Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
Grahan Yoga: ರಾಹು-ಚಂದ್ರನ ಸಂಯೋಗದಿಂದ ಗೃಹಣಯೋಗ ಸೃಷ್ಟಿ: 3 ರಾಶಿಯವರು ಎಚ್ಚರವಹಿಸಿ!
Grahan Yoga: ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಹಾಗೆ ಪ್ರತಿಯೊಂದು ಗ್ರಹಗಳ ಚಲನೆಯು ಒಂದೊಂದು ರೀತಿಯ ಪರಿಣಾಮಗಳ ಉಂಟು ಮಾಡುವುದು ನೋಡಬಹುದು. ಹಾಗೆ ರಾಹು ಹಾಗೂ ಕೇತುವಿನ ಚಲನೆಯು ಎಲ್ಲಾ 12 ರಾಶಿಗಳ ಮೇಲೂ ಪ್ರಭಾವ ಬೀರುವುದು ನೋಡಬಹುದು. ರಾಹು ಚಲನೆಯಿಂದಾಗಿ ಹಲವು ರಾಶಿಗಳಿಗೆ ಶುಭ ಹಾಗೂ ಆಶುಭ ಕೂಡ ಆಗಲಿದೆ.
ರಾಹು ಮೇ ತಿಂಗಳಲ್ಲಿ ಕುಂಭ ರಾಶಿಗೆ ಚಲಿಸಿದ್ದಾನೆ. ಹಾಗೆ ಚಂದ್ರನು ಜೂನ್ 16ರಂದು ಕುಂಭ ರಾಶಿಯಲ್ಲಿ ಸಂಕ್ರಮಣನಾಗುತ್ತಾನೆ. ಈ ಅಪರೂಪದ ಸಂಯೋಗವು ಯೋಗಕ್ಕೆ ಕಾರಣವಾಗುತ್ತಿದೆ. ಗ್ರಹಣ ಯೋಗವು ಅತ್ಯಂತ ಅಶುಭಕಾರಕ ಎಂದು ಪರಿಗಣಿಸಲಾಗುತ್ತದೆ. ಈ ಅಪರೂಪದ ಶುಭ ಯೋಗವು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ.

ಈ ಯೋಗ ಕೆಲವು ರಾಶಿಗಳಿಗೆ ಶುಭಕರವಾದರು ಹಲವು ರಾಶಿಗಳಿಗೆ ಅಶುಭಕಾರಕವಾಗಲಿದೆ. ಹಲವರು ಸಮಸ್ಯೆಗಳ ಎದುರಿಸುತ್ತಾರೆ. ಹಣಕಾಸು, ಆರೋಗ್ಯ, ವ್ಯಾಪಾರ, ಕೌಟುಂಬಿಕ ವಿಚಾರಗಳಲ್ಲಿ ನಿಮಗೆ ಸಮಸ್ಯೆಗಳು ಎದುರಾಗಬಹುದು. ಹಾಗಾದ್ರೆ ಈ ಗ್ರಹಣಯೋಗವು ಯಾವ ರಾಶಿಯವರಿಗೆ ಅಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೀನ ರಾಶಿ
ರಾಹು ಮತ್ತು ಚಂದ್ರನ ಸಂಯೋಜನೆಯಿಂದಾಗಿ ಮೀನ ರಾಶಿಯ 12ನೇ ಮನೆಯಲ್ಲಿ ಗ್ರಹಣ ಯೋಗ ಉಂಟಾಗುತ್ತಿದೆ. ಈ ಕಾರಣದಿಂದಾಗಿ ನೀವು ಅನಗತ್ಯ ಕೆಲಸಗಳು ಅಥವಾ ಪ್ರಯಾಣದಲ್ಲಿ ಭಾಗಿಯಾಗಬಹುದು. ಈ ಪ್ರಯಾಣಗಳು ನಿಮಗೆ ಉತ್ತಮ ಫಲಿತಾಂಶ ತರದೆ ಇರಬಹುದು. ನಿಮ್ಮ ಪ್ರಯಾಣ, ಪ್ರವಾಸದಲ್ಲಿ ಅಮೂಲ್ಯ ವಸ್ತುಗಳ ಕಡೆಗೆ ಗಮನವಿಡಬೇಕು. ವ್ಯಾಪಾರಿಗಳಲ್ಲಿ ದೊಡ್ಡ ಒಪ್ಪಂಗಳು ನಷ್ಟಕ್ಕೆ ಕಾರಣವಾಗಬಹುದು. ಕಚೇರಿ ಕೆಲಸಗಳಲ್ಲಿ ನಿಮಗೆ ಒತ್ತಡ ಹೆಚ್ಚಾಗಬಹುದು. ನಿಮ್ಮ ಪರಿಶ್ರಮಗಳಿಗೆ ಉತ್ತಮ ಫಲ ಸಿಗದೆ ಇರಬಹುದು. ನೀವು ಉಳಿತಾಯ ಮಾಡಬೇಕಿದ್ದ ಹಣ ಬೇರೊಂದು ಕೆಲಸದಲ್ಲಿ ಸಿಲುಕಬಹುದು.
ಕರ್ಕ ರಾಶಿ
ಕರ್ಕ ರಾಶಿ 8 ನೇ ಮನೆಯಲ್ಲಿ ರಾಹು ಮತ್ತು ಚಂದ್ರನ ಸಂಯೋಗವು ಗ್ರಹಣ ಯೋಗವನ್ನು ಸೃಷ್ಟಿಸುತ್ತದೆ. ಇದು ಕರ್ಕ ರಾಶಿಯವರಿಗೆ ಬಹಳ ಸಮಸ್ಯೆಗಳ ತರಬಹುದು, ನಿಮ್ಮ ಕೌಟುಂಬಿಕ ಒತ್ತಡ ಹೆಚ್ಚಾಗಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು, ನೀವು ಕೆಲಸ ಕಳೆದುಕೊಳ್ಳುವ ಆತಂಕವಿದೆ. ದಾಂಪತ್ಯ, ಪ್ರೀತಿ, ಪ್ರೇಮದ ವಿಚಾರವಾಗಿಯೂ ನಿಮಗೆ ದೊಡ್ಡ ಸವಾಲುಗಳಿವೆ. ಇಷ್ಟು ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ವಸ್ತು, ವ್ಯವಹಾರ ನಿಮ್ಮ ಕೈ ತಪ್ಪಬಹುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿಯ ಮೊದಲ ಮನೆಯಲ್ಲಿ ರಾಹು ಮತ್ತು ಚಂದ್ರನ ಸಂಯೋಗವು ಗ್ರಹಣ ಯೋಗ ಉಂಟು ಮಾಡಲಿದೆ. ಇದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿನ ಸಮಸ್ಯೆಗಳು ಹೆಚ್ಚಾಗಬಹುದು. ಕುಟುಂಬದಲ್ಲಿದ್ದ ಹಲವು ದಿನಗಳ ಸಮಸ್ಯೆ ದೊಡ್ಡದಾಗಬಹುದು, ಅದರಲ್ಲೂ ಆಸ್ತಿ ಸಂಬಂಧಿಸಿದಂತೆ ರಕ್ತ ಸಂಬಂಧಿಗಳೊಂದಿಗೆ ಕಲಹ ಹೆಚ್ಚಾಗಬಹುದು. ಮನೆ ಕಟ್ಟಿಸುವವರು ಹಾಗೆ ಅದರ ತಯಾರಿಯಲ್ಲಿದ್ದರಿಗೆ ಮತ್ತೆ ಹಿನ್ನಡೆ ನೋಡಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಅದರಲ್ಲೂ ನೀವು ಬೆನ್ನು ನೋವಿನ ಸಮಸ್ಯೆಗಳಿಗೆ ತುತ್ತಾಗಿದ್ದರೆ ನೋವು ಹೆಚ್ಚಾಗಬಹುದು. ವ್ಯಾಪಾರಿ ವರ್ಗಕ್ಕೆ ಈ ಸಮಯದಲ್ಲಿ ನಷ್ಟದ ಅನುಭವ ಹೆಚ್ಚಾಗಬಹುದು.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications












