Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಹೊಸ ವರ್ಷದಲ್ಲಿ ಗಜಲಕ್ಷ್ಮಿ ಯೋಗ: ಯಾವ ರಾಶಿಯವರಲ್ಲಿ ಹೆಚ್ಚಾಗಲಿದೆ ಸಂಪತ್ತು ಗೊತ್ತಾ?
2025ರಲ್ಲಿ ಹಲವು ಗ್ರಹಗತಿಗಳ ಬದಲಾವಣೆಯು ನಿಮ್ಮ ರಾಶಿಗಳ ಮೇಲೆ ಪ್ರಭಾವ ಬೀರುತ್ತಿವೆ. ಅದರಲ್ಲೂ ಮುಂದಿನ ವರ್ಷ ಗುರು ಹಾಗೂ ಶುಕ್ರ ಸಂಕ್ರಮಿಸುತ್ತಿದೆ. ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಮಿಲನವಾಗುತ್ತಿದೆ. ಇದೊಂದು ಅಪರೂಪದ ಹಾಗೂ ಮುಂದಿನ ವರ್ಷ ಆರಂಭದಲ್ಲಿ ಜರುಗಲಿರುವ ಪ್ರಕ್ರಿಯೆಯಾಗಿದೆ. ಎರಡೂ ಗ್ರಹಗಳು ವಿವಿಧ ದಿನಗಳಲ್ಲಿ ವಿವಿಧ ಸಮಯಗಳಲ್ಲಿ ಮಿಥುನ ರಾಶಿಯನ್ನು ಪ್ರವೇಶಿಸುತ್ತವೆ.
ಈ ವಿದ್ಯಮಾನ ಜರುಗುವುದರಿಂದಾಗಿ ನಾವು ಗಜಲಕ್ಷ್ಮಿ ರಾಜ ಯೋಗ ಬರುವುದು ನೋಡಬುಹುದು. ಗುರು ಮತ್ತು ಶುಕ್ರ ಸಂಯೋಗವಿರುವುದರಿಂದಾಗಿ ಹಲವು ರಾಶಿಗಹಳಿಗೆ ಅನುಕೂಲಕರ ದಿನಗಳು ಬರಲಿದೆ. ಹಾಗೆ ಹಲವರಿಗೆ ಇದು ಸಮಸ್ಯೆಗಳನ್ನೂ ಕೂಡ ತರಬಹುದು, ಆದ್ರೆ ಬಹುತೇಕ ಎಲ್ಲಾ ರಾಶಿಗಳಲ್ಲಿ ನಾವು ಧನಾತ್ಮಕ ವಾತಾವರಣ ನೋಡಬಹುದಾಗಿದೆ.

ಗಜಲಕ್ಷ್ಮಿ ಯೋಗವು ಹಲವರಿಗೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲಿದೆ. ನೀವು ಬಯಸಿರುವ ಜೀವನ ನಿಮ್ಮದಾಗುವ ವಾತಾವರಣ ನಿರ್ಮಾಣವಾಗಲಿದೆ. ಹಾಗೆ ಈ ಯೋಗವು ನಿಮಗೆ ಲಾಭದಾಯಕವಾಗಿ ಬದಲಾಗಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಈ ಗಜಲಕ್ಷ್ಮಿ ಯೋಗ ಲಾಭಕ್ಕೆ ಕಾರಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಜೂನ್ 2025 ರಿಂದ ಗಜಲಕ್ಷ್ಮಿ ಯೋಗವು ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯವರು ಮುಟ್ಟಿದೆಲ್ಲವು ಚಿನ್ನ ಎನ್ನಬಹುದು. ಏಕೆಂದರೆ ನಿಮ್ಮ ಆದಾಯವು ದ್ವಿಗುಣವಾಗಲಿದೆ. ನೀವು ಅಂದುಕೊಂಡಿದ್ದ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಮುಗಿಯುತ್ತದೆ. ಆರ್ಥಿಕ ಸಮಸ್ಯೆಗಳು ದೂರಾಗುತ್ತವೆ. ನೀವು ಉಳಿತಾಯ ಮಾಡಿ ಇಟ್ಟ ಹಣ ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸುತ್ತೀರಿ. ಆಸ್ತಿ, ಮನೆ ಖರೀದಿಯಂತಹ ಶುಭ ಕಾರ್ಯಗಳಲ್ಲೂ ನಿಮಗೆ ಲಾಭವಾಗಲಿದೆ. ವೈವಾಹಿಕ ಜೀವನದಲ್ಲೂ ನಿಮಗೆ ಯಶಸ್ಸು ಸಿಗಲಿದೆ. ನೀವು ಕೆಲಸದ ಸ್ಥಳದಲ್ಲೂ ಕೂಡ ಉತ್ತಮ ಹೆಸರು ಪಡೆಯುತ್ತೀರಿ. ಗೃಹಿಣಿಯರಿಗೂ ಕೂಡ ಬಯಕೆ, ಬೇಡಿಕೆಗಳು ಈಡೇರುವ ಕಾಲವಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಆರ್ಥಿಕ ಅನುಕೂಲವಾಗಲಿದೆ. ನಿಮ್ಮ ಸಾಲ ಮರುಪಾವತಿ ಹಾಗೂ ಹೂಡಿಕೆ ಮಾಡಿದ್ದ ವಲಯದಿಂದ ಲಾಭ ಪಡೆಯುತ್ತೀರಿ. ಸಣ್ಣಪುಟ್ಟ ವ್ಯವಹಾರ ಮಾಡುವವರಾಗಿದ್ದರೂ ಕೂಡ ಒಳ್ಳೆಯ ಲಾಭ ಮಾಡುವುದು ಖಚಿತ. ದಾಂಪತ್ಯದಲ್ಲಿ ಸಂತೋಷದ ದಿನಗಳ ಕಳೆಯುತ್ತೀರಿ. ಅವಿವಾಹಿತರು ಕೂಡ ಈ ಸಮಯದಲ್ಲಿ ಶುಭ ಸುದ್ದಿ ಕೇಳುವಿರಿ. ಮನೆಗೆ ನಿಮ್ಮ ಮೂಲಕ ಒಳಿತಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ಕೂಡ ಗಜಲಕ್ಷ್ಮಿ ಯೋಗದಲ್ಲಿ ಯಾರು ಕೂಡ ಗಳಿಸದಷ್ಟು ಲಾಭ ಮಾಡುತ್ತಾರೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ದಿನಗಳು ಉತ್ತಮವಾಗುತ್ತಾ ಸಾಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ಹೊಸ ದಾರಿಗಳು ತೆರೆದುಕೊಳ್ಳಲಿದೆ. ರಿಯಲ್ ಎಸ್ಟೇಟ್, ಬ್ರೋಕರ್, ಬಾಡಿಗೆದಾರರು ಲಾಭ ಮಾಡುವ ಕಾಲವಿದು. ವಾಹನ ಮಾಲೀಕರು ಕೂಡ ಲಾಭದಾಯಕ ಸ್ಥಿತಿಗೆ ಮರಳುತ್ತಾರೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ನಿಮ್ಮಲ್ಲಿ ಪರಿಪೂರ್ಣವಾದ ಲಾಭ ನೋಡಬಹುದು. ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ನಿಮಗೆ ಅತ್ಯಧಿಕ ಲಾಭವಾಗಲಿದೆ. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡಿ, ಇದರಿಂದ ಪ್ರತಿಫಲ ಬಹುಬೇಗ ನೀವು ಪಡೆಯಬಹುದು. ಆಸ್ತಿ ವಿವಾದಗಳು ಕಾನೂನು ಸಮರದಲ್ಲಿ ನಿಮಗೆ ಗೆಲುವಾಗುವ ಸಾಧ್ಯತೆ ಅಧಿಕವಾಗಿದೆ.
(ಹಕ್ಕುತ್ಯಾಗ: ಈ ಲೇಖನದಲ್ಲಿನ ಮಾಹಿತಿ ಮತ್ತು ಜ್ಯೋತಿಷ್ಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ನೀಡಲಾಗಿದೆ. ಈ ಮಾಹಿತಿಗಳನ್ನು ಲೇಖಕರಾಗಲಿ, ತಾಣವಾಗಲಿ ಖಚಿತಪಡಿಸುವುದಿಲ್ಲ. ಈ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಸಮಾಲೋಚಿಸಲು ಸಲಹೆ ನೀಡಲಾಗುತ್ತದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











