Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಾರ್ಚ್‌ನಲ್ಲಿ ಗ್ರಹಣ ಯೋಗ: ಈ 3 ರಾಶಿಯವರು ಏ. 13ರವರೆಗೆ ತುಂಬಾನೇ ಜಾಗ್ರತೆ
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ರಾಹು ಗ್ರಹಗಳಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯದಲ್ಲಿ, ಸೂರ್ಯನು ಗ್ರಹಗಳ ಅಧಿಪತಿ ಸ್ಥಾನ ಹೊಂದಿದ್ದರೆ ರಾಹುವನ್ನು ದುಷ್ಟ ಹಾಗೂ ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ.
ಸೂರ್ಯ -ಸಂಯೋಗ ಅಷ್ಟು ಒಳ್ಳೆಯದು ಎಂದು ಪರಿಗಣಿಸುವುದಿಲ್ಲ. ಏಕೆಂದರೆ ಸೂರ್ಯ ಮತ್ತು ರಾಹುವಿನ ಸಂಯೋಗವು ದ್ವಾದಶರಾಶಿಗಳ ಮೇಲೆ ಮತ್ತು ದೇಶ ಮತ್ತು ಪ್ರಪಂಚದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ರಾಶಿಚಕ್ರದಲ್ಲಿ ಎರಡು ಗ್ರಹಗಳು ಸಂಕ್ರಮಿಸಿದಾಗ, ಶುಭ ಮತ್ತು ಅಶುಭ ಪರಿಣಾಮಗಳು ಕಂಡುಬರುತ್ತವೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಆದರೆ ರಾಹು ವಿರುದ್ಧ ದಿಕ್ಕಿನಲ್ಲಿ ಚಲಿಸುವ ಗ್ರಹವಾಗಿದ್ದು 18 ತಿಂಗಳಿಗೆ ರಾಶಿ ಬದಲಾವಣೆ ಮಾಡುವುದು. ರಾಹು-ಸೂರ್ಯ ಸಂಯೋಗ ಶೀಘ್ರದಲ್ಲೇ ಆಗಲಿದೆ. ರಾಹು ಮೀನ ರಾಶಿಯಲ್ಲಿದೆ, ಮಾರ್ಚ್‌ನಲ್ಲಿ ಸೂರ್ಯ ಮೀನ ರಾಶಿಗೆ ಸಂಚರಿಸಲಿದೆ. ಮಾರ್ಚ್ 14 ರಂದು ಮೀನ ರಾಶಿಯಲ್ಲಿ ರಾಹು ಮತ್ತು ಸೂರ್ಯನ ಸಂಯೋಗವಾಗಲಿದೆ.
ಸೂರ್ಯ-ರಾಹುವಿನ ಈ ಸಂಯೋಗವು 18 ವರ್ಷಗಳ ನಂತರ ಮಾರ್ಚ್ 14 ರಂದು ಮೀನ ರಾಶಿಯಲ್ಲಿ ರೂಪುಗೊಳ್ಳಲಿದೆ. ಈ ಎರಡು ಗ್ರಹಗಳ ಸಂಯೋಗದಿಂದ ಗ್ರಹಣ ಯೋಗ ಉಂಟಾಗಲಿದೆ. ಮಾರ್ಚ್ 14 ರಂದು ಸಂಭವಿಸಲಿರುವ ಗ್ರಹಣದಿಂದಾಗಿ ಕೆಲವು ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ:
ತುಲಾ ರಾಶಿ
ತುಲಾ ರಾಶಿಯವರಿಗೆ ಮಾರ್ಚ್ 14 ರಂದು ರಾಹು-ಸೂರ್ಯ ಸಂಯೋಗದಿಂದ ಉಂಟಾದ ಗ್ರಹಣ ಯೋಗ ಹಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ, ಹಾನಿಯನ್ನುಂಟುಮಾಡುತ್ತದೆ. ಸೂರ್ಯ ಮತ್ತು ರಾಹುವಿನ ಈ ಸಂಯೋಜನೆಯು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಸಮಸ್ಯೆಗಳು, ಕೆಲಸದಲ್ಲಿ ಅಡೆತಡೆಗಳು, ವೈಫಲ್ಯಗಳು ಮತ್ತು ಶತ್ರುಗಳ ಭಯ ಹೆಚ್ಚಾಗಲಿದೆ. ಗ್ರಹಣದಿಂದಾಗಿ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಈ ಅವಧಿಯಲ್ಲಿ ತುಂಬಾನೇ ಮಾನಸಿಕ ಒತ್ತಡ ಉಂಟಾಗುವುದು.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ಸೂರ್ಯ ಮೀನ ರಾಶಿಗೆ ಸಂಚರಿಸಿದಾಗ ರಾಹುವಿನಿಂದಿಗೆ ಸಂಯೋಗವಾಗಲಿದೆ. ಇದರಿಂದ ರೂಪುಗೊಂಡ ಗ್ರಹಣ ದೋಷವು ಸಿಂಹ ರಾಶಿಯವರಿಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ಈ ಗ್ರಹಣ ಯೋಗವು ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯವು ದುರ್ಬಲವಾಗಿರಬಹುದು. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಹಣದ ನಷ್ಟದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಅಲುಗಾಡಬಹುದು. ಕೆಲಸದ ಸ್ಥಳದಲ್ಲಿ ಕೆಲವು ಕೆಲಸಗಳಿಗೆ ಸಂಬಂಧಿಸಿದಂತೆ ಸಹೋದ್ಯೋಗಿಗಳೊಂದಿಗೆ ವಾದಗಳು ಹೆಚ್ಚಾಗುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಹೆಚ್ಚಾಗಬಹುದು.
ಕುಂಭ ರಾಶಿ
ಗ್ರಹಣ ಯೋಗದ ರಚನೆಯಿಂದಾಗಿ ಕುಂಭ ರಾಶಿಯವರು ಈ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ವ್ಯಾಪಾರದಲ್ಲಿ ನಷ್ಟ ಮತ್ತು ಉದ್ಯೋಗದಲ್ಲಿ ಸಮಸ್ಯೆಗಳಿರಬಹುದು. ಈ ಗ್ರಹಣ ಯೋಗವು ನಿಮ್ಮ ಜಾತಕದ 12 ನೇ ಸ್ಥಾನದಲ್ಲಿ ರೂಪುಗೊಳ್ಳುತ್ತದೆ. ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ರಿಯಲ್ ಎಸ್ಟೇಟ್ ವಿಷಯದಲ್ಲಿ, ನೀವು ನ್ಯಾಯಾಲಯ ಮೆಟ್ಟಿಲು ಹತ್ತಿ ಇಳಿಯಬೇಕು, ನಿಮ್ಮ ಗೌರವಕ್ಕೆ ಧಕ್ಕೆಯಾಗಬಹುದು, ಈ ಬಗ್ಗೆ ಜಾಗ್ರತೆವಹಿಸಿ.
ಈ ಗ್ರಹಣ ಯೋಗ ಎಷ್ಟು ಸಮಯ ಇರಲಿದೆ?
ಈ ಗ್ರಹಣ ಯೋಗವು ಮೀನ ರಾಶಿಯಲ್ಲಿ ಸೂರ್ಯ-ರಾಹು ಇರುವವರೆಗೆ ಮಾತ್ರ ಇರುತ್ತದೆ, ಸೂರ್ಯ ಮೀನದಿಂದ ಮೇಷ ರಾಶಿಗೆ ಸಂಚರಿಸಿದಾಗ ಈ ಗ್ರಹಣ ಯೋಗ ಕೊನೆಯಾಗುವುದು, ಸಮಸ್ಯೆಗಳು ಬಗೆಹರಿಯುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
