Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು- ಚಂದ್ರರಿಂದ ಗಜಕೇಸರಿ ರಾಜಯೋಗ: ಯಾವ ರಾಶಿಯವರಿಗೆ ಶುಭ ಕಾಲ ಆರಂಭ..!
ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ದೇವತೆಗಳ ಗ್ರಹ ಎಂದು ಪರಿಗಣಿಸುತ್ತಾರೆ. ಗುರು ಬಲವೊಂದಿದ್ದರೆ ಜೀವನದಲ್ಲಿ ಎಂತಹ ಕಷ್ಟಗಳನ್ನಾದರು ಎದುರಿಸಬಹುದು, ಹಾಗೆ ಎಲ್ಲಾ ಯಶಸ್ಸಿನ ಹಿಂದೆ ಗುರುಬಲದ ಚಹರೆ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಗುರು ಸಮೃದ್ಧಿ, ಯಶಸ್ಸು, ಗೌರವಕ್ಕೆ ಹೆಸರಾಗಿರುವ ಗ್ರಹವಾಗಿದೆ. ಗುರು ಒಂದೇ ರಾಶಿಯಲ್ಲಿ 12 ತಿಂಗಳ ಕಾಲ ಸಂಚರಿಸಲಿದೆ.
ಒಂದೇ ರಾಶಿಯಲ್ಲಿ ದೀರ್ಘಕಾಲ ಸಂಚರಿಸುವ ಕಾರಣ ಗುರುವಿನಿಂದ ಲಾಭದಾಯಕ ದಿನಗಳನ್ನು ಹೆಚ್ಚಾಗಿ ನೋಡುತ್ತಾರೆ. ಪ್ರಸ್ತುತ ಈಗ ಗುರು ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಅಚ್ಚರಿ ಅಂದರೆ ಈಗ ಚಂದ್ರನು ಈ ವೃಷಭ ರಾಶಿಗೆ ಚಲಿಸುತ್ತಿದ್ದು, ಇಲ್ಲಿ ಗುರು ಹಾಗೂ ಚಂದ್ರನ ಅಪರೂಪದ ಸಂಯೋಗವಾಗುತ್ತಿದೆ.

ಚಂದ್ರನು ವೇಗವಾಗಿ ಚಲಿಸುವ ಗ್ರಹ ಒಂದೇ ವರ್ಷದಲ್ಲಿ ಎಲ್ಲಾ ರಾಶಿಯಲ್ಲೂ ಚಂದ್ರ ಕ್ರಮಿಸುತ್ತಾನೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಆತನ ಪ್ರಭಾವ ಇದ್ದೇ ಇರುತ್ತೆ. ಈಗ ವೃಷಭ ರಾಶಿಯಲ್ಲಿ ಎರಡು ಗ್ರಹಗಳ ನಡುವಿನ ಸಂಯೋಗವು ಹಲವು ರಾಶಿಗಳಿಗೆ ಶುಭಕರ ಯೋಗಕ್ಕೆ ಕಾರಣವಾಗುತ್ತಿದೆ. ವೃಷಭ ರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗವು ಗಜಕೇಸರಿ ರಾಜಯೋಗವನ್ನು ಸೃಷ್ಟಿಸುತ್ತದೆ.
ಈ ಗಜಕೇಸರಿ ಯೋಗವು ಹಲವು ರಾಶಿಯವರಿಗೆ ಲಾಭದಾಯಕವಾಗುತ್ತಿದೆ. ಇದು ಹಲವರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹಾಗಾದ್ರೆ ಈ ಗಜಕೇಸರಿ ಯೋಗವು ಯಾರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ. ಇದೇ ಮಾರ್ಚ್ 5ರಂದು ಚಂದ್ರ ವೃಷಭ ರಾಶಿಗೆ ಚಲಿಸಲಿದ್ದಾನೆ.
ವೃಷಭ ರಾಶಿ
ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅಪರೂಪದ ಯೋಗವು ನಿಮಗೆ ಅದ್ಭುತ ಅವಕಾಶಗಳು, ಲಾಭಗಳಿಗೆ ಕಾರಣವಾಗುತ್ತಿದೆ. ಉದ್ಯೋಗಿಗಳಲ್ಲಿ ಕಾರ್ಯಕ್ಷಮತೆ, ಆರ್ಥಿಕ ಲಾಭದ ಲಕ್ಷಣ ಇರಲಿದೆ. ಹಾಗೆ ನಿಮ್ಮ ಹಳೆಯ ಬಾಕಿಗಳು ಪೂರ್ಣವಾಗುತ್ತಿವೆ. ಹಾಗೆ ನಿಮ್ಮ ವೈಯಕ್ತಿಕ ವಿಚಾರಕ್ಕೆ ಹೊಸ ವಸ್ತುಗಳ ಖರೀದಿಸುತ್ತೀರಿ. ಉದ್ಯಮಿಗಳಿಗೆ ಇದು ಲಾಭದಾಯಕ ದಿನಗಳ ತರಲಿದೆ. ಹೊಸ ಆದಾಯ ಬರುವಂತಹ ಕೆಲಸಗಳ ನೀವು ಮಾಡಲು ಮುಂದಾಗುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯ 10ನೇ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಇದರ ಪರಿಣಾಮವಾಗಿ ಸಿಂಹ ರಾಶಿ ಜನರಲ್ಲಿ ವೃತ್ತಿಪರವಾಗಿ ಉತ್ತಮ ಫಲಿತಾಂಶಗಳ ಪಡೆಯುತ್ತಾರೆ. ನಿಮ್ಮ ಕಠಿಣದ ಹಾದಿಗಳು ಇನ್ಮುಂದೆ ಸುಲಭವಾಗಿ ಕಾಣಿಸಬಹುದು. ಹೊಸ ಉದ್ಯೋಗಗಳು, ಹೊಸ ಆದಾಯದಂತಹ ಅವಕಾಶ ಹುಡುಕಿ ಬರಲಿವೆ. ಉದ್ಯಮಿಗಳ ಲಾಭ ಹೆಚ್ಚಾಗಲಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ಲಾಭ ಹೆಚ್ಚಿಸಿಕೊಳ್ಳುತ್ತಾರೆ. ಅವಿವಾಹಿತರಿಗೆ ಶುಭದಿನಗಳು ಬರಲಿವೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ನಿಮ್ಮ ಪರವಾದ ಒಲವು ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ 9ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ಉಂಟಾಗುತ್ತಿದೆ. ಈ ರಾಜಯೋಗವು ಅದೃಷ್ಟ ಮನೆಯಲ್ಲಿ ರೂಪುಗೊಳ್ಳುವುದರಿಂದ, ನಿಮ್ಮ ಪ್ರತಿಯೊಂದು ಕೆಲಸವು ಯಾವುದೇ ತಡೆತಡೆಯಿಲ್ಲದೆ ನಡೆಯುತ್ತದೆ. ಬಹಳ ದಿನಗಳಿಂದ ತೊಡಕುಗಳಿಂದಾಗಿ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣವಾಗಲಿವೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಪ್ರವಾಸದಂತಹ ಸುಖ ದೊರೆಯಬಹುದು. ಪುಣ್ಯ ಕ್ಷೇತ್ರ ದರ್ಶನದ ಭಾಗ್ಯವೂ ಇದೆ. ಆರೋಗ್ಯದಲ್ಲಿ ಎಂದು ಕಾಣದ ಸುಧಾರಣೆ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications