2024ರ ಆರ್ಥಿಕ ಭವಿಷ್ಯ: ಹೊಸ ವರ್ಷ ಆರ್ಥಿಕವಾಗಿ ನಿಮ್ಮ ರಾಶಿಗೆ ಹೇಗಿದೆ?

ಹೊಸ ವರ್ಷ ಬರ್ತಿದೆ... ಈ ಹೊಸ ವರ್ಷದಲ್ಲಿ ದ್ವಾದಶ ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
2024 ಹಣಕಾಸಿನ ವಿಷಯದಲ್ಲಿ ನಿಮಗೆ ಮಿಶ್ರಫಲ. ಹೊಸ ವರ್ಷದಲ್ಲಿ ಕೆಲ ಆರ್ಥಿಕ ಸವಾಲುಗಳನ್ನುಎದುರಿಸಬೇಕಾಗಬಹುದು. ಆದಷ್ಟು ಮಿತ ಖರ್ಚು ಮಾಡುವುದು ಒಳ್ಳೆಯದು. ನಿಮ್ಮ ಪೂರ್ವಜರ ಯಾವುದೇ ಆಸ್ತಿಯನ್ನು ನೀವು ಮಾರಾಟ ಮಾಡಲು ಬಯಸಿದರೆ, ಆತುರದಿಂದ ಏನನ್ನೂ ಮಾಡಬೇಡಿ. ನ್ಯಾಯಾಲದ ಪ್ರಕರಣಗಳಲ್ಲಿ ಎಚ್ಚರವಹಿಸಿ.

Finance Horoscope 2024

ವೃಷಭ ರಾಶಿ
2024 ವೃಷಭ ರಾಶಿಯವರಿಗೆ ಮಿಶ್ರಫಲ, ಹೊಸ ವರ್ಷದಲ್ಲಿ ಆದಾಯ ಚೆನ್ನಾಗಿರಲಿದೆ. ಆದರೆ ಈ ಅವಧಿಯಲ್ಲಿ ಖರ್ಚು ಕೂಡ ಅಧಿಕವಿರಲಿದೆ. ಈ ವರ್ಷ ಯಾವುದೇ ದೊಡ್ಡ ಹಣಕಾಸಿನ ವಹಿವಾಟು ಮಾಡುವಾಗ ಹೆಚ್ಚು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗುವುದು. ಆರ್ಥಿಕ ದೃಷ್ಟಿಯಿಂದ ಮೇ ತಿಂಗಳುನಿಮಗೆ ಉತ್ತಮವಾಗಿದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಿ.

ಮಿಥುನ ರಾಶಿ
2024 ವರ್ಷವು ಹಣಕಾಸಿನ ದೃಷ್ಟಿಯಿಂದ ನೋಡುವುದಾದೆ ಈ ವರ್ಷವು ಏರಿಳಿತಗಳಿಂದ ಕೂಡಿರಲಿದೆ. ಈ ವರ್ಷ ಖರ್ಚು ಅಧಿಕವಾಗಿರಲಿದೆ. ಆದರೆ ಗುರುವಿನ ಕೃಪೆಯಿಂದ ಹಣದ ಸಮಸ್ಯೆ ಕಡಿಮೆಯಾಗಲಿದೆ. ಆಗಸ್ಟ್‌ನಿಂದ, ನಿಮ್ಮ ಹಣಕಾಸಿನ ಸ್ಥಿತಿ ಮತ್ತೆ ಚೆನ್ನಾಗಿರಲಿದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ 2024ರಲ್ಲಿ ಹಣಕಾಸಿನ ವಿಷಯದಲ್ಲಿ ಮಿಶ್ರಫಲ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಖರ್ಚುಗಳು ಅಧಿಕವಿರುವುದರಿಂದ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುವುದು. ವರ್ಷದ ಆರಂಭವು ನಿಮಗೆ ಉತ್ತಮವಾಗಿರುತ್ತದೆ, ನಂತರ ಖರ್ಚುಗಳು ತುಂಬಾನೇ ಹೆಚ್ಚಾಗುವುದರಿಂದ ತುಂಬಾನೇ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುವುದು.

ಸಿಂಹ ರಾಶಿ
ಸಿಂಹ ರಾಶಿಯವರು 2024ರಲ್ಲಿ ಖರ್ಚುಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಮಿತಿಮೀರಿ ಖರ್ಚು ಮಾಡಿದರೆ ಆರ್ಥಿಕ ಸಮಸ್ಯೆ ಎದುರಾಗುವುದು. ಆಗಸ್ಟ್ ತಿಂಗಳು ನಿಮಗೆ ಹಣದ ವಿಷಯದಲ್ಲಿ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ, ನೀವು ಹಣಕಾಸಿನ ಲಾಭವನ್ನು ಪಡೆಯಬಹುದು. ಮುಂಬರುವ ಸಮಸ್ಯೆಗಳನ್ನು ತಪ್ಪಿಸಲು ನೀವು ಬಯಸಿದರೆ, ನಿಮ್ಮ ನಿರ್ಧಾರಗಳನ್ನು ನೀವು ಬಹಳ ಆ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ.

ಕನ್ಯಾರಾಶಿ
2024ರಲ್ಲಿ ನೀವು ಆದಾಯ ಹಾಗೂ ಖರ್ಚುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೂಡಿಕೆ ಮಾಡುವ ವಿಚಾರದಲ್ಲಿ ತುಂಬಾನೇ ಜಾಗ್ರತೆವಹಿಸಿ, ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡ ಬಳಿಕವಷ್ಟೇ ಹೂಡಿಕೆ ಮಾಡಿ. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀವು ನಿರ್ಧಾರಗಳನ್ನು ತೆಗೆದುಕೊಂಡರೆ ಉತ್ತಮವಾಗಿರುತ್ತದೆ. ನೀವು ಸಾಲದ ವಹಿವಾಟುಗಳನ್ನು ಸಹ ತಪ್ಪಿಸಬೇಕು. ಈ ವರ್ಷ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.

ತುಲಾ ರಾಶಿ
2024 ತುಲಾ ರಾಶಿಯವರಿಗೆ ಆರ್ಥಿಕ ವಿಷಯದಲ್ಲಿ ತುಂಬಾ ಒಳ್ಳೆಯದು.ಈ ವರ್ಷ ಆರ್ಥಿಕ ಲಾಭ ದೊರೆಯಲಿದೆ. ಮಾರ್ಚ್ ನಿಂದ ಆಗಸ್ಟ್ ವರೆಗಿನ ಸಮಯವು ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಹಣ ಸಂಪಾದಿಸಲು ಇದು ನಿಮಗೆ ಉತ್ತಮ ಅವಕಾಶ ಸಿಗಲಿದೆ. ಉದ್ಯೋಗಿಗಳ ಆದಾಯದಲ್ಲಿ ಹೆಚ್ಚಳವಾಗುವ ಬಲವಾದ ಸಾಧ್ಯತೆಯಿದೆ. 2024ರಲ್ಲಿ ಸಾಲವನ್ನು ತೀರಿಸಲು ಸಾಧ್ಯವಾಗುವುದು.

ವೃಶ್ಚಿಕ ರಾಶಿ
ನೀವು 2024ರಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಣಬಹುದು. ವರ್ಷದ ಪ್ರಾರಂಭದಲ್ಲಿ ಕೆಲವು ಸವಾಲುಗಳಿವೆ. ಈ ಅವಧಿಯಲ್ಲಿ ಖರ್ಚು ಕಡಿಮೆ ಮಾಡಬೇಕು. ಕ್ರಮೇಣ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಾಧ್ಯವಾಗುವುದು. ಗುರು ಕೃಪೆಯಿಂದಾಗಿ ಆರ್ಥಿಕ ಲಾಭ ಪಡೆಯುವಿರಿ.

ಧನು ರಾಶಿ
ಹಣದ ವಿಷಯದಲ್ಲಿ ವರ್ಷದ ಮೊದಲಾರ್ಧವು ಹೆಚ್ಚು ಅನುಕೂಲಕರವಾಗಿರುತ್ತದೆ. ಉತ್ತರಾರ್ಧದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ಹಣಕಾಸಿನ ಸಮಸ್ಯೆ ದೂರಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮೇ ತಿಂಗಳ ಆರಂಭದಲ್ಲಿ ಗುರುವು ನಿಮ್ಮ ಆರನೇ ಮನೆಗೆ ಬಂದಾಗ, ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ, ನಿಮ್ಮ ಆರ್ಥಿಕ ಸ್ಥಿತಿಗೆ ಉತ್ತಮವಾಗಿಲ್ಲ. ಈ ವರ್ಷ ನೀವು ನಿಮ್ಮ ಆದಾಯ ಮತ್ತು ನಿಮ್ಮ ಖರ್ಚುಗಳ ನಡುವೆ ಹಣಕಾಸಿನ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಮಕರ ರಾಶಿ
2024 ಹಣದ ವಿಷಯದಲ್ಲಿ ಈ ವರ್ಷ ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ವರ್ಷ ಹಣದ ಉಳಿತಾಯ ಮಾಡಲು ಸಾಧ್ಯವಾಗುವುದು. ಫೆಬ್ರವರಿವರೆಗೆ ಸ್ವಲ್ಪ ಖರ್ಚು ಇರಲಿದೆ, ನಂತರದ ದಿನಗಳಲ್ಲಿ ಖರ್ಚುಗಳು ಕಡಿಮೆಯಾಗಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು.

ಕುಂಭ ರಾಶಿ
2024 ಕುಂಭ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಒಳ್ಳೆಯದಿದೆ, ಈ ವರ್ಷ ನೀವು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ಆ ನಿರ್ಧಾರ ನಿಮಗೆ ಅನುಕೂಲಕರವಾಗಿಲ್ಲ. ಮಾರ್ಚ್ ತಿಂಗಳಲ್ಲಿ ಹಣಕಾಸಿನಲ್ಲಿ ಏರಳಿತವಿರಲಿದೆ, ಖರ್ಚು ಹೆಚ್ಚಾಗಲಿದೆ, ಆದರೆ ಆದಾಯ ಚೆನ್ನಾಗಿ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮಿತಿಯಲ್ಲಿ ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರಲ್ಲ. ಆರ್ಥಿಕ ಸ್ಥಿರತೆ ಇರಲಿದೆ.

ಮೀನ ರಾಶಿ
ಮೀನ ರಾಶಿಯವರಿಗೆ 2024ರಲ್ಲಿ ಆರ್ಥಿಕವಾಗಿ ಏರಳಿತಗಳಿರಲಿದೆ. ಈ ವರ್ಷ ಖರ್ಚುಗಳು ಅಧಿಕವಿರಲಿದೆ. ಆದ್ದರಿಂದ ನೀವು ನಿಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವತ್ತ ಗಮನ ಹರಿಸಬೇಕು. ವರ್ಷದ ಮಧ್ಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ಆಗಸ್ಟ್‌ನಿಂದ, ನಿಮ್ಮ ಹಣಕಾಸಿನ ಸ್ಥಿತಿ ಮತ್ತೆ ಚೆನ್ನಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Finance Horoscope 2024: How Will 2024 For 12 Zodiac Signs In Finance In Kannada

Finance Horoscope 2024: Here are 12 zodiac signs Finance horoscope 2024, read on...
Story first published: Thursday, December 21, 2023, 13:19 [IST]
X
Desktop Bottom Promotion