Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
Gajakesari Rajyog: ಗುರು-ಚಂದ್ರನಿಂದ ಗಜಕೇಸರಿ ಯೋಗ, ನೆಮ್ಮದಿ ಹುಡುಕಿ ಬರೋದು ಪಕ್ಕಾ!
Gajakesari Rajyog: ಅಕ್ಟೋಬರ್ ತಿಂಗಳಲ್ಲಿ ಹಲವು ರೀತಿಯ ಸೌರ ವಿದ್ಯಮಾನಗಳ ನೋಡಬಹುದು. ಅದರಂತೆ ಈ ತಿಂಗಳಲ್ಲಿ ಹಲವು ಗ್ರಹಗಳ ಚಲನೆಯಿಂದಾಗಿ ಹಲವು ರೀತಿಯ ವಿದ್ಯಮಾನ ಸಂಭವಿಸಲಿವೆ. ತುಲಾ ರಾಶಿಯಲ್ಲಿ ಬುಧ ಸಂಚಾರ, ಕನ್ಯಾ ರಾಶಿಯಲ್ಲಿ ಶುಕ್ರ ಸಂಚಾರ, ತುಲಾ ರಾಶಿಯಲ್ಲಿ ಸೂರ್ಯ ಸಂಚಾರ, ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರದಂತಹ ವಿದ್ಯಮಾನ ಈ ಅಕ್ಟೋಬರ್‌ನಲ್ಲಿ ಸಂಭವಿಸುತ್ತಿವೆ.
ಇಂತಹ ಹಲವು ವಿದ್ಯಮಾನಗಳ ಫಲಿತಾಂಶವು ಎಲ್ಲಾ ರಾಶಿಗಳಲ್ಲಿ ನೋಡಬಹುದು. ಆದ್ರೆ ನಾವಿಂದು ಗುರುವಿನ ಸಂಚಾರದಿಂದ ಅಕ್ಟೋಬರ್‌ನಲ್ಲಿ ಹಲವು ಲಾಭ ನೋಡಬಹುದು. ಗುರು ಪ್ರಸ್ತುತ ಮಿಥುನ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದ್ರೆ ಇದೇ ಸಮಯದಲ್ಲಿ ಚಂದ್ರನು ಮಿಥುನ ರಾಶಿಯ ಪ್ರವೇಶಿಸಲಿದ್ದಾನೆ.

ಅಕ್ಟೋಬರ್ 12ರಂದು ಚಂದ್ರನು ಮಿಥುನ ರಾಶಿಗೆ ಚಲಿಸಲಿದ್ದಾನೆ. ಇದು ಗುರುವಿನೊಂದಿಗೆ ಸಂಯೋಗವಾಗುವುದು ಹಲವು ರೀತಿಯ ಶುಭಕ್ಕೆ ಕಾರಣವಾಗುತ್ತಿದೆ. ಅದ್ರಲ್ಲೂ ಅಪರೂಪವಾಗಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಇದು ಚಂದ್ರ ಹಾಗೂ ಗುರುವಿನ ಸಂಯೋಗದಿಂದ ಉಂಟಾಗುವ ಅತ್ಯಂತ ಬಲಶಾಲಿ ಯೋಗವಾಗಿದೆ.
ಈ ಯೋಗದ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಉಂಟಾಗುತ್ತದೆ. ವಿಶೇಷವಾಗಿ ಕೆಲವು ರಾಶಿ ಜನರಲ್ಲಿ ಈ ಯೋಗದಿಂದ ಅನಿರೀಕ್ಷಿತ ಉತ್ತಮ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಾಗಾದ್ರೆ ಗಜಕೇಸರಿ ರಾಜಯೋಗವು ಯಾರಿಗೆಲ್ಲಾ ಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾ ರಾಶಿಯ 10 ನೇ ಮನೆಯಲ್ಲಿ ಗುರು ಮತ್ತು ಚಂದ್ರ ಸಂಯೋಗವು ಗಜಕೇಸರಿ ರಾಜ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶಗಳು ತರಲಿದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಬರಲಿವೆ. ನಿಮ್ಮ ಹೊಸ ಉದ್ಯೋಗಗಳಲ್ಲಿ ಲಾಭವಿದೆ. ಹಲವು ಸಮಯದ ಸಾಲದ ಪ್ರಮಾಣ ಕಡಿಮೆಯಾಗಲಿದೆ. ಆರ್ಥಿಕ ಹೊರೆ ಕಡಿಮೆಯಾಗುವುದರಿಂದಾಗಿ ನಿಮ್ಮಲ್ಲಿ ನೆಮ್ಮದಿಯ ದಿನಗಳು ಬರಲಿವೆ. ಆರೋಗ್ಯದಲ್ಲಿನ ಚೇತರಿಕೆ ನಿಮ್ಮಲ್ಲಿ ಹೊಸ ಅನುಭವ ತರಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ಗುರು ಹಾಗೂ ಚಂದ್ರ ಸಂಯೋಗವಾಗುತ್ತಿದೆ. ಇದರಿಂದ ಉಂಟಾಗುತ್ತಿರುವ ಈ ಗಜಕೇಸರಿ ರಾಜಯೋಗವು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸದಲ್ಲಿ ಯಶಸ್ಸು ತರುವಂತೆ ಮಾಡಲಿದೆ. ವಿವಾಹಿತರ ಜೀವನ ಸಂತೋಷವಾಗಿರುತ್ತದೆ. ಅವಿವಾಹಿತರಿಗೆ ಒಳ್ಳೆಯ ಸಂಬಂಧಗಳು ಒಲಿದುಬರಲಿವೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶಗಳ ಪಡೆಯಲಿದ್ದೀರಿ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಹಾಗೆ ನಿಮ್ಮನ್ನು ಕಾಡುತ್ತಿದ್ದ ಅನಾರೋಗ್ಯವೊಂದು ನಿವಾರಣೆಯಾಗಲಿದೆ.
ವೃಷಭ ರಾಶಿ
ಗುರು ಮತ್ತು ಚಂದ್ರ ವೃಷಭ ರಾಶಿಯ 2 ನೇ ಮನೆಯಲ್ಲಿ ಚಲಿಸುತ್ತಾರೆ. ಇದರಿಂದಾಗಿ ನಿಮ್ಮ ಬುದ್ದಿವಂತಿಕೆಯ ಕಾರಣದಿಂದಾಗಿ ಹಲವು ಕೆಲಸಗಳು ಶುಭವಾಗುತ್ತವೆ. ನಿಮ್ಮ ಮಾತಿನ ಮೂಲಕ ಅನೇಕ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಹಣವು ಇದ್ದಕ್ಕಿದ್ದಂತೆ ಅನೇಕ ಮೂಲಗಳಿಂದ ಬರುತ್ತದೆ. ಮಾರ್ಕೆಟಿಂಗ್, ಮಾಧ್ಯಮ, ಬ್ಯಾಂಕಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ಜನರು ಉತ್ತಮ ಆರ್ಥಿಕ ಲಾಭ ಪಡೆಯುತ್ತಾರೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸುವ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಸರ್ಕಾರಿ ನೌಕರರ ಬಡ್ತಿ, ವರ್ಗಾವಣೆಯಲ್ಲಿ ಶುಭವಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications