Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು-ಚಂದ್ರನಿಂದ ಗಜಕೇಸರಿ ರಾಜಯೋಗ: ಮೂರು ರಾಶಿಯವರಲ್ಲಿ ಹಿಂದೆಂದು ನೋಡದ ಲಾಭ!!
ಜ್ಯೋತಿಷ್ಯದಲ್ಲಿ ಗುರುವನ್ನು ಬಹಳ ಶುಭ ಮತ್ತು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಗುರುವಿನ ಆಶೀರ್ವಾದ ಪಡೆದರೆ ಅತ್ಯುತ್ತಮ ಲಾಭಗಳ ನೋಡಬಹುದು. ವ್ಯಕ್ತಿಯ ಜೀವನದಲ್ಲಿ ಆಸ್ತಿ ಲಾಭ, ಹಣಕಾಸು ಪರಿಸ್ಥಿತಿಯಲ್ಲಿ ಉತ್ತಮ ದಿನಗಳ ನೋಡಲು ಗುರುವಿನ ಆಶೀರ್ವಾದ ಮುಖ್ಯವಾಗುತ್ತದೆ. ಹಾಗೆ ಗುರು ಯಾವ ರಾಶಿಯಲ್ಲಿ ಸಂಚರಿಸುತ್ತಾನೋ ಅವರಲ್ಲಿ ಹತ್ತಾರು ರೀತಿಯ ಲಾಭಗಳ ನೋಡಬಹುದು.
ಗುರು ಧನು ಮತ್ತು ಮೀನ ರಾಶಿಯ ಅಧಿಪತಿಯಾಗಿದ್ದಾನೆ. ಗುರುವಿನ ಚಲನೆಯು ಜಾತಕ ದೋಷಗಳ ನಿವಾರಣೆಗೂ ಸಹಕಾರಿಯಾಗಲಿದೆ. ಹಾಗೆ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿದ್ದರೆ ಅವರಲ್ಲಿ ವ್ಯವಹಾರ ಸಂಬಂಧ, ಆಸ್ತಿ, ಹಣಕಾಸು ಸಂಬಂಧವಾಗಿ ಅತ್ಯುತ್ತಮ ಲಾಭ ಮಾಡುವ ದಿನಗಳ ನೋಡಲಿದ್ದಾರೆ ಎಂದು ಪರಿಗಣಿಸಲಾಗಿದೆ.

ಗುರು ಸಾಮಾನ್ಯವಾಗಿ ಒಂದೇ ರಾಶಿಯಲ್ಲಿ ಒಂದು ವರ್ಷಗಳ ಕಾಲ ಇರಲಿದ್ದಾನೆ. ಪ್ರಸ್ತುತ ಗುರು ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. 12 ವರ್ಷಗಳ ನಂತರ ಆತ ಮಿಥುನ ರಾಶಿಗೆ ಪ್ರವೇಶಿಸಿದ್ದು, ಈ ಸಮಯದಲ್ಲಿ ಗುರು ಸಮಾನ್ಯಕ್ಕಿಂತ ವೇಗವಾಗಿ ಚಲಿಸುತ್ತಿದ್ದಾನೆ. ಬಳಿಕ ಒಂದೇ ರಾಶಿಯಲ್ಲಿ 6 ತಿಂಗಳ ಕಾಲ ಇರಲಿದ್ದಾನೆ. ಈ ರೀತಿಯ ವೇಗ ಸುಮಾರು 8 ವರ್ಷಗಳ ಕಾಲ ಮುಂದುವರೆಯಬಹುದಂತೆ. ಸದ್ಯ ಈಗ ಮಿಥುನ ರಾಶಿಯಲ್ಲಿ ಚಲಿಸುವ ಗುರುವು ಅಲ್ಲಿಯೇ ಚಂದ್ರನೊಂದಿಗೆ ಸಂಯೋಗವಾಗುತ್ತಿದ್ದಾನೆ.
ಜೂನ್ 24ರಂದು ಗುರು ಚಂದ್ರನೊಂದಿಗೆ ಸಂಯೋಗವಾಗುತ್ತಿರುವುದು ಗಜಕೇಸರಿ ರಾಜಯೋಗಕ್ಕೆ ಕಾರಣವಾಗಲಿದೆ. ಇದು ಹಲವು ರಾಶಿಗಳಿಗೆ ಶುಭಗಳಿಗೆಗೆ ಸಾಕ್ಷಿಯಾಗಲಿದೆ. ಅದರಲ್ಲೂ ಸಂಪತ್ತು, ಆರ್ಥಿಕ ಸ್ಥಿತಿ ಉತ್ತಮವಾಗುವುದು, ಸೇರಿ ವೈವಾಹಿಕ ಸಂಬಂಧಗಳಲ್ಲಿಯೂ ಲಾಭದಾಯಕ ಸ್ಥಿತಿಗಳಿಗೆ ಕಾರಣವಾಗುತ್ತಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯ ಮಂದಿಗೆ ಇದು ಶುಭಕರ ದಿನವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ 2 ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಇದು ಪಿತ್ರಾರ್ಜಿತ ವ್ಯವಹಾರ ಮಾಡುತ್ತಿರುವ ಮಂದಿಗೆ ಅತ್ಯಧಿಕ ಲಾಭದಾಯಕ ದಿನಗಳ ತರಲಿದೆ. ಸರ್ಕಾರಿ ನೌಕರರಿಗೆ ಉತ್ತಮ ದಿನ. ವೈವಾಹಿಕ ಜೀವನ ಸಂಬಂಧವಾಗಿ ಉತ್ತಮ ದಿನಗಳು ಕಾದಿವೆ, ಈ ಸಂಬಂಧ ಮತ್ತಷ್ಟು ಬಲವಾಗಲಿದೆ. ಸಹೋದರರೊಂದಿಗೆ ಯಾವುದಾದರು ಮನಸ್ತಾಪಗಳಿದ್ದರೆ ಪರಿಹಾರವಾಗಲಿದೆ. ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ನೀವು ಅಂದುಕೊಂಡಂತೆ ಹಣಕಾಸು ವಿಚಾರವಾಗಿ ತೆಗೆದುಕೊಳ್ಳುವ ನಿರ್ಧಾರವು ಬಹಳ ಲಾಭದಾಯಕವಾಗಲಿದೆ. ವಾಹನ ಲಾಭ ಸೇರಿ ಐಷಾರಮಿ ವಸ್ತು ಖರೀದಿಯ ಲಾಭವಿದೆ.
ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ನಿಮ್ಮಲ್ಲಿ ಜವಾಬ್ದಾರಿಗಳು ಹೆಚ್ಚಾಗುವ ಸಂಭವವಿದೆ. ವಿದ್ಯಾರ್ಥಿಗಳು ದೊಡ್ಡ ಮಟ್ಟದ ಲಾಭ ನೋಡುತ್ತಾರೆ. ಕಠಿಣ ಕೆಲಸಗಳಲ್ಲಿ ದೊಡ್ಡ ಯಶಸ್ಸು ಕೂಡ ಸಿಗಲಿದೆ. ವ್ಯಾಪಾರಿಗಳಿಗೆ ಹಠಾತ್ ಲಾಭ ನೋಡಬಹುದು. ನೀವು ದೀರ್ಘಕಾಲದ ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದರೆ ಈ ಸಮಯದಲ್ಲಿ ಪರಿಹಾರ ಪಡೆಯಬಹುದು. ವೈವಾಹಿಕ ಜೀವನದಲ್ಲಿ ಸಂತಸದ ಕ್ಷಣಗಳ ನೋಡುವಿರಿ.
ತುಲಾ ರಾಶಿ
ಕಜಕೇಸರಿ ರಾಜಯೋಗವು ತುಲಾ ರಾಶಿಯ 9ನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಇದರಿಂದಾಗಿ ದಾಂಪತ್ಯ ಸಮಸ್ಯೆ ಪರಿಹಾರವಾಗಲಿದೆ. ಬಾಕಿ ಇರುವ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಶ್ರೇಷ್ಠರಾಗುತ್ತಾರೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಪ್ರಶಂಸಿಸಲಾಗುತ್ತದೆ. ವ್ಯಾಪಾರಿಗಳಲ್ಲಿ ಇದ್ದ ಅಡೆತಡೆಯೊಂದು ನಿವಾರಣೆಯಾಗಲಿದೆ. ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಿದ್ದ ವಿಚಾರವಾಗಿ ಪರಿಹಾರ ಪಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications