ಮಾಸಿಕ ಭವಿಷ್ಯ: ಫೆಬ್ರವರಿ ಮಾಸ 12 ರಾಶಿಗಳಿಗೆ ಹೇಗಿರಲಿದೆ?

ವೈದಿಕಶಾಸ್ತ್ರದ ಪ್ರಕಾರ ಫೆಬ್ರವರಿ ಮಾಸ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ
ಈ ತಿಂಗಳು ನಿಮಗೆ ಏರಳಿತಗಳಿಂದ ಕೂಡಿರಲಿದೆ. ಕುಟುಂಬದಲ್ಲಿ ಕೆಲ ಸಮಸ್ಯೆಗಳು ಬರಬಹುದು, ತಿಂಗಳ ಮೊದಲ ವಾರ ಕೆಲಸದಲ್ಲಿ ಒತ್ತಡವಿರಬಹುದು. ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ಸಂಬಳದಲ್ಲಿ ಹೆಚ್ಚಳವಾಗಬಹುದು. ವ್ಯಾಪಾರಸ್ಥರು ವ್ಯವಹಾರದಲ್ಲಿ ಏರಳಿತವನ್ನು ಅನುಭವಿಸಬಹುದು. ಖರ್ಚು ಅಧಿಕವಿರಲಿದೆ. ಆರೋಗ್ಯದ ವಿಷಯದಲ್ಲಿ ಈ ಮಾಸ ಸರಾಸರಿಯಾಗಿರಲಿದೆ. ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ಅದನ್ನು ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ.

February Month Horoscope

ವೃಷಭ ರಾಶಿ
ಹಣದ ವಿಷಯದಲ್ಲಿ ಫೆಬ್ರವರಿ ಮಾಸ ನಿಮಗೆ ಅನುಕೂಲಕರವಾಗಿದೆ, ಕೆಲಸದಲ್ಲಿ ಫೆಬ್ರವರಿ ಮಾಸದ ಆರಂಭದಲ್ಲಿ ತುಂಬಾ ಓಡಾಟವಿರಬಹುದು. ನೀವು ಕುಟುಂಬದ ಜೊತೆಗೆ ಟ್ರಿಪ್‌ ಹೋಗಲು ಪ್ಲ್ಯಾನ್ ಮಾಡಬಹುದು. ಕುಟುಂಬ ಜೀವನದಲ್ಲಿ ಸಂತೋಷ ಸಡಗರ ಇರಲಿದೆ. ನೀವು ಆಸ್ತಿಗೆ ಹೂಡಿಕೆ ಮಾಡಲು ಬಯಸಿದ್ದರೆ ಈ ಅವಧಿ ಅನುಕೂಲಕರವಾಗಿದೆ, ಇನ್ನು ವಾಹನ ಖರೀದಿಸಲು ಪ್ರಯತ್ನ ಮಾಡುತ್ತಿದ್ದರೆ ಈ ಫೆಬ್ರವರಿ ಮಾಸ ನಿಮಗೆ ತುಂಬಾನೇ ಅನುಕೂಲಕರವಾಗಿದೆ.

ಮಿಥುನ ರಾಶಿ
ಈ ಮಾಸ ನಿಮಗೆ ತುಂಬಾ ಚೆನ್ನಾಗಿರಲಿದೆ, ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರ್ಥಿಕವಾಗಿ ಈ ಅವಧಿ ತುಂಬಾನೇ ಉತ್ತಮವಗಿರಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಬೇಕೆಂದಿದ್ದರೆ ಅದಕ್ಕೆ ಈ ಸಮಯ ತುಂಬಾನೇ ಅನುಕೂಲಕರವಾಗಿದೆ. ಇನ್ನು ಈ ಅವಧಿಯಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣಗೊಳ್ಳಲಿದೆ.

ಕರ್ಕ ರಾಶಿ
ಈ ಮಾಸ ನೀವು ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಬೇಕು, ಅಲ್ಲದೆ ಈ ಸಮಯದಲ್ಲಿ ನೀವು ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕುಟುಂಬದ ಸದಸ್ಯರ ನಡುವೆ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು, ಆದರೆ ಎಲ್ಲವನ್ನು ಸಮಧಾನದಿಂದ ಬಗೆಹರಿಸಲು ಸಲಹೆ ನೀಡಲಾಗುವುದು. ತಿಂಗಳ ಮಧ್ಯದಿಂದ ಪರಿಸ್ಥಿತಿ ಹತೋಟಿಗೆ ಬರಲಿದೆ. ಈ ಮಾಸ ಕೆಲಸದ ನಿಮಿತ್ತ ಪ್ರಯಾಣ ಮಾಡಬಹುದು. ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.

ಸಿಂಹ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ಮಾಸ ನಿಮಗೆ ಅನುಕೂಲಕರವಾಗಿದೆ. ಕೆಲಸದಲ್ಲಿ ನಿಮ್ಮ ಶ್ರಮವನ್ನು ಮೆಚ್ಚಿಕೊಳ್ಳಲಾಗುವುದು. ಕೌಟುಂಬಿಕ ಬದುಕಿನಲ್ಲಿ ಕೆಲ ಸಮಸ್ಯೆಗಳಿರಬಹುದು, ಅವುಗಳನ್ನು ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ. ಈ ಮಾಸ ದೊಡ್ಡ ಹೂಡಿಕೆ ಮಾಡಬಹುದು. ಕುಟುಂಬದ ಜೊತೆಗೆ ಟ್ರಿಪ್‌ಗೆ ಪ್ಲ್ಯಾನ್‌ ಮಾಡಬಹುದು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡದಿರಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಮಾಸ ಉತ್ತಮವಾಗಿರಲಿದೆ, ಪ್ರಮುಖ ಕೆಲಸ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ. ಆರ್ಥಿಕ ದೃಷ್ಟಿಯಿಂದೂ ಫೆಬ್ರವರಿ ಮಾಸ ಉತ್ತಮವಾಗಿರಲಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಈ ತಿಂಗಳು ವಿಶೇಷವಾಗಿರಲಿದೆ. ಕೆಲಸದಲ್ಲಿ ನೀವು ಬಯಸಿದ ಯಶಸ್ಸು ಪಡೆಯಲು ಸಾಧ್ಯವಾಗಲಿದೆ. ಕುಟುಂಬದ ಜೀವನ ಕೂಡ ಚೆನ್ನಾಗಿರಲಿದೆ, ಆಸ್ತಿ ಸಂಬಂಧಿಸಿದ ವಿವಾದವಿದ್ದರೆ ಅದು ಬಗೆಹರಿಯಲಿದೆ. ಆದರೆ ವೈವಾಹಿಕ ಬದುಕಿನ ಕಡೆಗೆ ಗಮನಹರಿಸಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಬಗೆಹರಿಸಲು ಪ್ರಯತ್ನ ಹಾಕಿ, ಚಿಕ್ಕ ಸಮಸ್ಯೆ ದೊಡ್ಡದಾಗಲು ಅವಕಾಶ ನೀಡಬೇಡಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರು ಈ ಅವಧಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ, ಕುಟುಂಬ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರಲಿದೆ, ಉಳಿತಾಯ ಮಾಡಲು ಸಾಧ್ಯವಾಗಲಿದೆ.

ಧನು ರಾಶಿ
ಈ ಮಾಸ ನೀವು ಮಾನಸಿಕ ಒತ್ತಡ ಕಡಿಮೆ ಮಾಡುವುದರ ಕಡೆಗೆ ಗಮನಹರಿಸಿ, ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ನೀವು ಯಾರನ್ನೇ ಆಗಲಿ ಕುರುಡಾಗಿ ನಂಬಬೇಡಿ ಎಂದು ಸಲಹೆ ನೀಡಲಾಗುವುದು. ವ್ಯಾಪಾರಸ್ಥರು ಲಾಭ ಗಳಿಸಲು ಸಾಧ್ಯವಾಗಲಿದೆ.

ಮಕರ ರಾಶಿ
ಈ ಮಾಸ ನಿಮಗೆ ಶುಭವಾಗಿದೆ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ, ಏನಾದರು ಸಮಸ್ಯೆಯಿದ್ದರೆ ಬಗೆಹರಿಯಲಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ವಾಹನ ಖರೀದಿ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಫೆಬ್ರವರಿ ಮಾಸ ಅನುಕೂಲಕರವಾಗಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಈ ಸಮಯ ನಮಗೆ ಉತ್ತಮವಾಗಿದೆ. ವಾಹನ ಖರೀದಿಸಬೇಕೆಂದಿದ್ದರೆ ಅವರ ಆಸೆ ನೆರವೇರಲಿದೆ. ಆರ್ಥಿಕ ದೃಷ್ಟಿಯಿಂದ ಈ ಸಮಯ ನಿಮಗೆ ಅನುಕೂಲಕರವಾಗಿದೆ.

ಮೀನ ರಾಶಿ
ಈ ದಿನ ನಿಮಗೆ ತುಂಬಾ ಉತ್ತಮವಾಗಿರಲಿದೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫ ದೊರೆಯಲಿದೆ, ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು, ಸಮಸ್ಯೆ ದೊಡ್ಡದು ಮಾಡದೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

February Month Horoscope For 12 Zodiac Signs In Kannada

Here is February Month Horoscope for 12 zodiac signs, read on..
Story first published: Friday, January 31, 2025, 20:57 [IST]
X
Desktop Bottom Promotion