Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2026ರಲ್ಲಿ ಗಜಕೇಸರಿ ರಾಜಯೋಗ; ಇಡೀ ವರ್ಷ ಈ ರಾಶಿಯವರಿಗೆ ಶುಭಗಾಲ; ಅದೃಷ್ಟದ ಸಮಯ!
2025ನೇ ವರ್ಷ ಮುಗಿಯುತ್ತಾ ಬಂದಿದೆ. ಹಾಗೆ 2026ರ ಆರಂಭದಿಂದಲೂ ಹಲವು ಗ್ರಹಗಳ ಚಲನೆಯು ಬಹಳ ಅನುಕೂಲಕರ ಯೋಗಗಳು ತರುತ್ತಿವೆ. 2026ರ ಆರಂಭದಿಂದಲೇ ಹಲವು ಯೋಗಗಳು ರೂಪುಗೊಳ್ಳುತ್ತಿದೆ. ಅವುಗಳಲ್ಲಿ ನಾವಿಂದು ಜಗಕೇಸರಿ ರಾಜಯೋಗ ಕುರಿತಾಗಿ ತಿಳಿದುಕೊಳ್ಳೋಣ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು 2026ರ ಆರಂಭದಲ್ಲಿ ತನ್ನ ರಾಶಿ ಬದಲಾಯಿಸುತ್ತಿದ್ದಾನೆ.
ಜನವರಿ 2ರಂದು ಚಂದ್ರನು ಮಿಥುನ ರಾಶಿ ಪ್ರವೇಶಿಸಿರುವಾಗ ಗುರು ಗ್ರಹದೊಂದಿಗಿನ ಸಂಯೋಗದಿಂದ ಈ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಹೊಸ ವರ್ಷದಲ್ಲಿ ರೂಪುಗೊಳ್ಳುವ ಈ ಯೋಗವು ಬಹುತೇಕರ ಜೀವನದಲ್ಲಿ ಬದಲಾವಣೆಗಳ ತರಲಿದೆ. ಗುರು ಮಿಥುನ ರಾಶಿಯಲ್ಲಿ ಚಲಿಸುವುದು ಎಲ್ಲರಿಗೂ ಶುಭದಾಯಕ ಆದ್ರೆ ಚಂದ್ರನಿಂದಾಗಿ ಈ ಯೋಗ ಉಂಟಾಗುವುದು ಎಲ್ಲರಿಗೂ ಅನುಕೂಲ ತರಬಹುದು.

ಸದ್ಯ ಹೊಸ ವರ್ಷದ ಸಮಯದಲ್ಲಿ ಉಂಟಾಗುತ್ತಿರುವ ಈ ಗಜಕೇಸರಿ ಯೋಗವು 2026ರಲ್ಲಿ ಯಾರಿಗೆಲ್ಲಾ ಶುಭ ತರಲಿದೆ. ಯಾರಿಗೆ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ 2026ರಲ್ಲಿ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಪಡೆಯಲಿವೆ. ಗಜಕೇಸರಿ ರಾಜಯೋಗವು ವೃಷಭ ರಾಶಿ ಜನರಿಗೆ ಭಾರಿ ಪ್ರಯೋಜನಗಳನ್ನು ತರುತ್ತದೆ. ಈ ವರ್ಷ ಹೊಸ ಮನೆ, ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶಗಳು ಇರುತ್ತವೆ, ಇದು ಮನೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಗಜಕೇಸರಿ ರಾಜಯೋಗವು ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ದೊಡ್ಡ ಯಶಸ್ಸುಗಳ ತರಲಿದೆ. ಈ ವರ್ಷ ವ್ಯಾಪಾರ, ವ್ಯವಹಾರದಲ್ಲಿ ಲಾಭವಿದೆ. ನೀವು ಅಂದುಕೊಂಡ ಕೆಲಸದಲ್ಲಿ ಶುಭವಾಗುವುದರಿಂದ ವರ್ಷ ಪೂರ್ತಿ ನಿಮಗೆ ಶುಭ ಸುದ್ದಿಗಳು ಕೇಳಿಬರಲಿವೆ. ಅವಿವಾಹಿತರಿಗೆ ಈ ಸಮಯದಲ್ಲಿ ಶುಭವಾಗುತ್ತಿದೆ. ನಿಮ್ಮ ಉದ್ಯೋಗ ಸಂಬಂಧಿತ ಅಡ್ಡಿಗಳು ನಿವಾರಣೆಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.
ಮಿಥುನ
ಮಿಥುನ ರಾಶಿಯಲ್ಲಿ ಗುರು ಹಾಗೂ ಚಂದ್ರನ ಸಂಯೋಗವು ಈ ಗಜಕೇಸರಿ ಯೋಗಕ್ಕೆ ಕಾರಣವಾಗುತ್ತಿದೆ. ಈ ಸಮಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳ ಮಾಡಿ ಮುಗಿಸುವ ಕಾಲ. ಉದ್ಯೋಗದಲ್ಲಿರುವವರು ಬಡ್ತಿ ಮತ್ತು ಸಂಬಳ ಹೆಚ್ಚಳವನ್ನು ನಿರೀಕ್ಷಿಸಬಹುದು. ಉದ್ಯಮಿಗಳು ಕಠಿಣ ಪರಿಶ್ರಮ ಮತ್ತು ಪ್ರಯತ್ನದಿಂದ ತಮ್ಮ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು. ಇದಲ್ಲದೆ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆಪ್ತರಿಂದ ಪಡೆಯಬೇಕಿದ್ದ ಹಣ ಪಡೆಯುವಿರಿ. ದಾಂಪತ್ಯ ವಿಚಾರದಲ್ಲಿ ಶುಭಗಳಿಗೆಗಳಿವೆ. ವಾಹನ ಖರೀದಿಯ ಬಯಕೆಯನ್ನು ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯ ಆಗಿರಲಿದೆ.
ತುಲಾ ರಾಶಿ
ಗಜಕೇಸರಿ ಯೋಗದಿಂದಾಗಿ 2026 ರ ಆರಂಭದಲ್ಲಿ ಅದೃಷ್ಟವನ್ನು ಪಡೆಯುತ್ತಾರೆ. ಈ ಪ್ರಬಲ ಯೋಗದಿಂದಾಗಿ ಅವರಿಗೆ ಕಾನೂನು ಹೋರಾಟಗಳು ಬಹಳ ಅನುಕೂಲಕರವಾಗಿ ಕೊನೆಗೊಳ್ಳುತ್ತವೆ. ಈ ಯೋಗವು ಉದ್ಯಮಿಗಳಿಗೆ ಉತ್ತಮ ಯಶಸ್ಸನ್ನು ನೀಡುತ್ತದೆ, ಇದರಿಂದಾಗಿ ಅವರು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿರುವವರಿಗೆ ಈ ಅವಧಿಯು ಉತ್ತಮ ಸಮಯವಾಗಿರುತ್ತದೆ, ಇದು ವೃತ್ತಿಜೀವನದ ಪ್ರಗತಿಗೆ ಈ ಸಮಯ ಸೂಕ್ತ ಸಮಯ ಆಗಿರಲಿದೆ. ಅನಿರೀಕ್ಷಿತ ಧನಲಾಭ ಮಾಡುವಿರಿ. ವ್ಯಾಪಾರಿಗಳಿಗೆ ದೊಡ್ಡ ಲಾಭವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭ ಸುದ್ದಿಗಳು ಕೇಳಿಬರಲಿವೆ. ಮಕ್ಕಳಿಂದ ನಿಮಗೆ ಸಂತೋಷ ಅನುಭವಿಸುವ ಸಮಯ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











