜೂನ್ 15ರಂದು ಎರಡು ಗ್ರಹಗಳ ಸಂಯೋಗವಾಗುತ್ತಿದೆ. ಹಾಗೆ ಈ ಸಂಯೋಗವು ಗುರು ಆದಿತ್ಯ ರಾಜಯೋಗ ಸೃಷ್ಟಿಯಾಗಲಿದೆ, ಇದರಿಂದ ಹಲವು ರಾಶಿಗಳಿಗೆ ಅನುಕೂಲಕರ ದಿನಗಳು ಆಗಮಿಸಲಿವೆ.

This Will Lead Financial Benefits To These Zodiac Signs

ಗುರು ಆದಿತ್ಯಾ ರಾಜಯೋಗವು ಹಲವು ರಾಶಿಗಳಿಗೆ ಅದೃಷ್ಟ ತರಲಿದೆ. ಈ ರಾಜಯೋಗವು ಶಕ್ತಿಶಾಲಿ ಹಾಗೂ ಸಂಪತ್ತು, ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಕುಂಭ ರಾಶಿಯ 5ನೇ ಮನೆಯಲ್ಲಿ ಗುರು ಆದಿತ್ಯಾ ಯೋಗ ಸೃಷ್ಟಿಯಾಗಲಿದೆ ಇದು ಹಲವು ರಾಶಿಗಳಿಗೆ ಅದ್ಭುತ ಲಾಭ ತರಲಿದೆ, ಹಾಗಾದ್ರೆ ಯಾರಿಗೆ ಇದು ಲಾಭದಾಯಕ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.

ಕನ್ಯಾ ರಾಶಿ

ಕನ್ಯಾ ರಾಶಿಯ 10ನೇ ಮನೆಯಲ್ಲಿ ಗುರು ಆದಿತ್ಯಾ ಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ವ್ಯವಹಾರ ಲಾಭಗಳು, ಸಂಪತ್ತು ಕುರಿತಾದ ಸಮಸ್ಯೆಗಳು ಸುಧಾರಿಸಲಿದೆ. ನಿಮ್ಮ ಕೈಯಲ್ಲಿ ಹಣ ಓಡಾಟದಿಂದ ನಿಮಗಿದ್ದ ಒತ್ತಡ ಕಡಿಮೆಯಾಗಲಿದೆ. ಕಚೇರಿಯಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಹೊಸ ಯೋಜನೆಗಳನ್ನು ರೂಪಿಸಲು ನೀವು ಬಹಳ ಸಮಯದಿಂದ ಓಡಾಟ ನಡೆಸುತ್ತಿದ್ದರೆ ಈ ಸಮಯದಲ್ಲಿ ಯಶಸ್ಸು ಪಡೆಯಲಿಯಲಿದ್ದೀರಿ. ದೊಡ್ಡ ಕೆಲಸಗಳಲ್ಲಿ ನಿಮಗೆ ಶುಭವಾಗುವ ನಿರೀಕ್ಷೆ ಇದೆ. ಉದ್ಯಮಿಗಳು, ವ್ಯಾಪಾರಿಗಳಿ ದೊಡ್ಡ ಒಪ್ಪಂದದಲ್ಲಿ ತೊಡಗಲಿದ್ದಾರೆ. ನೀವು ಹೊಸದಾಗಿ ಯಾವುದಾದರು ವ್ಯವಹಾರ ಆರಂಭಿಸಿದ್ದರೆ ಈ ಸಮಯದಲ್ಲಿ ಲಾಭ ಮಾಡುವಿರಿ. ನೀವು ಜವಳಿ ವ್ಯಾಪಾರಿಗಳಾಗಿದ್ದರೆ ಈ ಸಮಯದಲ್ಲಿ ಬಹಳ ದೊಡ್ಡ ವ್ಯವಹಾರ ಮಾಡುವಿರಿ. ನವವಿವಾಹಿತರು ದೊಡ್ಡ ಮಟ್ಟದ ಪ್ರವಾಸಕ್ಕೆ ಮುಂದಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯ 11ನೇ ಮನೆಯಲ್ಲಿ ಗುರು ಆದಿತ್ಯ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ನಿಮ್ಮ ಹೂಡಿಕೆಗಳು ಲಾಭದಾಯಕವಾಗಿ ಪರಿಣಮಿಸಲಿವೆ. ಹಾಗೆ ಕೆಲಸ ಕಾರ್ಯಗಳಲ್ಲಿಯೂ ಲಾಭ ನೋಡುತ್ತೀರಿ. ನಿಮ್ಮ ಬಹಳ ಸಮಯದ ಆಸೆಯೊಂದು ಈ ಸಮಯದಲ್ಲಿ ಈಡೇರಲಿದೆ. ಹಾಗೆ ವಾಹನ ಸಂಬಂಧಿಸಿದಂತೆ ಯಾವುದಾದರು ಕಾರ್ಯ ಅರ್ಧದಲ್ಲೇ ನಿಂತಿದ್ದರೆ ಈ ಸಮಯದಲ್ಲಿ ಪೂರ್ಣವಾಗಲಿದೆ, ನಿಮ್ಮ ಹೆಸರು ಖ್ಯಾತಿ ಹೆಚ್ಚಾಗುವಂತಹ ಕೆಲಸ ಮಾಡಲಿದ್ದೀರಿ. ಅವಿವಾಹಿತರಿಗೆ ಈ ಸಮಯದಲ್ಲಿ ಶುಭವಾಗಲಿದೆ. ನಿಮ್ಮಲ್ಲಿದ್ದ ಹಣಕಾಸು ಸಮಸ್ಯೆಗಯನ್ನು ಶ್ರಮದಿಂದ ಪರಿಹಾರ ಮಾಡಿಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ನೀವು ಶ್ರಮ ಹಾಕಿದರೆ ಅದರಿಂದ ಪ್ರತಿಫಲ ನೋಡಬಹುದು. ಯಾರಿಂದಾದರು ಹಣಕ್ಕಾಗಿ ಮನವಿ ಮಾಡಿದ್ದರೆ ಈ ಸಮಯದಲ್ಲಿ ದೊಡ್ಡ ಲಾಭ ನೋಡುವಿರಿ. ಕೌಟುಂಬಿಕ ಸಮಸ್ಯೆ ನಿವಾರಣೆಯಾಗಲಿದೆ, ಅಲ್ಲಿದ್ದ ಹಣಕಾಸು ವಿಚಾರ ಧನಾತ್ಮಕ ರೀತಿಯಲ್ಲಿ ಪರಿಹಾರವಾಗಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಇದನ್ನು ಮಾಹಿತಿಯಾಗಿ ಮಾತ್ರ ಪರಿಗಣಿಸಬೇಕು)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Guru Aditya Raja Yoga After 12 Years: This Will Lead Financial Benefits To These Zodiac Signs

Guru Aditya Raja Yoga will bring good luck to many zodiac signs. This Raja Yoga is considered powerful and a sign of wealth and luck. Guru Aditya Yoga will be created in the 5th house of Aquarius.
Story first published: Monday, June 2, 2025, 17:30 [IST]
X
Desktop Bottom Promotion