Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೋವರ್ಧನ ಪೂಜೆಗೆ ಶುಭ ಕೋರಲು ಶುಭಾಶಯಗಳು ಹಾಗೂ ಪೂಜಾ ಸಮಯದ ಮಾಹಿತಿ
ದೀಪಾವಳಿಯ ಮಾರನೇಯ ದಿನ ಗೋವರ್ಧನ ಪೂಜೆಯನ್ನು ಮಾಡಲಾಗುವುದು. ದಕ್ಷಿಣ ಭಾರತದಲ್ಲಿ ಈ ಮಾಸದಿಂದ ಕಾರ್ತಿಕ ಮಾಸ ಶುರು, ಕಾರ್ತಿಕ ಮಾಸ ಶಿವನ ಆರಾಧನೆ ಮೀಸಲಾದ ಮಾಸವಾಗಿದೆ. ಗೋವರ್ಧನ ಪೂಜೆಯಂದು ಶ್ರೀಕೃಷ್ಣ ಆರಾಧನೆ ಮಾಡಲಾಗುವುದು. ಸಗಣಿಯಿಂದ ಗೋವರ್ಧನ ಬೆಟ್ಟ ಮಾಡಿ,ವಿವಿಧ ಭಕ್ಷ್ಯಗಳನ್ನು ತಯಾರಿಸಿ ಶ್ರೀ ಕೃಷ್ಣನಿಗೆ ಅರ್ಪಿಸಿ ತುಂಬಾನೇ ವಿಜೃಂಭಣೆಯಿಂದ ಗೋವರ್ಧನ ಪೂಜೆ ಮಾಡಲಾಗುವುದು.
ಗೋವರ್ಧನ ಪೂಜೆಗೆ ಶುಭ ಮುಹೂರ್ತ
ಪಾಡ್ಯಮಿ ತಿಥಿ ನವೆಂಬರ್ 1 ಸಂಜೆ 06:16ಕ್ಕೆ ಶುರುವಾಗುವುದು
ನವೆಂಬರ್ 2 ರಾತ್ರಿ 08:21ಕ್ಕೆ ಮುಕ್ತಾಯವಾಗಲಿದೆ.
ಉದಯ ತಿಥಿಯ ಪ್ರಕಾರ ಗೋವರ್ಧನ ಪೂಜೆಯನ್ನು ನವೆಂಬರ್ 2ರಂದು ಆಚರಿಸಲಾಗುವುದು.
ಜ್ಯೋತಿಷ್ಯ ದೃಷ್ಟಿಯಿಂದ ನವೆಂಬರ್ 2 ತುಂಬಾ ವಿಶೇಷವಾಗಿದೆ
ನವೆಂಬರ್ 2ರಂದು 3 ವಿಶೇಷ ಯೋಗ ಏರ್ಪಡಲಿದೆ, ಈ ದಿನ ಸೌಭಾಗ್ಯ ಯೋಗ, ಆಯುಷ್ಮಾನ್ ಯೋಗ, ಪುಷ್ಕರ ಯೋಗವಿದ್ದು ಈ ಸಮಯದಲ್ಲಿ ಪೂಜೆಯನ್ನು ಮಾಡಬಹುದು.
ಈ ದಿನ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಆಯುಷ್ಮಾನ್ ಯೋಗವಿದೆ
ಸೌಭಾಗ್ಯ ಯೋಗ ಇಡೀ ದಿನವಿದೆ
ಪುಷ್ಕರ ಯೋಗ ರಾತ್ರಿ 08:21ರಿಂದ ನವೆಂಬರ್ 3 ಬೆಳಗ್ಗೆ 5:58ರವರೆಗೆ ಇದೆ.
ಗೋವರ್ಧನ ಪೂಜೆ: ಪೂಜಾ ವಿಧಾನ:
- ಈ ದಿನ ಬೆಳಗ್ಗೆ ಬೇಗ ಎದ್ದು ಮೈಗೆ ಎಣ್ಣೆ ತಿಕ್ಕಿ ಸ್ನಾನ ಮಾಡಲಾಗುವುದು
- ಸಗಣಿಯಿಂದ ಮನೆಯ ಮುಂಭಾಗ ಸಾರಿಸುತ್ತಾರೆ, ಬಳಿಕ ಮನೆಯ ಮುಖ್ಯ ಬಾಗಿಲಿನಲ್ಲಿ ಸಗಣಿಯಿಂದ ಗೋವರ್ಧನ ಬೆಟ್ಟ ಮಾಡಬೇಕು, ಅದರಮಧ್ಯದಲ್ಲಿ ಶ್ರೀಕೃಷ್ಣ ವಿಗ್ರಹವನ್ನು ಇಟ್ಟು ವಿವಿಧ ಭಕ್ಷ್ಯಗಳನ್ನು ಅರ್ಪಿಸಿ ಪೂಜೆ ಮಾಡಲಾಗುವುದು.
- ಈ ದಿನ ಇಂದ್ರ, ವರುಣ, ಅಗ್ನಿಗೂ ಪೂಜೆ ಸಲ್ಲಿಸಲಾಗುವುದು. ಈ ದಿನ ಗೋವರ್ಧನ ಪವರ್ತದ ಕತೆಯನ್ನು ಹೇಳಲಾಗುವುದು.
- ಗೋವರ್ಧನ ಪೂಜೆಯಂದು ಗೋವುಗಳಿಗೂ ಪೂಜೆಯನ್ನು ಸಲ್ಲಿಸಲಾಗುವುದು, ಸಂಜೆ ಸಮಯದಲ್ಲಿ ಗೋವುಗಳನ್ನು ಅಲಂಕರಿಸಿ ಅವುಗಳಿಗೆ ಪೂಜೆ ಸಲ್ಲಿಸಲಾಗುವುದು.
- ಗೋವರ್ಧನ ಪೂಜೆಯನ್ನು ಕೆಲವರು ಬೆಳಗ್ಗೆ ಮಾಡಿದರೆ ಇನ್ನು ಕೆಲವರು ಗೋಧೂಳಿಯ ಸಮಯ ಅಂದರೆ ಸಂಜೆಯ ಹೊತ್ತಿನಲ್ಲಿ ಮಾಡುತ್ತಾರೆ.
ಗೋವರ್ಧನ ಪೂಜೆಯಂದು ಶುಭ ಕೋರಲು ಶುಭಾಶಯಗಳು
1.
ಗೋವರ್ಧನ ಪೂಜೆಯ ಶುಭಾಶಯಗಳು 2024

2.
ಆ ಶ್ರೀಕೃಷ್ಣ ಕೃಪೆಯಿಂದ ನಿಮ್ಮ ಬದುಕಿನಲ್ಲಿ ಹರ್ಷ ತುಂಬಿರಲಿ, ನೆಮ್ಮದಿ, ಸಮಪತ್ತು ನಿಮ್ಮ ಜೊತೆಗಿರಲಿ
ಗೋವರ್ಧನ ಪೂಜೆಯ ಶುಭಾಶಯಗಳು
3.
ಈ ಶುಭ ದಿನವನ್ನ ಭಕ್ತಿ, ಪ್ರೀತಿ, ಕೃತಜ್ಞತೆಯಿಂದ ಆಚರಿಸೋಣ, ಹಬ್ಬದ ಹರ್ಷ ಜೀವನ ಪೂರ್ತಿ ತುಂಬಿರಲಿ
ಗೋವರ್ಧನ ಹಬ್ಬದ ಶುಭಾಶಯಗಳು
4.
ಶ್ರೀ ಕೃಷ್ಣನ ಕೃಪೆಯಿಂದ ನಿಮ್ಮೆಲ್ಲಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿ
ಗೋವರ್ಧನ ಬೆಟ್ಟದಂಥ ಕನಸು ನನಸಾಗಲಿ
ಗೋವರ್ಧನ ಪೂಜೆ ಶುಭಾಶಯಗಳು
5.
ಗೋವರ್ಧನ ಪೂಜೆಯ ಶುಭಾಶಯಗಳು
ಈ ಹಬ್ಬ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ತುಂಬಲಿ
ಮನೆಯಲ್ಲಿ ಹರ್ಷ ತುಂಬಿರಲಿ
ಸಮೃದ್ಧಿ ಹೆಚ್ಚಿಸಲಿ
6
ನೀವು ಎದುರಿಸುತ್ತಿರುವ ಸವಾಲುಗಳು ಶ್ರೀಕೃಷ್ಣನ ಕೃಪೆಯಿಂದ ದೂರಾಗಲಿ
ಬಹುದಿನದ ನಿಮ್ಮ ಕನಸು ನನಸಾಗಲಿ
ಗೋವರ್ಧ ಪೂಜೆಯ ಶುಭಾಶಯಗಳು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications





