Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಪಿತೃಪಕ್ಷದ ಸಮಯದಲ್ಲಿ ಗಜಕೇಸರಿ ರಾಜಯೋಗ: ಬಯಸಿದ ಬದುಕು ನಿಮ್ಮದಾಗುತ್ತೆ..!
ಗ್ರಹಗಳ ಸಂಚಾರದಿಂದ ಉಂಟಾಗುವ ಹಲವು ರೀತಿಯ ಬದಲಾವಣೆಗಳು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಅದ್ರಲ್ಲೂ ಗುರು ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಹಲವರಲ್ಲಿ ದೊಡ್ಡ ಪರಿಣಾಮಗಳ ಉಂಟು ಮಾಡಲಿದೆ. ಗುರುವನ್ನು ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಗುರು ಒಂದೇ ರಾಶಿಯಲ್ಲಿ 1 ವರ್ಷಗಳ ಕಾಲ ಚಲಿಸಲಿದ್ದಾನೆ. ಈ ಸಮಯದಲ್ಲಿ ಆತ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದ್ದಾನೆ.
ಅದ್ರಲ್ಲೂ ಈಗ ಗುರು ಚಲನೆಯ ನಡುವೆ ಮತ್ತೆ ಕೆಲ ಗ್ರಹಗಳೊಂದಿಗೆ ಸಂಯೋಗ ಹೊಂದಲಿದ್ದಾನೆ. ಹೌದು ಸೆಪ್ಟೆಂಬರ್ 14ರಂದು ಚಂದ್ರನು ಮಿಥುನ ರಾಶಿಗೆ ಚಲಿಸಲಿದ್ದಾನೆ. ಆದ್ರೆ ಮಿಥುನ ರಾಶಿಯಲ್ಲಿ ಈಗಾಗಲೇ ಗುರು ಸಂಚಾರವಿದೆ. ಮಿಥುನ ರಾಶಿಯಲ್ಲಿ ಗುರು ಮತ್ತು ಚಂದ್ರನ ಯುತಿಯಿಂದಾಗಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ.

ಗಜಕೇಸರಿ ರಾಜಯೋಗ ಜೀವನದಲ್ಲಿ ಉತ್ತುಂಗವನ್ನು ಸೂಚಿಸಲಿದೆ. ಅದ್ರಲ್ಲೂ ಹಲವರಲ್ಲಿ ಈ ಯೋಗವು ಎಲ್ಲಾ ವಿಚಾರದಲ್ಲೂ ಶುಭ ತರಲಿದೆ. ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 07 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 21 ರಂದು ಕೊನೆಗೊಳ್ಳುತ್ತದೆ. ಈ ಪಿತೃ ಪಕ್ಷದ ಅವಧಿಯಲ್ಲಿ ಗಜಕೇಸರಿ ರಾಜ ಯೋಗವು ರೂಪುಗೊಳ್ಳುವುದು ವಿಶೇಷವಾಗಿದೆ. ಈ ಯೋಗವು 12 ವರ್ಷಗಳ ಬಳಿಕ ಸಂಭವಿಸಲಿದೆ.
ಈ ರಾಜಯೋಗದ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಇದು ಹಲವರಿಗೆ ಹಲವು ರೀತಿಯ ಲಾಭಕ್ಕೆ ಕಾರಣವಾಗಲಿದೆ. ಹಾಗಾದ್ರೆ ಯಾವ ರಾಶಿಯವರಿಗೆ ಇದು ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ತುಲಾ ರಾಶಿ
ತುಲಾ ರಾಶಿಯ 9 ನೇ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ. ಇದು ಈ ನಿಮ್ಮ ಅದೃಷ್ಟವನ್ನು ದುಪ್ಪಟ್ಟಾಗಿಸಬಹುದು. ನಿಮ್ಮ ಪ್ರಯಾಣಗಳಲ್ಲಿ ಸುಖ, ಹಾಗೆ ಲಾಭದಾಯಕವಾಗುವ ನಿರೀಕ್ಷೆ ದುಪ್ಪಟ್ಟಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ತಯಾರಿ ನಡೆಸುತ್ತಿದ್ದವರಿಗೆ ಶುಭಕಾಲ. ಕೆಲಸದಲ್ಲಿ ಅತ್ಯುತ್ತಮ ದಿನಗಳಿವೆ. ನೀವು ಶುಭ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವಿರಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಪ್ರೇಮ ಜೀವನ ಸಿಹಿಯಾಗಿರುತ್ತದೆ. ಹಿಂದಿನ ತಪ್ಪುಗಳ ಸರಿಪಡಿಸಿಕೊಳ್ಳುವ ಅವಕಾಶಗಳು ಕೂಡ ಸಿಗಲಿವೆ.
ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ. ಇದು ಮಿಥುನ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ಈ ಅವಧಿ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಆರ್ಥಿಕ ವಿಚಾರದಲ್ಲಿ ನಿಮಗೆ ಸುಖಕರ ದಿನಗಳಿವೆ. ನೀವು ಬಯಸಿದ ವಸ್ತುವೊಂದನ್ನು ಸುಲಭವಾಗಿ ಖರೀದಿ ಮಾಡಬಹುದು. ವ್ಯಾಪಾರಿಗಳು ಬಹಳ ಸಮಯದಿಂದ ಲಾಭ ಬಯಸಿದ್ದರೆ ಈ ಸಮಯದಲ್ಲಿ ನಿಮ್ಮ ಬಯಕೆ ಈಡೇರಲಿದೆ. ಹಾಗೆ ವೈವಾಹಿಕ ಜೀವನವು ಸುಖಕರವಾಗಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯ 10 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದಾಗಿ, ಈ ರಾಶಿಚಕ್ರ ಚಿಹ್ನೆಯ ಜನರು ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ದಂಪತಿ ಬಯಸಿದ ಜೀವನ ನಡೆಸಲಿದ್ದಾರೆ. ಉದ್ಯಮಿಗಳು ಹೊಸ ಒಪ್ಪಂದಗಳು ಹಣಕಾಸಿನ ಲಾಭಕ್ಕೆ ಕಾರಣವಾಗಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಶುಭಕರ ವಾತಾವರಣ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











