Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಿಥುನ ರಾಶಿಫಲ 2026: ಈ ವರ್ಷ ಮಿಥುನ ರಾಶಿಯವರಿಗೆ ಏನೆಲ್ಲಾ ಶುಭವಿದೆ?
2025ರಲ್ಲಿ ಮಿಥುನ ರಾಶಿಯವರಿಗೆ ಬಹಳ ಅನುಕೂಲಕರ ವರ್ಷವಾಗಿತ್ತು. ಅದ್ರಲ್ಲೂ ಎಲ್ಲಾ ಕ್ಷೇತ್ರದಲ್ಲೂ ನಿಮಗೆ ಶುಭಕರವಾಗಿದ್ದು ನೋಡಬಬಹುದು. ಮಿಥುನ ರಾಶಿಯವರಲ್ಲಿ 2025 ಬಹಳ ಅನುಕೂಲವಾಗಿತ್ತು. ನಿಮ್ಮ ಹಲವು ಕೆಲಸಗಳು ಅಂದುಕೊಂಡ ರೀತಿಯಲ್ಲಿ ನೆರವೇರಿತ್ತು. ಈ ವರ್ಷ ಹಲವು ಯೋಗಗಳ ನಡುವೆ ವರ್ಷ ಮುಕ್ತಾಯಗೊಂಡಿದೆ
2026ರಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ಮಿಥುನ ರಾಶಿಯವರಿಗೆ ಶುಭ ಹಾಗೂ ಅಶುಭ ಯೋಗಗಳ ಉಂಟು ಮಾಡುತ್ತಿದೆ. 2026ರಲ್ಲಿ ನೀವು ಹಲವು ರೀತಿಯ ಶುಭಯೋಗಗಳ ನೀಡಬಹುದು. ಹಾಗೆ ಕೌಟುಂಬಿಕ ದೃಷ್ಟಿಕೋನದಿಂದ ಸಕಾರಾತ್ಮಕವಾಗಲಿದೆ. ಆರೋಗ್ಯ ದೃಷ್ಟಿಕೋನದಿಂದ ಇದು ಒತ್ತಡದಿಂದ ಕೂಡಿದ್ದರೂ ಬಹುದೊಡ್ಡ ಸಮಸ್ಯೆಗಳಿಲ್ಲ ಎಂದು ತಿಳಿದುಬರಲಿದೆ.

ಮನೋಬಲ ಸಕಾರಾತ್ಮಕವಾಗಿ ಉಳಿಯುತ್ತದೆ. ಮಾನಸಿಕ ಆತಂಕ ಹೆಚ್ಚಾಗಬಹುದು. ಹೃದಯ ಸಂಬಂಧಿ ಸಮಸ್ಯೆಗಳು, ನಿಮ್ಮ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
2026 ರಲ್ಲಿ ಮಿಥುನ ರಾಶಿಗೆ ಹೇಗಿರಲಿದೆ?
ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಇರುತ್ತದೆ. ವಿದೇಶಿ ಹಣವನ್ನು ಪಡೆಯುವ ಸಾಧ್ಯತೆ ಇರುತ್ತದೆ. ದೊಡ್ಡ ವ್ಯವಹಾರಗಳಲ್ಲಿ ತೊಡಗಿರುವವರು ಗಮನಾರ್ಹ ಆರ್ಥಿಕ ಯಶಸ್ಸನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ನೀವು ತೆಗೆದುಕೊಳ್ಳುವ ಹಲವು ನಿರ್ಧಾರಗಳು ನಿಮಗೆ ಧನಾತ್ಮಕವಾಗಿರಲಿದೆ. ಯಾರಿಂದಾದರು ನಿಮಿಗೆ ಬರಬೇಕಿದ್ದ ಹಣ ನಿಮಗೆ ತೃಪ್ತಿ ತರುವ ಫಲಿತಾಂಶ ತರಲಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಕೂಡ ಈಡರಲಿದೆ. ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಯ ಸುಧಾರಣೆ ನಿಮಗೆ ನೆಮ್ಮದಿಯ ವರ್ಷವಾಗಿ ರೂಪುಗೊಳ್ಳಲಿದೆ. ಅಗತ್ಯ ಸಮಯಕ್ಕೆ ನಿಮಗೆ ಬೇಕಾದ ಹಣ ಒಟ್ಟಾಗಲಿದೆ.
ಸಾಮಾಜಿಕ ಸ್ಥಾನಮಾನದಲ್ಲಿ ಪ್ರಗತಿ ಕಂಡುಬರುತ್ತದೆ. ನಿಮ್ಮ ಬೌದ್ಧಿಕ ಸಾಮರ್ಥ್ಯಗಳು ಮತ್ತು ದೈಹಿಕ ಬಲದ ಆಧಾರದ ಮೇಲೆ ಸಮಾಜದಲ್ಲಿ ತಮ್ಮ ಖ್ಯಾತಿಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ. ಯಾವುದೇ ಕಾರ್ಯಕ್ಕಾಗಿ ಹೆಚ್ಚು ಶ್ರಮಿಸುವ ನಿಮ್ಮ ಸಾಮರ್ಥ್ಯವು ಅಭಿವೃದ್ಧಿಗೊಳ್ಳುತ್ತದೆ.
ಕಲೆಗಳಲ್ಲಿ ಆಸಕ್ತಿ ಹೊಂದಿರುವ ಮಂದಿ ಹೊಸ ಅವಕಾಶಗಳನ್ನು ಕಂಡುಕೊಳ್ಳುವಿರಿ. ಪಾಲುದಾರಿಕೆಗಳು ಪ್ರಯೋಜನಕಾರಿಯಾಗಬಹುದು ಆದರೆ ಅವುಗಳನ್ನು ಚಿಂತನಶೀಲವಾಗಿ ಪ್ರವೇಶಿಸಿ. ಹೊಸ ವ್ಯವಹಾರಗಳ ಮಾಡುವಾಗ ನಿಮಗೆ ಅಡ್ಡಿಗಳು ಎದುರಾಗಬಹುದು. ಆಸ್ತಿ, ಮನೆ ವಿಚಾರ ಸಂಬಂಧಿಸಿದಂತೆ ಈ ವರ್ಷ ಶುಭ ಕೆಲಸಗಳು ನಡೆಯಲಿದೆ. ಅವಿವಾಹಿತರು ಈ ವರ್ಷ ವಿವಾಹ ಯೋಗ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಈ ವರ್ಷ ಬಹಳ ಅನುಕೂಲವಿದೆ. ನಿಮ್ಮ ಅಧ್ಯಯನಗಳು ಹಾಗೆ ಉನ್ನತ ಶಿಕ್ಷಣ ಸಂಬಂಧಿಸಿದ ವಿಚಾರದಲ್ಲಿ ಉತ್ತಮ ಫಲಿತಾಂಶಗಳ ಪಡೆಯಬಹುದು.
ಮನೆ, ವಾಹನಗಳು ಮತ್ತು ಇತರ ಸೌಕರ್ಯ ಸಂಪನ್ಮೂಲಗಳ ಮೇಲಿನ ವೆಚ್ಚಗಳು ಹೆಚ್ಚಾಗುತ್ತವೆ. ನಿಮ್ಮ ಸಾಲದ ಪ್ರಮಾಣವೂ ಏರಿಕೆಯಾಗಬಹುದು. ಆದ್ರೆ ನಿಮ್ಮ ಹಣಕಾಸಿನ ವ್ಯವಹಾರ ಉತ್ತಮ ಸ್ಥಿತಿಯಲ್ಲಿರುವ ಕಾರಣ ಇದು ನಿಮಗೆ ಸಮಸ್ಯೆಯಾಗಿ ಕಾಡುವುದಿಲ್ಲ. ಆಸ್ತಿ ವಿವಾದದಿಂದಾಗಿ ಮೊಕದ್ದಮೆ ಹೂಡಬಹುದು. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಒತ್ತಡವಿರಬಹುದು. ಹಾಗೆ ನೀವು ಈ ವರ್ಷ ನಿದ್ರೆಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗಳ ಎದುರಿಸಬಹುದು. ಇಲ್ಲವೆ ನಿಮ್ಮ ಕಾಲೋಚಿತ ಅನಾರೋಗ್ಯಗಳು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಗ ತರಬಹುದು.
ಮಿಥುನ ರಾಶಿಯವರಿಗೆ 2026ರಲ್ಲಿ ಮಕ್ಕಳ ವಿಚಾರದಲ್ಲಿ ಶುಭವಿದೆ. ಮಕ್ಕಳ ಉದ್ಯೋಗ ಸಂಬಂಧಿತ ವಿಚಾರಗಳು ಶುಭವನ್ನು ತರಲಿದೆ. ಅವರ ಆರೋಗ್ಯದಲ್ಲಿನ ಸುಧಾರಣೆ ನಿಮಗೆ ನೆಮ್ಮದಿ ತರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











