Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಫೆಬ್ರವರಿ ಮಾಸದಲ್ಲಿರುವ ಈ ಪ್ರಮುಖ ಗ್ರಹಗಳ ಸಂಚಾರ ಈ 5 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ
2025ರ ಒಂದು ತಿಂಗಳು ಮುಗಿದ ಹೋಯ್ತು, ಹೊಸದೊಂದು ತಿಂಗಳು ಶುರುವಾಗಿದೆ, ವೈದಿಕ ಶಾಸ್ತ್ರದಲ್ಲಿ ಈ ತಿಂಗಳು ಕೆಲ ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈ ಮಾಸ ಬುಧನು ಕುಂಭ ರಾಶಿಗೆ ಸಂಚರಿಸಲಿದೆ, ಸೂರ್ಯನು ಫೆಬ್ರವರಿ 12ಕ್ಕೆ ಕುಂಭ ರಾಶಿಗೆ ಸಂಚರಿಸಲಿದೆ. ಶುಕ್ರನು ಫೆಬ್ರವರಿಯಲ್ಲಿ ಮೀನ ರಾಶಿಯಲ್ಲಿಯೇ ಇರಲಿದೆ. ಫೆಬ್ರವರಿ 27ಕ್ಕೆ ಶನಿಯು ಅಸ್ತವಾಗಲಿದೆ.
ಇನ್ನು ಗುರು ವೃಷಭದಲ್ಲಿಯೇ ಇರಲಿದೆ, ಶನಿಯು ಕುಂಭರಾಶಿಯಲ್ಲಿ ಇರಲಿದೆ, ರಾಹು ಮತ್ತು ಕೇತು ಕ್ರಮವಾಗಿ ಮೀನ ಮತ್ತು ಕನ್ಯಾ ರಾಶಿಯಲ್ಲಿದೆ,ಈ ಎಲ್ಲಾ ಗ್ರಹಗಳ ಸ್ಥಾನದಿಂದಾಗಿ ಫೆಬ್ರವರಿ ಮಾಸ ಈ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿದೆ:

ಮೇಷ ರಾಶಿ:
ಫೆಬ್ರವರಿ ಮಾಸ ಮೇಷ ರಾಶಿಯವರಿಗೆ ಅದ್ಭುತವಾಗಿರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಕೆಲಸದ ಬದಲಾವಣೆಗೆ ಪ್ರಯತ್ನಿಸಿದರೆ ಅಥವಾ ವೃತ್ತಿ ಬದುಕಿನಲ್ಲಿ ಬಡ್ತಿಗಾಗಿ ನಿರೀಕ್ಷೆ ಮಾಡುತ್ತಿದ್ದರೆ ಈ ಅವಧಿ ತುಂಬಾ ಉತ್ತಮವಾಗಿರಲಿದೆ.
ಈ ಮಾಸ ವಿದ್ಯಾರ್ಥಿಗಳಿಗೆ ತುಂಬಾನೇ ಚೆನ್ನಾಗಿರಲಿದೆ. ನಿಮಗೆ ಓದಿನ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಲಿದೆ. ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ. ವ್ಯಾಪಾರಸ್ಥರು ಈ ಮಾಸ ಹೆಚ್ಚಿನ ಲಾಭ ಕಾಣಬಹುದು. ಇನ್ನು ಈ ಮಾಸದಲ್ಲಿ ಧಾರ್ಮಿಕ ಒಲವು ಕೂಡ ಹೆಚ್ಚಾಗಲಿದೆ. ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಬಹುದು. ಆರ್ಥಿಕ ಪ್ರಯೋಜನ ಪಡೆಯುತ್ತೀರಿ, ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ 2025 ತುಂಬಾ ಉತ್ತಮವಾಗಿದೆ, ಈ ಅವಧಿಯಲ್ಲಿ ಅಪೂರ್ಣವಾಗಿ ಬಿಟ್ಟಿದ್ದ ಕೆಲಸ ಕಾರ್ಯಗಳು ಪೂರ್ಣವಾಗಲಿದೆ. ಈ ಅ ಅವಧಿಯಲ್ಲಿ ಹೊಸ ಕೆಲಸಕ್ಕೆ ಪ್ರಯತ್ನ ಮಾಡಿದರೆ ಶುಭ ಸುದ್ದಿ ದೊರೆಯಲಿದೆ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣಬಹುದು, ಇದರಿಂದ ಲಾಭ ಗಳಿಸುತ್ತೀರಿ, ಹಣದ ಉಳಿತಾಯವಾಗಲಿದೆ, ಹೂಡಿಕೆಯಿಂದ ಲಾಭ ದೊರೆಯಲಿದೆ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲಿದೆ. ಇನ್ನು ಅವಾಹಿತರು ಮದುವೆ ಸಂಬಂಧ ನೋಡುತ್ತಿದ್ದರೆ ಈ ಮಾಸದಲ್ಲಿ ಉತ್ತಮ ಸಂಬಂಧ ಕೂಡಿ ಬರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಮಾಸ ನಿಮಗೆ ಅನುಕೂಲಕರವಾಗಿದೆ.
ಕರ್ಕ ರಾಶಿ
ಫೆಬ್ರವರಿ ಮಾಸ ಕರ್ಕ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ, ಈ ಮಾಸ ಶತ್ರುಗಳ ವಿರುದ್ಧ ನಿಮಗೆ ಜಯ ಸಿಗಲಿದೆ. ಈ ಮಾಸ ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದು. ಇನ್ನು ಬರಹ, ಕಲೆ ಮುಂತಾದ ಸೃಜನಾತ್ಮಕ ಕ್ಷೇತ್ರದಲ್ಲಿರುವವರು ಹೆಚ್ಚಿನ ಖ್ಯಾತಿ ಗಳಿಸುತ್ತೀರಿ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ,ಕುಟುಂಬ ಜೀವನ ಚೆನ್ನಾಗಿರಲಿದೆ.
ಸಿಂಹ ರಾಶಿ
ಫೆಬ್ರವರಿ ಮಾಸ ಸಿಂಹ ರಾಶಿಯವರಿಗೆ ತುಂಬಾನೇ ಉತ್ತಮವಾಗಿರಲಿದೆ, ಮಕ್ಕಳ ಸಂಬಂಧಿತ ಸಮಸ್ಯೆ ಬಗೆಹರಿಯಲಿದೆ. ಈ ಅವಧಿಯಲ್ಲಿ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ, ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಪ್ರೀತಿ, ಇರಲಿದೆ. ಹೂಡಿಕೆಯಿಂದ ಲಾಭ ಗಳಿಸುತ್ತೀರಿ.
ಕುಂಭ ರಾಶಿ
ಈ ಗ್ರಹಗಳ ಸಂಚಾರ ಕುಂಭ ರಾಶಿಯವರಿಗೆ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಏನಾದರು ಹೊಸ ಉದ್ಯಮ ಪ್ರಾರಂಭಿಸುವುದಾದರೆ ಅದಕ್ಕೆ ಈ ಅವಧಿ ತುಂಬಾ ಉತ್ತಮವಾಗಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ಈ ಮಾಸ ಹಣಕಾಸಿನ ವಿಚಾರದಲ್ಲಿ ತುಂಬಾನೇ ಉತ್ತಮವಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











