Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಗ: ಏಪ್ರಿಲ್ 14ರಿಂದ ಈ ರಾಶಿಗಳ ಅದೃಷ್ಟವೇ ಬದಲು..!!
ವೈದಿಕ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನ ಬದಲಾಯಿಸುವುದು ಅಥಗಾ ರಾಶಿ ಬದಲಾವಣೆ ಮಾಡುವುದು ನೋಡಬಹುದು. ಇದು ಮಾನವನ ಜೀವನದ ಮೇಲೆ ಪರಿಣಾಮ ಬೀರುವುದು ಕೂಡ ಸಾಮಾನ್ಯ. ಹಾಗೆ ಗ್ರಹಗಳ ಸಮ್ಮಿಸಲನವು ಹಲವಾರು ರೀತಿಯ ಯೋಗಗಳ ಉದಯಕ್ಕೆ ಕಾರಣವಾಗಬಹುದು. ಅದರಲ್ಲು ಪರಿಣಾಮಕಾರಿಗಾದ ತ್ರಿಗ್ರಹ ಯೋಗ ಮತ್ತು ಚತುರ್ಗ್ರಹ ಯೋಗದಂಯತ ಅಪರೂಪದ ಯೋಗಳಳ ಸೃಷ್ಟಿಗೂ ಈ ಗ್ರಹಗಳ ಸಂಯೋಗ ಕಾರಣವಾಗುತ್ತದೆ.
ಅದರಲ್ಲೂ ಈ ಏಪ್ರಿಲ್ ತಿಂಗಳಲ್ಲಿ ಹಲವು ಗ್ರಹಗಳ ಸಂಚಾರವು ಉಂಟಾಗುತ್ತಿರುವುದು ಒಂದಿಷ್ಟು ಅಪರೂಪದ ಯೋಗಗಳ ರಚನೆಗೆ ಕಾರಣವಾಗುತ್ತಿದೆ. ಏಪ್ರಿಲ್ 14ರಂದು ಸೂರ್ಯ ಮೀನ ರಾಶಿಗೆ ಚಲಿಸಿರುವ ಸಮಯದಲ್ಲಿ ಅಲ್ಲಿರುವ ಉಳಿದ ಗ್ರಹಗಳೊಂದಿಗೆ ಸಂಯೋಗವಾಗುತ್ತಾನೆ, ಇದು ಚತುರ್ಗ್ರಹ ಯೋಗಕ್ಕೆ ಕಾರಣವಾಗುತ್ತಿದೆ.

ಮೀನ ರಾಶಿಯಲ್ಲಿ ಸೂರ್ಯನು ಬುಧ, ಶುಕ್ರ, ಶನಿ ಮತ್ತು ರಾಹುವಿನ ಜೊತೆಗೆ ಸಂಯೋಗವಾಗುತ್ತಿರುವುದು ಅಪರೂಪದ ಯೋಗಕ್ಕೆ ಕಾರಣವಾಗುತ್ತಿದೆ. ಇದರಿಂದ ಹಲವು ರಾಶಿಗಳ ಮೇಲೆ ಪ್ರಭಾವ ಉಂಟಾಗುವುದು ನೋಡಬಹುದು ಅದರಲ್ಲೂ ನಾವಿಂದು ಈ ಚತುರ್ಗ್ರಹ ಯೋಗದಿಂದ ಯಾವೆಲ್ಲಾ ರಾಶಿಗಳಲ್ಲಿ ಯಾವ ರೀತಿಯ ಬದಲಾವಣೆಗಳ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾ ರಾಶಿಯ 7ನೇ ಮನೆಯಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತದೆ. ಇದು ವಿವಾಹಿತರ ಜೀವನವನ್ನು ತುಂಬಾ ಸಂತೋಷವಾಗಿಸಲಿದೆ. ನಿಮ್ಮ ಸಂಗಾತಿಯೂ ಸಹ ಪ್ರಗತಿಯನ್ನು ಕಾಣುತ್ತಾರೆ. ಪಾಲುದಾರಿಗೆ ವ್ಯಾಪಾರಸ್ಥರಿಗೆ ಅಧಿಕ ಲಾಭದ ನಿರೀಕ್ಷೆ ಇದೆ. ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆ ನೋಡಬಹುದು, ಅದು ಧನಾತ್ಮಕ ರೀತಿಯಲ್ಲಿರಲಿದೆ. ವ್ಯಕ್ತಿತ್ವದಲ್ಲಿ ಉತ್ತಮ ಪ್ರಗತಿ ನೋಡುವಿರಿ. ಅವಿವಾಹಿತರಲ್ಲಿ ಶುಭ ಗಳಿಗೆ ಆರಂಭವಾಗಲಿದೆ, ನೀವು ಕೈ ಹಿಡಿದ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನೀವು ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಹಲವು ಅವಕಾಶಗಳ ಪಡೆಯಬಹುದು. ಸರ್ಕಾರಿ ಉದ್ಯೋಗಿಗಳು ಬಡ್ತಿ ಪಡೆಯಬಹುದು.
ವೃಷಭ ರಾಶಿ
ವೃಷಭ ರಾಶಿಯ 11 ನೇ ಮನೆಯಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಲಾಭದ ಮನೆಯಲ್ಲಿ ರೂಪುಗೊಳ್ಳುವುದರಿಂದ ವೃಷಭ ರಾಶಿಯವರ ಆದಾಯ ಹೆಚ್ಚಳ ನೋಡಬಹುದು. ನೀವು ಅಂದುಕೊಂಡ ಕೆಲಸದಲ್ಲಿನ ಯಶಸ್ಸು ನಿಮಗೆ ಆದಾಯ ಹೆಚ್ಚಳಕ್ಕೆ ದಾರಿಯಾಗುತ್ತದೆ. ಹಾಗೆ ನೀವು ಅಂದುಕೊಂಡಂತೆ ಹೊಸ ಕೆಲಸಗಳ ಆರಂಭಿಸಲು ಇದು ಸೂಕ್ತ ಸಮಯ ಆಗಿರಲಿದೆ. ಹೊಸ ಮನೆ ಕನಸು ಕಾಣುತ್ತಿದ್ದರೆ ಈ ವೇಳೆ ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಬಾಕಿ ಇದ್ದ ಹಣ ನಿಮ್ಮ ಕೈ ಸೇರಬಹುದು. ಮನೆಯ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ನೋಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ 9ನೇ ಮನೆಯಲ್ಲಿ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಅದೃಷ್ಟದ ಮನೆಯಲ್ಲಿ ರೂಪುಗೊಳ್ಳುವುದರಿಂದ ನಿಮ್ಮ ಗುರಿ ಸಾಧನೆಗೆ ನೀವು ಯಾವುದೇ ಕೆಲಸ ಮಾಡಲು ಮುಂದಾದರು ಅದು ನಿಮ್ಮನ್ನು ಕೊನೆಯವರೆಗೂ ಕಾಪಾಡಬಹುದು. ಉದ್ಯೋಗ ಹುಡುಕಿ ನೀವು ಬೇರೆ ಊರುಗಳಿಗೆ ಪ್ರಯಾಣ ಮಾಡಬೇಕಾಗಬಹುದು, ಇದರಲ್ಲಿ ಯಶಸ್ಸು ಕೂಡ ನಿಮ್ಮ ಪರವಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಉತ್ತಮವಾಗಿರಲಿದೆ. ವಿವಾಹಿತರಲ್ಲಿ ಭವಿಷ್ಯದ ಜೀವನ ಕುರಿತು ಉತ್ತಮ ದಿನಗಳ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications