ವರ್ಷದ ಮೊದಲ ಬುಧ ಸಂಕ್ರಮಣ: ಮೊದಲ ವಾರದಲ್ಲಿ 4 ರಾಶಿಯವರ ಜೀವನದಲ್ಲಿ ತಿರುವು..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹಕ್ಕೆ ಅದರದ್ದೇ ಆದ ಮಹತ್ವವಿದೆ. ಒಂದು ರಾಶಿಯಲ್ಲಿ ಕಡಿಮೆ ಸಮಯ ಚಲಿಸುವ ಬುಧನು ಹಲವು ರೀತಿಯ ಲಾಭಕ್ಕೆ ಕಾರಣವಾಗಲಿದ್ದಾನೆ. ಬುಧನು ಚಂದ್ರನ ಹತ್ತಿರದಲ್ಲಿರುವಂತೆ ಕಡಿಮೆ ದಿನಗಳ ಕಾಲ ಒಂದು ರಾಶಿಯಲ್ಲಿ ಉಳಿಯಲಿದೆ. ಹೀಗಾಗಿ ಒಂದೇ ವರ್ಷದಲ್ಲಿ ಹಲವು ರಾಶಿಗಳಿಗೆ ಬುಧನ ಚಲನೆ ಇರಲಿದೆ. ಹೀಗಾಗಿ ಎಲ್ಲಾ 12 ರಾಶಿಗಳ ಮೇಲೂ ಬುಧ ಸಂಕ್ರಮಣ ಪ್ರಭಾವ ಬೀರುತ್ತಿರುತ್ತದೆ.

ಇನ್ನು ಕೆಲವೇ ದಿನಗಳಲ್ಲಿ 2025ನೇ ವರ್ಷ ಆರಂಭವಾಗುತ್ತಿದೆ. ಈ ವರ್ಷ ಕೂಡ ಬುಧ ಗ್ರಹ ಹಲವು ರಾಶಿಗಳಿಗೆ ಸಂಚರಿಸಲಿದೆ. ಹಾಗೆ ಈ ವರ್ಷ ಸಂಭವಿಸಲಿರುವ ಪ್ರಮುಖ ಗ್ರಹಗಳ ರಾಶಿಚಕ್ರ ಬದಲಾವಣೆಗಳು ಸಂಭವಿಸುವ ಕಾರಣ ಈ ವರ್ಷವನ್ನು ಅದ್ಭುತಗಳು ಸೃಷ್ಟಿಸುವ ವರ್ಷ ಎಂದು ಪರಿಗಣಿಸಲಾಗಿದೆ.

First Mercury Transit Of The Year A Turning Point For These Zodiac Sign

ಬುಧನು 2025ರ ಮೊದಲ ವಾರದಲ್ಲಿ ತನ್ನ ರಾಶಿ ಬದಲಿಸಲಿದೆ. ಧನು ರಾಶಿಯಲ್ಲಿ ಬುಧ ಸಂಕ್ರಮಣ ಉಂಟಾಗುತ್ತಿದೆ. ಇದು ವರ್ಷದ ಮೊದಲ ಬುಧ ಸಂಕ್ರಮಣ ಆಗಿದೆ.

ಬುಧನು ಧನು ರಾಶಿಗೆ ಚಲಿಸುವ ಪ್ರಭಾವವು ಎಲ್ಲಾ ರಾಶಿಚಕ್ರದ ಚಿಹ್ನೆಗಳಲ್ಲಿ ಕಂಡುಬಂದರೂ, ಬುಧದ ಈ ಸಂಕ್ರಮಣವು ಕೆಲವು ರಾಶಿಗೆ ಅತ್ಯುತ್ತಮ ಲಾಣಭ ತರಲಿದೆ. ಹಾಗಾದ್ರೆ ವರ್ಷದ ಮೊದಲ ಬುಧ ಸಂಕ್ರಮಣ ಯಾವ ರಾಶಿಯವರಲ್ಲಿ ಲಾಭದಾಯಕವಾಗಿ ಮಾರ್ಪಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಸಿಂಹ

ಬುಧವು ಸಿಂಹ ರಾಶಿಯ 5ನೇ ಮನೆಯಲ್ಲಿ ಚಲಿಸುವುದರಿಂದ ಈ ರಾಶಿ ಜನರಲ್ಲಿ 2025ರ ಮೊದಲ ವಾರದಲ್ಲಿ ಪ್ರಗತಿ ಕಾಣಲಿದ್ದೀರಿ. ನಿಮ್ಮ ಅದೃಷ್ಟ ನಿಮಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ. ಆರ್ಥಿಕ ಲಾಭಗಳು, ಕೌಟುಂಬಿಕ ನೆಮ್ಮದಿಯಂತಹ ಲಾಭದ ಜೊತೆಗೆ ಹೊಸ ವಾಹನ, ಮನೆ, ಆಸ್ತಿ ಖರೀದಿಗೆ ಬೇಕಾದ ತಯಾರಿಗೆ ನೀವು ಮುಂದಾಗಲಿದ್ದೀರಿ. ವೈವಾಹಿಕ ಜೀವನ ಸುಖಮಯವಾಗಲಿದೆ.

ತುಲಾ ರಾಶಿ

ಬುಧವು ತುಲಾ ರಾಶಿಯ 3ನೇ ಮನೆಗೆ ಚಲಿಸಲಿದೆ. ಇದರಿಂದ ಈ ರಾಶಿಯವರಿಗೆ ಸಂತೋಷ ಹೆಚ್ಚುತ್ತದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ಅವಧಿಯಲ್ಲಿ ಪ್ರಾರಂಭಿಸುವುದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಮತ್ತು ಲಾಭ ಇರುತ್ತದೆ. ಬಹುದಿನಗಳ ಅನಾರೋಗ್ಯವೊಂದು ನಿವಾರಣೆಯಾಗುವ ಸಂಭವವಿದೆ.

ಕುಂಭ ರಾಶಿ

ಬುಧನು ಕುಂಭ ರಾಶಿಯ 11ನೇ ಮನೆಗೆ ಚಲಿಸುತ್ತಾನೆ. ಹೀಗಾಗಿ ಈ ಸ್ಥಳೀಯರು ಹಳೆಯ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯುತ್ತಾರೆ. ಹಣದ ಹರಿವು ಹೆಚ್ಚಾಗುತ್ತದೆ. ಇದು ಆರ್ಥಿಕ ಸ್ಥಿತಿಯ ಪ್ರಗತಿಗೆ ಕಾರಣವಾಗುತ್ತದೆ. ನಿಮ್ಮಿಂದ ಹೊಸ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿಮ್ಮ ಪ್ರವಾಸಿ ಗುಣಗಳಿಂದ ಈ ವಾರದಲ್ಲಿ ಪ್ರವಾಸ ಕೈಗೊಳ್ಳಲಿದ್ದೀರಿ. ಅಂದುಕೊಂಡಿದ್ದ ಕೆಲಸಗಳಲ್ಲಿ ತಡವಾದರೂ ಉತ್ತಮ ಫಲಿತಾಂಶಗಳು ಸಿಗಲಿದೆ.

ಮೀನ ರಾಶಿ

ವರ್ಷದ ಮೊದಲ ಬುಧ ಸಂಕ್ರಮಣವು ಮೀನ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತಿದೆ. ಆದರೆ ವ್ಯಾಪಾರ ವ್ಯವಹಾರದಲ್ಲಿ ನಿಮಗೆ ಮಿಶ್ರ ಲಾಭದ ನಿರೀಕ್ಷೆ ಇದೆ. ನೀವು ಕಷ್ಟಕರವಾದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ ಮತ್ತು ಅವರ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನೀವು ಸಾಕಷ್ಟು ಹಣವನ್ನು ಗಳಿಸುವ ಅವಕಾಶವನ್ನು ಪಡೆಯುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

First Mercury Transit Of The Year: A Turning Point For These Zodiac Sign

Although the influence of Mercury moving into Sagittarius is felt in all zodiac signs, this transit of Mercury will bring great benefits to some signs. So, for which signs is the first Mercury transit of the year beneficial?
Story first published: Monday, December 23, 2024, 13:35 [IST]
X
Desktop Bottom Promotion